ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಿಚನ್‌ಗೇ ಎಂಟ್ರಿ ಕೊಟ್ಟ ಸಿಂಹ; ಭಯಾನಕ ವಿಡಿಯೊ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ!

ಇತ್ತೀಚೆಗೆ ಗುಜರಾತ್‍ನ ಅಮ್ರೇಲಿಯ ಕೊವಾಯಾ ಗ್ರಾಮದಲ್ಲಿ ಸಿಂಹವೊಂದು ಹಮೀರ್ಭಾಯ್ ಲಖನೋತ್ರ ಎಂಬುವವನ ಮನೆಗೆ ನುಗ್ಗಿ ಅಡುಗೆಮನೆಯ ಗೋಡೆಗಳ ಮೇಲೆ ಹತ್ತಿ ಮನೆಯವರನ್ನು ಭಯಭೀತಗೊಳಿಸಿದೆ. 12-13 ಅಡಿಯ ಅಡುಗೆ ಮನೆಯ ಗೋಡೆಯ ಮೇಲೆ ಕುಳಿತಿರುವ ಸಿಂಹ ಮನೆಯೊಳಗೆ ಇಣುಕಿ ನೋಡಿದ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

ಕಿಚನ್‌ಗೇ ಎಂಟ್ರಿ ಕೊಟ್ಟ ಸಿಂಹ- ಶಾಕಿಂಗ್‌ ವಿಡಿಯೊ ಇಲ್ಲಿದೆ

Profile pavithra Apr 4, 2025 3:55 PM

ಗಾಂಧಿನಗರ: ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಹಳ್ಳಿಗಳಿಗೆ ನುಗ್ಗಿ ಗ್ರಾಮದ ಜನರಿಗೆ ತೊಂದರೆಯನ್ನುಂಟು ಮಾಡಿದ ಘಟನೆಗಳು ಸಾಕಷ್ಟು ನಡೆದಿತ್ತು. ಇದೀಗ ಗುಜರಾತ್‍ನ ಅಮ್ರೇಲಿಯಲ್ಲಿ ಸಿಂಹವೊಂದು ಹಳ್ಳಿಯ ಮನೆಯೊಂದಕ್ಕೆ ನುಗ್ಗಿ ಅಡುಗೆಮನೆಯ ಗೋಡೆಗಳ ಮೇಲೆ ಹತ್ತಿ ಕುಳಿತು ಮನೆಯವರನ್ನು ಹೆದರಿಸಿದ ಘಟನೆಯೊಂದು ನಡೆದಿದೆ. 12-13 ಅಡಿಯ ಅಡುಗೆ ಗೋಡೆಯ ಮೇಲೆ ಕುಳಿತಿರುವ ಸಿಂಹ ಮನೆಯೊಳಗೆ ಇಣುಕಿ ನೋಡಿದ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಮೊದಲಿಗೆ ಮನೆಯವರು ಮಸುಕಾದ ಬೆಳಕಿನಲ್ಲಿ ದೊಡ್ಡ ಬೆಕ್ಕು ಮನೆಯೊಳಗೆ ಬಂದಿರಬಹುದೆಂದು ಭಾವಿಸಿದ್ದರು. ಆದರೆ ಅದರ ಘರ್ಜನೆಯನ್ನು ಕೇಳಿದ ನಂತರ ಎಲ್ಲರೂ ಭಯಭೀತರಾಗಿದ್ದಾರೆ.

ಸಿಂಹವು ಗುಜರಾತ್‍ನ ಕೊವಾಯಾ ಗ್ರಾಮದಲ್ಲಿ ಹಮೀರ್ಭಾಯ್ ಲಖನೋತ್ರ ಎಂಬ ವ್ಯಕ್ತಿಯ ಮನೆಯೊಳಗೆ ಅಡಗಿ ಕುಳಿತಿತ್ತು. ಈ ಆಘಾತಕಾರಿ ಘಟನೆಯನ್ನು ಅಲ್ಲಿದ್ದವರು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ವರದಿಗಳ ಪ್ರಕಾರ, ಸಿಂಹವು ಹತ್ತಿರದ ಕಾಡಿನಿಂದ ತಪ್ಪಿಸಿಕೊಂಡು ಆ ಪ್ರದೇಶದ ಸುತ್ತಲೂ ಅಲೆದಾಡಿ ಕೊನೆಗೆ ಲಖನೋತ್ರಾ ಅಡುಗೆಮನೆಯೊಳಗೆ ನುಸುಳಿದೆ ಎನ್ನಲಾಗಿದೆ. ಸಿಂಹವು ದಾಳಿ ಮಾಡಬಹುದು ಎಂಬ ಭಯದಿಂದ, ಕುಟುಂಬ ಸದಸ್ಯರು ಸಿಂಹ ಅಲ್ಲಿಂದ ಹೋಗುವವರೆಗೂ ಮನೆಯ ಹೊರಗೆ ಉಳಿದುಕೊಂಡಿದ್ದಾರೆ. ನಡೆದ ಘಟನೆಯಲ್ಲಿ ಸಿಂಹ ಯಾರಿಗೂ ಹಾನಿ ಮಾಡಿದೆ ಸ್ವಲ್ಪ ಸಮಯದ ನಂತರ ಅಲ್ಲಿಂದ ಹೊರಟು ಹೋಗಿದೆ ಎನ್ನಲಾಗಿದೆ.

ಅಡುಗೆಯ ಮನೆಯ ಗೋಡೆ ಹತ್ತಿ ಕುಳಿತ ಸಿಂಹದ ವಿಡಿಯೊ ಇಲ್ಲಿದೆ ನೋಡಿ...

ಮತ್ತೊಂದು ವಿಡಿಯೊದಲ್ಲಿ, ಸಿಂಹವು ಸ್ಥಳೀಯ ದೇವಾಲಯದ ಬಳಿ ಅಲೆದಾಡುತ್ತಿರುವುದು ಕಂಡುಬಂದಿದೆ. ಗುಜರಾತ್‍ನ ಅಮ್ರೇಲಿಯ ಲಕ್ಷ್ಮಿನಾರಾಯಣ ದೇವಾಲಯದ ಪಕ್ಕದಲ್ಲಿ ಸಿಂಹ ಮುಕ್ತವಾಗಿ ತಿರುಗಾಡಿದ್ದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆದರೆ ಈ ವಿಡಿಯೊವನ್ನು ಮೂಲತಃ ಒಂದು ವರ್ಷದ ಹಿಂದೆ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಕೋರ್ಟ್‌ ಹೊರಗೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆಯರು; ಕಾರಣವೇನು? ಈ ವಿಡಿಯೊ ನೋಡಿ

ಸಿಂಹಗಳು ಅಮ್ರೇಲಿಯ ಗ್ರಾಮಗಳಿಗೆ ನುಗ್ಗಿದ ಘಟನೆ ಈ ಹಿಂದೆ ಕೂಡ ವರದಿಯಾಗಿತ್ತು. ಅಮ್ರೇಲಿಯ ಹಳ್ಳಿಗಳಲ್ಲಿ, ರಾತ್ರಿಗಳು ಹೆಚ್ಚಾಗಿ ವಿಚಿತ್ರ ಶಬ್ದಗಳು ಕೇಳಿಬರುತ್ತಿತ್ತು. ಹಳ್ಳಿಯವರು ಕಳ್ಳರು ನುಗ್ಗಿರಬಹುದು ಎಂದು ಭಾವಿಸಿದ್ದರು. ಆದರೆ ಕೊನೆಗೆ ಅದು ಸಿಂಹಗಳು ಎಂಬುದಾಗಿ ತಿಳಿದುಬಂದಿತ್ತು. ರಾಜುಲಾ ತಾಲ್ಲೂಕಿನ ಕೊವಯಾ ಗ್ರಾಮದಲ್ಲಿ ಮೂರರಿಂದ ನಾಲ್ಕು ಸಿಂಹಗಳು ಸುರೇಶ್ ಅಗ್ರವತ್ ಎಂಬುವವರ ಮನೆಗೆ ಪ್ರವೇಶಿಸಿ ಗಲಾಟೆ ಮಾಡಿಕೊಂಡಿದ್ದು ಆ ಮನೆಯ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರನ್ನು ಎಚ್ಚರಿಸಿತ್ತು. ಅವರು ಸಿಂಹದ ಚಲನೆಯನ್ನು ತಮ್ಮ ಮೊಬೈಲ್ ಫೋನ್‍ಗಳಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.