Tumkur News: ಅಂಗನವಾಡಿಯಲ್ಲಿ ವಿತರಿಸಿದ ಆಹಾರದಲ್ಲಿ ಹುಳ ಪತ್ತೆ
ಪಾವಗಡ ಪಟ್ಟಣದ ಶಿರಾ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಗುರುವಾರ (ಏ. 10) ಬೆಳಗ್ಗೆ ಬಾಣಂತಿಗೆ ವಿತರಿಸಲಾದ ಆಹಾರ ಪ್ಯಾಕೆಟ್‌ನಲ್ಲಿ ಹುಳ ಕಂಡು ಬಂದಿದೆ. ಮಿಲ್ಲೆಟ್ ಲಡ್ಡು ಪ್ಯಾಕೆಟ್ ತೆರೆದು ನೋಡಿದಾಗ ಹುಳ ಕಂಡು ಬಂದಿದ್ದು, ಬಾಣಂತಿ ಬೆಚ್ಚಿ ಬಿದ್ದಿದ್ದಾರೆ.


ತುಮಕೂರು: ಗರ್ಭಿಣಿಯರು ಮತ್ತು ಬಾಣಂತಿಯರ ದೇಹಸ್ಥಿತಿ ಸೂಕ್ಷ್ಮವಾಗಿರುವುದರಿಂದ ಅವರು ಸೇವಿಸುವ ಆಹಾರ ಆರೋಗ್ಯಪೂರ್ಣವಾಗಿರಬೇಕು ಎನ್ನುತ್ತಾರೆ ತಜ್ಞರು. ಅದೇ ಕಾರಣಕ್ಕೆ ಸರ್ಕಾರ ಅವರಿಗೆ ಅಂಗನವಾಡಿ ಮೂಲಕ ಪೋಷಕಾಂಶಯುಕ್ತ ಆಹಾರ ಒದಗಿಸುತ್ತಿದೆ. ಆದರೆ ಪಾವಗಡ ಪಟ್ಟಣದ ಶಿರಾ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಗುರುವಾರ (ಏ. 10) ಬೆಳಗ್ಗೆ ಬಾಣಂತಿಗೆ ವಿತರಿಸಲಾದ ಆಹಾರ ಪ್ಯಾಕೆಟ್‌ನಲ್ಲಿ ಹುಳ ಕಂಡು ಬಂದಿದೆ (Tumkur News). ಮಿಲೆಟ್ ಲಡ್ಡು ಪ್ಯಾಕೆಟ್ ತೆರೆದು ನೋಡಿದಾಗ ಹುಳ ಕಂಡು ಬಂದಿದ್ದು, ಬಾಣಂತಿ ಬೆಚ್ಚಿ ಬಿದ್ದಿದ್ದಾರೆ. ಕೆಲವೇ ದಿನಗಳ ಹಿಂದೆ ಕೆಲವು ಅಂಗನವಾಡಿ ಕೇಂದ್ರದ ಆಹಾರದಲ್ಲಿ ಹುಳ ಕಂಡುಬಂದಿದ್ದು, ಇದೀಗ ಅಂತಹದ್ದೇ ಘಟನೆ ಪುನರಾವರ್ತನೆಯಾಗಿದೆ.
ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ನೀಡುವ ಆಹಾರ ಪದಾರ್ಥದ ತೂಕದಲ್ಲೂ ವ್ಯತ್ಯಾಸ ಆಗುತ್ತಿರುವ ಬಗ್ಗೆ ಇತ್ತೀಚೆಗೆ ವಿಶ್ವವಾಣಿ ಟಿವಿ ವರದಿ ಮಾಡಿತ್ತು. ಇದು ಭಾರಿ ಸಂಚಲ ಮೂಡಿಸಿತ್ತು. ಪದೇ ಪದೆ ಅಂಗನವಾಡಿಗಳಲ್ಲಿ ಸಮಸ್ಯೆ ಕಂಡು ಬರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಪಟ್ಟಣದಲ್ಲಿ ಇಂತಹ ಘಟನೆಗಳು ಆಗಾಗ ಸಂಭವಿಸುತ್ತಿದ್ದಾರೂ ಅದಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ದೂರು ಕೇಳಿ ಬಂದಿದೆ. ತಾಲೂಕಿನ ವಿವಿಧೆಡೆಗಳ ಅಂಗನವಾಡಿ ಕೇಂದ್ರಗಳ ಆಹಾರದಲ್ಲಿ ಹುಳ ಕಂಡು ಬಂದು ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈಗಾಗಲೇ ಕೆಲವು ಪೋಷಕರು ದೂರನ್ನೂ ಸಲ್ಲಿಸಿದ್ದಾರೆ.
ತಾಲೂಕಿನ ಹಲವು ಕಡೆಗಳಲ್ಲಿ ಇಂತಹ ಪ್ರಕರಣ ಕಂಡು ಬಂದರೂ, ಈ ಬಗ್ಗೆ ದೂರು ನೀಡಿದರೂ ಡಿಡಿ ಯಾವುದೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡದೆ ಕಾರ್ಯಕರ್ತೆಯರ ಮೇಲೆ ಗೊಬೆ ಕೂರಿಸುವ ಕೆಲಸಕ್ಕೆ ಮುಂದಾಗಿದ್ದಾರೆಯೇ ಎನ್ನುವ ಅನುಮಾನವೂ ಕಾಡುತ್ತಿದೆ. ಹಲವು ಕಡೆಗಳಲ್ಲಿ ಸಮಸ್ಯೆಗಳಿದ್ದರೂ ಡಿಡಿ ಕಚೇರಿಯಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಶಾಲಾ ಶಿಕ್ಷಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ನಡುವೆ ಮಾರಾಮಾರಿ
ಅಂಗನವಾಡಿ ಸಹಾಯಕಿಯಿಂದ ರಾಕ್ಷಸೀ ಕೃತ್ಯ
ಕನಕಪುರ: ರಾಜ್ಯದಲ್ಲಿ ಚಿಕ್ಕ ಮಗುವಿನ ಮೇಲೆ ವಿಕೃತಿ ಮೆರೆದ ಅಂಗನವಾಡಿ ಸಹಾಯಕಿಯೊಬ್ಬಳ ರಾಕ್ಷಸಿ ಕೃತ್ಯದ ಬಗ್ಗೆ ಇತ್ತೀಚೆಗೆ ದೂರು ದಾಖಲಾಗಿತ್ತು. ಈಕೆ ಎರಡೂವರೆ ವರ್ಷದ ಮಗುವಿನ ಕೈ ಮೇಲೆ ಬರೆ ಹಾಕಿ, ಡೈಪರ್ನಲ್ಲಿ ಖಾರದ ಪುಡಿ ಹಾಕಿ ವಿಕೃತಿ ಮೆರೆದಿದ್ದಳು. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜರಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಗ್ರಾಮದ ದೀಕ್ಷಿತ್ ಎಂಬಾತ ಸಂತ್ರಸ್ತ ಬಾಲಕ.
ಘಟನೆ ಹಿನ್ನೆಲೆ
ಮಧ್ಯಾಹ್ನ ಮಗುವಿನ ಪೋಷಕರಾದ ರಮೇಶ್ ನಾಯಕ್, ಪತ್ನಿ ಚೈತ್ರಾಬಾಯಿ ತಮ್ಮ ಮಗುವನ್ನು ಕರೆದುಕೊಂಡು ಬರಲು ಅಂಗನವಾಡಿಗೆ ತೆರಳಿದ್ದಾರೆ. ಆಗ ಬಾಲಕ ಅಳುತ್ತಿರುವುದನ್ನು ಗಮನಿಸಿದ್ದಾರೆ. ವಿಚಾರಿಸಿದಾಗ ಸಹಾಯಕಿಯ ಕೃತ್ಯ ಗೊತ್ತಾಗಿದೆ. ಮಗು ಹಠ ಮಾಡುತ್ತಿದ್ದ ಕಾರಣ ಸಹಾಯಕಿ ಚಂದ್ರಮ್ಮ ಮಗುವಿನ ಎಡಗೈ ಮೇಲೆ ಬರೆ ಹಾಕಿದ್ದಲ್ಲದೆ ಡೈಪರ್ ಒಳಗೆ ಖಾರದ ಪುಡಿ ಹಾಕಿ ಹಿಂಸಿಸಿರುವ ಘಟನೆ ಬೆಳಕಿಗೆ ಬಂದಿತ್ತು. ಘಟನೆ ಸಂಬಂಧ ಪೋಷಕರು ಸಿಡಿಪಿಒ ತಾಲೂಕು ಅಧಿಕಾರಿ ನಾರಾಯಣ್ ಅವರಿಗೆ ದೂರು ಸಲ್ಲಿಸಿದ್ದರು.