ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ! ಲವ್ ಮಾಡಿದ ಹುಡುಗಿಗೆ ಇದೆಂಥಾ ಶಿಕ್ಷೆ?

ಮಗಳು ಅನ್ಯ ಜಾತಿಯವನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಆಕ್ರೋಶಗೊಂಡ ತಂದೆಯೊಬ್ಬ ತಾನು ಹೆತ್ತ ಮಗಳೂ ಅಂತಲೂ ನೋಡದೆ ಆಕೆಯನ್ನು ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮುಖೇಶ್ ಸಿಂಗ್ ಎಂಬಾತನೇ ತನ್ನ ಮಗಳನ್ನು ಕೊಲೆ ಮಾಡಿದ ತಂದೆ.

ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಅಪ್ಪ!

ಕೊಲೆಯಾದ ಸಾಕ್ಷಿ.

Profile Sushmitha Jain Apr 10, 2025 10:38 PM

ಪಾಟ್ನಾ: ಸಮಾಜ ಎಷ್ಟೇ ಬದಲಾದರೂ, ಆಧುನಿಕತೆ ಮೈಗೂಡಿಸಿಕೊಂಡರೂ ಪ್ರೀತಿ ಪ್ರೇಮದ (Love) ವಿಚಾರದಲ್ಲಿ ಎಂದೂ ಬದಲಾಗೋದಿಲ್ಲ. ಇಲ್ಲಿ ಬಹುತೇಕ ಪ್ರೇಮಕಥೆಗಳು (Love Story) ದುಃಖದಲ್ಲೇ ಅಂತ್ಯವಾಗುತ್ತದೆ (Tragedy ending) ಎನ್ನುವುದು ವಿಷಾದನೀಯ. ಬಹುತೇಕ ಎಲ್ಲ ಲವ್‌ ಸ್ಟೋರಿಗಳಲ್ಲೂ ಹೆತ್ತವರೇ (parents) ಪ್ರೇಮಿಗಳಿಗೆ (Lovers) ವಿಲನ್ (villains) ಆಗುತ್ತಾರೆ. ಬಿಹಾರದಲ್ಲಿಯೂ ಇಂಥದ್ದೇ ಘಟನೆ ನಡೆದಿದೆ. ಅನ್ಯ ಜಾತಿ ಯುವಕನನ್ನು (Different caste boy) ಪ್ರೀತಿಸುತ್ತಾ ಇದ್ದಾಳೆ ಅಂತ ಆಕ್ರೋಶಗೊಂಡ ತಂದೆಯೊಬ್ಬ ತಾನು ಹೆತ್ತ ಮಗಳೂ ಅಂತಲೂ ನೋಡದೆ ಆಕೆಯನ್ನು ಕೊಲೆ (Murdet) ಮಾಡಿದ್ದಾನೆ.

ಮಗಳನ್ನೇ ಕೊಲೆ ಮಾಡಿದ ತಂದೆ!

ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಮಗಳ್ನೇ ತಂದೆಯೇ ಹತ್ಯೆ ಮಾಡಿದ್ದಾನೆ ಎನ್ನಲಾದ ಘಟನೆ ಬಿಹಾರದ ಸಮಸ್ತಿಪುರದಲ್ಲಿ (Bihar Samastipur) ನಡೆದಿದೆ. ಮುಖೇಶ್ ಸಿಂಗ್ ಎಂಬಾತನೇ ತನ್ನ ಮಗಳನ್ನು ಕೊಲೆ ಮಾಡಿದ ತಂದೆ.

ಈ ಸುದ್ದಿಯನ್ನೂ ಓದಿ: Jitan Ram Manjhi: ಕೇಂದ್ರ ಸಚಿವ ಜಿತಿನ್‌ ರಾಮ್‌ ಮಾಂಝಿ ಮೊಮ್ಮಗಳನ್ನು ಗುಂಡಿಟ್ಟು ಹತ್ಯೆಗೈದ ಪತಿ; ಕಾರಣವೇನು?

ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಹುಡುಗಿ

25 ವರ್ಷದ ಸಾಕ್ಷಿಯೇ ಹೆತ್ತ ತಂದೆಯಿಂದ ಕೊಲೆಯಾದ ಯುವತಿ. ಸಮಸ್ತಿಪುರದ ನಿವಾಸಿ ಆಗಿರುವ ಸಾಕ್ಷಿ ತನ್ನ ಕಾಲೇಜಿನಲ್ಲೇ ಓದುತ್ತಿದ್ದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಮಗಳ ಪ್ರೇಮ ಪುರಾಣ ಹೆತ್ತವರಿಗೆ ತಿಳಿದು ಈ ವಿಷಯ ದೊಡ್ಡ ಜಗಳವೇ ನಡೆದಿತ್ತು. ಸಾಕ್ಷಿಯ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಮಗಳ ಪ್ರೀತಿ ವಿಚಾರ ತಿಳಿದ ಮೇಲೆ ಯುವಕನಿಂದ ದೂರವಿರುವಂತೆ ಮುಖೇಶ್ ಸಿಂಗ್ ಎಚ್ಚರಿಕೆ ನೀಡಿದ್ದ. ಮಗಳನ್ನು ಹೊಡೆದು ಬಡೆದು ಬುದ್ಧಿ‌ ಹೇಳಿದ್ರು‌ ಮಗಳು ಸುಧಾರಿಸಿರಲಿಲ್ಲ. ಅಲ್ಲದೇ ಮನೆಯವರ ಒಪ್ಪಿಗೆ ಸಿಗದ ಹಿನ್ನಲೆ ಸಾಕ್ಷಿ ಮನ ಮೆಚ್ಚಿದ ಹುಡುಗನೊಂದಿಗೆ ದಿಲ್ಲಿಗೆ ಓಡಿ ಹೋಗಿದ್ದಳು.

ಇದು ಮಗಳ ಮೇಲೆ ತಂದೆಗೆ ಇರೋ ಕೋಪ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ಹೀಗಾಗಿ ಒಂದೆರಡು ದಿನ ತಣ್ಣಗಿದ್ದು ಮಗಳ ಕೊಲೆಗೆ ತಂದೆಯೇ ಸ್ಕೇಚ್ ಹಾಕಿದ್ದ ಎನ್ನಲಾಗಿದೆ.

ಮನೆಗೆ ಬರುವಂತೆ ಮಾಡಿ ಹತ್ಯೆ

ಗೆಳೆಯನೊಂದಿಗೆ ಓಡಿ ಹೋದ ಸಾಕ್ಷಿಯ ಪ್ರೀತಿಯನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ ಮುಖೇಶ್ ಮಗಳನ್ನು ಮನೆಗೆ ಬರುವಂತೆ ಮನವೊಲಿಸಿದ್ದ. ಹೀಗೆ ಮನೆಗೆ ಬಂದ ಮಗಳನ್ನು ಹತ್ಯೆ ಮಾಡಿ ಸ್ನಾನದ ಗೃಹದಲ್ಲಿ ಶವವನ್ನು ಅಡಗಿಸಿ ಇಟ್ಟಿದ. ಬಳಿಕ ಮನೆಗೆ ಮಗಳು ಮತ್ತೆ ಕಾಣೆಯಾಗಿದ್ದಾಳೆ ಎಂದು ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದ.

ದೂರು ದಾಖಲಾದ ಹಿನ್ನಲೆ ಪೊಲೀಸರು ತನಿಖೆ ಆರಂಭಿಸಿದ್ದರು. ಅದರ ಭಾಗವಾಗಿ ಸಾಕ್ಷಿ ಅವರ ತಾಯಿಯನ್ನು ವಿಚಾರಿಸಿದಾಗ, ಅವಳು ಮತ್ತೆ ತನ್ನ ಪ್ರಿಯಕರನೊಂದಿಗೆ ಹೋಗಿರಬಹುದು ಅಂತ ಹೇಳಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ಭಾಗವಾಗಿ ಮನೆಯನ್ನ ಪರಿಶೀಲಿಸಿದ್ದಾಗ ಬೀಗ ಹಾಕಿದ್ದ ಸ್ನಾನಗೃಹದಿಂದ ದುರ್ವಾಸನೆ ಬಂದಿದ್ದು, ಬೀಗ ತೆಗೆದಾಗ ರಕ್ತದ ಮಡುವಿನಲ್ಲಿ ಸಾಕ್ಷಿಯ ಶವ ಬಿದ್ದಿರುವುದು ಕಂಡು ಬಂದಿತ್ತು. ಈ ಕುರಿತು ಮುಖೇಶ್‌ ಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.