Viral Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಶ್ವಾನದ ಜೀವಕ್ಕೆ ಕುತ್ತು ತಂದ ಭೂಪ; ವಿಡಿಯೊ ನೋಡಿ
ಸಾಕು ನಾಯಿಯೊಂದಿಗೆ ವ್ಯಕ್ತಿಯೊಬ್ಬ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಹತ್ತಲು ಪ್ರಯತ್ನಿಸಿ ನಾಯಿಯನ್ನು ಎಳೆದ ಕಾರಣ ಅದು ಫ್ಲಾಟ್‍ಫಾರ್ಮ್ ಹಾಗೂ ಟ್ರ್ಯಾಕ್‍ಗಳ ನಡುವೆ ಸಿಲುಕಿಕೊಂಡ ಆಘಾತಕಾರಿ ಘಟನೆ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.


ಲಖನೌ: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಅನೇಕರು ಪ್ರಾಣಾಪಾಯಕ್ಕೆ ತುತ್ತಾದ ಘಟನೆ ಸಾಕಷ್ಟು ನಡೆದಿದೆ. ಹೀಗಿದ್ದರೂ ಪದೇ ಪದೇ ಅದೇ ತಪ್ಪುಗಳನ್ನೇ ಮಾಡುತ್ತಿದ್ದಾರೆ. ಇದೀಗ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಕು ನಾಯಿಯನ್ನು ಅದರ ಮಾಲೀಕ ಅಜಾಗರೂಕತೆಯಿಂದ ರೈಲು ಹತ್ತಲು ಪ್ರಯತ್ನಿಸಿ ನಾಯಿಯನ್ನು ಎಳೆದ ಕಾರಣ ಅದು ಫ್ಲಾಟ್‍ಫಾರ್ಮ್ ಹಾಗೂ ಟ್ರ್ಯಾಕ್‍ಗಳ ನಡುವೆ ಸಿಲುಕಿಕೊಂಡ ಆಘಾತಕಾರಿ ಘಟನೆ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ದೆಹಲಿಗೆ ಹೋಗುವ ಪ್ಯಾಸೆಂಜರ್ ರೈಲಿನಲ್ಲಿ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. ವಿಡಿಯೊದಲ್ಲಿ ಗೋಲ್ಡನ್ ರಿಟ್ರೀವರ್ ನಾಯಿಯೊಂದಿಗೆ ಮಾಲೀಕ ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುವಾಗ ನಾಯಿಯ ಹಗ್ಗವನ್ನು ಹಿಡಿದು ಎಳೆದಿದ್ದಾನಂತೆ. ಇದರಿಂದ ನಾಯಿಯ ಕುತ್ತಿಗೆಯ ಹಗ್ಗ ಜಾರಿ ಅದು ಪ್ಲಾಟ್ ಫಾರ್ಮ್ ಮತ್ತು ಟ್ರ್ಯಾಕ್ ಗಳ ನಡುವಿನ ಸಿಲುಕಿಕೊಂಡಿದೆ. ಆಗ ಆ ಮಾಲೀಕ ರೈಲು ಚಲಿಸುತ್ತಲೇ ಇರುವಾಗ, ತನ್ನ ನಾಯಿಯನ್ನು ಹುಡುಕುತ್ತಾ ಸುತ್ತಲೂ ಅಲೆದಾಡಿದ್ದಾನಂತೆ
ಶ್ವಾನದೊಂದಿಗೆ ಚಲಿಸುತ್ತಿದ್ದ ರೈಲು ಹತ್ತಲು ಹೋದ ಮಾಲೀಕನ ವಿಡಿಯೊ ಇಲ್ಲಿದೆ ನೋಡಿ...
When money can't buy wisdom! pic.twitter.com/suADun73fu
— Trains of India (@trainwalebhaiya) April 1, 2025
ಈ ಭೀಕರ ಘಟನೆಯ ನಂತರ ನಾಯಿ ಬದುಕುಳಿದಿದೆ ಎಂದು ರೈಲ್ವೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ನಾಯಿಯ ಮಾಲೀಕನ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಯಾವುದೇ ವರದಿಗಳಿಲ್ಲ. ಆದರೆ ವಿಡಿಯೊ ವೈರಲ್ ಆದ ಬಳಿಕ ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಮಾಲೀಕನ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿ ಇದು ನಿರ್ಲಕ್ಷ್ಯದ ಕೃತ್ಯ ಎಂದು ಹೇಳಿದ್ದಾರೆ. ಈ ಘಟನೆಯು ಪ್ರಾಣಿಗಳ ಕ್ರೌರ್ಯಕ್ಕೆ ಸಂಬಂಧಿಸಿದ ಬಿಎನ್ಎಸ್ ಸೆಕ್ಷನ್‍ಗಳ ಅಡಿಯಲ್ಲಿ ಸಾಕುಪ್ರಾಣಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral News: ಹಬ್ಬಕ್ಕೆ ಸೀರೆಯುಟ್ಟು ಬಾರದ ಉದ್ಯೋಗಿಗೆ ಬಿತ್ತು ಭಾರೀ ಫೈನ್- ಏನಿದು ಘಟನೆ?
ಶೌಚಾಲಯದಲ್ಲಿ ಸಾಕು ಶ್ವಾನವನ್ನು ನೀರಿನಲ್ಲಿ ಮುಳುಗಿಸಿಕೊಂದ ಮಹಿಳೆ!
ಸಾಕುನಾಯಿಗಳನ್ನು ಮಾಲೀಕರು ನಿರ್ಲಕ್ಷಿಸುವ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ದಾಖಲೆಗಳ ಸಮಸ್ಯೆಯಿಂದಾಗಿ ಮಹಿಳೆಯೊಬ್ಬಳು ತನ್ನ ಬಿಳಿ ಮಿನಿಯೇಚರ್ ಸ್ಕ್ನೌಜರ್ ನಾಯಿಯನ್ನು ಫ್ಲೋರಿಡಾ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಮುಳುಗಿಸಿ ಕೊಂದಿದ್ದಾಳೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಲೇಕ್ ಕೌಂಟಿಯ ಅಧಿಕಾರಿಗಳು ಅವಳನ್ನು ಪ್ರಾಣಿ ದೌರ್ಜನ್ಯದ ಆರೋಪದ ಮೇಲೆ ಬಂಧಿಸಿದ್ದಾರೆ. ನಂತರ ಆಕೆಯನ್ನು 5,000 ಡಾಲರ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.