ಸೋಲಿನೊಂದಿಗೆ ಅನಗತ್ಯ ದಾಖಲೆ ಬರೆದ ಹೈದರಾಬಾದ್
IPL 2025: ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನೀಡಿದ್ದ 201 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌ತಂಡ, ವೈಭವ್ ಅರೋರಾ (29 ಕ್ಕೆ 3) ಮಾರಕ ದಾಳಿ ಹಾಗೂ ವರುಣ್ ಚಕ್ರವರ್ತಿ (22 ಕ್ಕೆ 3) ಸ್ಪಿನ್ ಮೋಡಿಗೆ ನಲುಗಿ 16.4 ಓವರ್‌ಗಳಿಗೆ ಕೇವಲ 120 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಭಾರಿ ಅಂತರದಲ್ಲಿ ಸೋಲು ಅನುಭವಿಸಿತು.


ಕೋಲ್ಕತಾ: ಗುರುವಾರ ನಡೆದ ಐಪಿಎಲ್(IPL 2025) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್(Kolkata Knight Riders) ತಂಡ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ತೋರುವ ಮೂಲಕ ಸೈನ್‌ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ ಭರ್ಜರಿ 80 ರನ್ ಅಂತರದ ಗೆಲುವು ಸಾಧಿಸಿ ಮೆರೆದಾಡಿತು. ಸೋಲು ಕಂಡ ಹೈದರಾಬಾದ್ ತಂಡ ಇದುವರೆಗಿನ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಅಂತರದ ಸೋಲು ಕಂಡ ಅವಮಾನ ಎದುರಿಸಿತು.
ಹೈದರಾಬಾದ್‌ಗೆ ರನ್ ಅಂತರದ ಸೋಲು
80 ರನ್ ಸೋಲು-ಕೆಕೆಆರ್ ವಿರುದ್ಧ
78 ರನ್ ಸೋಲು ಚೆನ್ನೈ ವಿರುದ್ಧ
77 ರನ್ ಸೋಲು ಚೆನ್ನೈ ವಿರುದ್ಧ
72 ರನ್ ಸೋಲು ರಾಜಸ್ಥಾನ್ ವಿರುದ್ಧ
72 ರನ್ ಸೋಲು ಪಂಜಾಬ್ ವಿರುದ್ಧ
ಗುರುವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನೀಡಿದ್ದ 201 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌ತಂಡ, ವೈಭವ್ ಅರೋರಾ (29 ಕ್ಕೆ 3) ಮಾರಕ ದಾಳಿ ಹಾಗೂ ವರುಣ್ ಚಕ್ರವರ್ತಿ (22 ಕ್ಕೆ 3) ಸ್ಪಿನ್ ಮೋಡಿಗೆ ನಲುಗಿ 16.4 ಓವರ್‌ಗಳಿಗೆ ಕೇವಲ 120 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಭಾರಿ ಅಂತರದಲ್ಲಿ ಸೋಲು ಅನುಭವಿಸಿತು.
ಇದನ್ನೂ ಓದಿ IPL 2025: ವಿರಾಟ್ ಕೊಹ್ಲಿಯ ಬೆರಳಿನ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಆರ್‌ಸಿಬಿ ಕೋಚ್ ಆಂಡಿ ಫ್ಲವರ್!
ನ್‌ರೈಸರ್ಸ್ ತಂಡದ ಪರ ಹೆನ್ರಿಚ್ ಕ್ಲಾಸೆನ್ (33), ಕಮಿಂದು ಮೆಂಡಿಸ್ (27) ಕೊಂಚ ಪ್ರತಿರೋಧ ನೀಡಿದ್ದು ಬಿಟ್ಟರೆ ಇನ್ನುಳಿದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಟ್ರಾವಿಸ್ ಹೆಡ್ (4), ಅಭಿಷೇಕ್ ಶರ್ಮಾ(2) ಹಾಗೂ ಇಶಾನ್ ಕಿಶನ್ (2) ಅವರು ಬಹುಬೇಗ ವಿಕೆಟ್ ಒಪ್ಪಿಸಿದರು. ಇದರ ಪರಿಣಾಮ ಹೈದರಾಬಾದ್ ತಂಡ ಚೇಸಿಂಗ್ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು.