ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮುಂಬೈಯ ಪವಾಯಿ ಕ್ಯಾಂಪಸ್‌ನ ರಸ್ತೆಯಲ್ಲಿ ಭಾರೀ ಗಾತ್ರದ ಮೊಸಳೆ ಓಡಾಟ! ಇಲ್ಲಿದೆ ಭಯಾನಕ ವಿಡಿಯೊ

Viral Video: ನಾಲ್ಕು ಅಡಿಗಿಂತ ದೊಡ್ಡದಾದ ಮೊಸಳೆ ಅಚಾನಕ್ಕಾಗಿ ನೀರಿನಿಂದ ಹೊರಬಂದಿದ್ದು ರಸ್ತೆ ಮಧ್ಯೆ ವಿಶ್ರಾಂತಿ ಪಡೆದಿದೆ. ಜನವಸತಿ ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಅಲ್ಲದೇ ಸಮೀಪದಲ್ಲಿಯೇ ಕಾಲೇಜು ಕ್ಯಾಂಪಸ್ ಇದ್ದು, ಇದೇ ರಸ್ತೆಯಲ್ಲಿ ಹೆಚ್ಚಿನ ಜನರು ಪ್ರಯಾಣಿಸುತ್ತಾರೆ. ಹಾಗಾಗಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಜನ ವಸತಿ ಪ್ರದೇಶದಲ್ಲೇ ಮೊಸಳೆ ಪ್ರತ್ಯಕ್ಷ: ವಿಡಿಯೊ ವೈರಲ್

Crocodile video viral

Profile Pushpa Kumari Mar 24, 2025 10:16 PM

ಮುಂಬೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪವಾಯಿ ಕ್ಯಾಂಪಸ್‌ ರಸ್ತೆಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಪದ್ಮಾವತಿ ದೇವಸ್ಥಾನ ಹತ್ತಿರದ ಪವಾಯಿ ಸರೋವರದಿಂದ ಮೊಸಳೆ ಹೊರಬಂದು ರಸ್ತೆ ಮೇಲೆ ಸಂಚರಿಸುತ್ತಿರುವ ದೃಶ್ಯ ನೋಡಿ ಅಲ್ಲಿದ್ದ ಜನರು ಭಯಭೀತರಾಗಿದ್ದಾರೆ. ಸ್ಥಳೀಯರು ಇದನ್ನು ಕಂಡು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ (Viral Video). ಆ ಬಳಿಕ ಅಧಿಕಾರಿಗಳು ತ್ವರಿತ ಕ್ರಮ ತೆಗೆದು ಕೊಂಡು ಸಾರ್ವಜನಿಕ ಸುರಕ್ಷತೆಗೆ ಖಾತ್ರಿಗೊಳಿಸಿದ್ದಾರೆ.

ನಾಲ್ಕು ಅಡಿಗಿಂತ ದೊಡ್ಡದಾದ ಬೃಹತ್ ಗಾತ್ರದ ಮೊಸಳೆ ಅಚಾನಕ್ಕಾಗಿ ನೀರಿನಿಂದ ಹೊರಬಂದಿದ್ದು ರಸ್ತೆ ಮಧ್ಯೆ ವಿಶ್ರಾಂತಿ ಪಡೆದಿದೆ. ಜನವಸತಿ ಪ್ರದೇಶದಲ್ಲಿ ಮೊಸಳೆ ಕಾಣಿಸಿ ಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಅಲ್ಲದೇ ಸಮೀಪದಲ್ಲಿಯೇ ಕ್ಯಾಂಪಸ್ ಇದ್ದು, ಇದೇ ರಸ್ತೆಯಲ್ಲಿ ಹೆಚ್ಚಿನ ಜನರು ಪ್ರಯಾಣಿಸುತ್ತಾರೆ. ಹಾಗಾಗಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಲು ಸಾರ್ವಜನಿಕರು ಮನವಿ ಮಾಡಿದ್ದಾರೆ.



ರಾಜ್ ಮಹಿ ಎಂಬ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದು, ಪವಾಯಿ ಸರೋವರದಿಂದ ಸಂಚಾರ ಹೊರಟ ಮೊಸಳೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಹಲವು ಬಾರಿ ಪವಾಯಿ ಸರೋವರದಿಂದ ಮೊಸಳೆಗಳು ರಸ್ತೆಗಳಿಗೆ ಬಂದಿವೆ. ಈ ಬಗ್ಗೆ ವನ್ಯಜೀವಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಪವನ್ ಶರ್ಮಾ ‌ಇದು ಗೂಡು ಕಟ್ಟಲು ಸ್ಥಳ ಹುಡುಕುತ್ತಿರುವ ಹೆಣ್ಣು ಮೊಸಳೆಯಾಗಿರಬಹುದು ಎಂದು ಶಂಕಿಸಿದ್ದಾರೆ. ಸ್ಥಳೀಯರು ಮತ್ತು ಅಧಿಕಾರಿಗಳು ಮೊಸಳೆಗೆ ಯಾವುದೇ ಹಾನಿಯಾಗದಂತೆ ಎಚ್ಚೆತ್ತುಕೊಂಡಿದ್ದು ಅದು ಸ್ವತಃ ಸರೋವರಕ್ಕೆ ಮರಳಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: Viral Video: ಹೆಚ್ಚುವರಿ ಹಣ ನೀಡುವಂತೆ ಪ್ರಯಾಣಿಕನಿಗೆ ಬೆದರಿಕೆ ಹಾಕಿದ ಆಟೋ ಡ್ರೈವರ್

ರಸ್ತೆಯಲ್ಲಿ ಮೊಸಳೆ ಸಂಚರಿಸಿವುದನ್ನು ಕಂಡ ಕೆಲವು ಜನರು ಈ ದೃಶ್ಯ ವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ಮೊಸಳೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಈ ಘಟನೆ ಬಗ್ಗೆ ನಾನಾ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು ಇದು ಐಐಟಿಗೆ ಪ್ರವೇಶ ಪಡೆಯಲು ಹೋಗುತ್ತಿರುವ ಮೊಸಳೆ ಎಂದು ಹಾಸ್ಯಯುತವಾಗಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗರು ಮೊಸಳೆ ಗಾತ್ರವೇ ಭಯ ಹುಟ್ಟಿಸುವಂತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಮೊಸಳೆಗಳು ತಮ್ಮ ವಾಸ ಸ್ಥಳದಿಂದ ಹೊರಬರುವ ನಿದರ್ಶನ ಇದೇ ಮೊದಲೇನಲ್ಲ. ಈ ಹಿಂದೆಯು ಮೊಸಳೆ ರಸ್ತೆಗಿಳಿದ ಘಟನೆ ವರದಿಯಾಗಿದ್ದು ಈ ಹಿಂದೆ ಗುಜರಾತ್‌ನ ವಡೋದರಾದ ವಿಶ್ವಾಮಿತ್ರಿ ನದಿಯ ಬಳಿಯ ರಸ್ತೆಯಲ್ಲಿಯು ಮೊಸಳೆಯೊಂದು ಕಾಣಿಸಿಕೊಂಡಿತ್ತು.