Viral Video: ಹೆಚ್ಚುವರಿ ಹಣ ನೀಡುವಂತೆ ಪ್ರಯಾಣಿಕನಿಗೆ ಬೆದರಿಕೆ ಹಾಕಿದ ಆಟೋ ಡ್ರೈವರ್
Viral Video: ಬೆಂಗಳೂರಿನಲ್ಲಿ ಆಟೋ ಚಾಲಕರು ಪ್ರಯಾಣಿಕರನ್ನು ದೋಚುವ ಘಟನೆಗಳು ಸಾಮಾನ್ಯವಾಗುತ್ತಿವೆ. ಇತ್ತೀಚಿಗೆ ಆಟೋ ಬುಕ್ ಮಾಡಿದ ಪ್ರಯಾಣಿಕರೊಬ್ಬರು ಆಟೋ ಚಾಲಕನ ನಡವಳಿಕೆ ಬಗ್ಗೆ ನೊಂದು ಈ ಅನುಭವವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಹೆಚ್ಚುವರಿ ಹಣ ಪಾವತಿಸಲು ನಿರಾಕರಸಿದಾಗ ಚಾಲಕ ಕಪಾಳ ಮೋಕ್ಷ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

Auto Driver Accused

ಬೆಂಗಳೂರು: ಹೈಟೆಕ್ ಉದ್ಯಮ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಇತ್ತೀಚೆಗೆ ಆಟೋ ಚಾಲಕರದ್ದೇ ದರ್ಬಾರ್ ನಡೆಯುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ದುಪ್ಪಟ್ಟು ಹಣ ನೀಡುವಂತೆ ಆಟೋ ಚಾಲಕನೊಬ್ಬ ಬೆದರಿಕೆ ಹಾಕಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಟೋ ಚಾಲಕನ ಈ ದುರ್ವರ್ತನೆ ವಿರುದ್ಧ ಬೇಸರ ವ್ಯಕ್ತಪಡಿಸಿದ ಪ್ರಯಾಣಿಕ ಈ ವಿಚಾರವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ (Viral Video). ಪ್ರಯಾಣಿಕನ ಪ್ರಕಾರ ಆತ ಕಾಲೇಜಿನಿಂದ ಮನೆಗೆ ಹೋಗಲು 256 ರೂ.ಗೆ ಆಟೋ ಬುಕ್ ಮಾಡಿದ್ದರು. ಆದರೆ ತಲುಪಿದ ನಂತರ, ಚಾಲಕ 338 ರೂ. ಬೇಡಿಕೆ ಇಟ್ಟಿದ್ದು ಈ ಮೊತ್ತ ನೀಡಲು ನಿರಾಕರಿಸಿದಕ್ಕೆ ಆಟೋ ಚಾಲಕನು ಬೆದರಿಕೆ ಹಾಕಿದ್ದಾನೆ.
ಇಂದು ಬೆಂಗಳೂರು ಆಟೋ ಚಾಲಕರು ಆಕ್ರಮ ದರವನ್ನು ವಸೂಲಿ ಮಾಡುವ ಘಟನೆಗಳು ಸಾಮಾನ್ಯವಾಗುತ್ತಿವೆ. ಇತ್ತೀಚಿಗೆ ಆಟೋ ಬುಕ್ ಮಾಡಿದ ಪ್ರಯಾಣಿಕ ಆಟೋ ಚಾಲಕನ ನಡವಳಿಕೆ ಬಗ್ಗೆ ನೊಂದು ಈ ಅನುಭವವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಕಾಲೇಜು ಮುಗಿಸಿ ವಾಪಸ್ ಆಗುವ ವೇಳೆ ಪ್ರಯಾಣಿಕ ಆಟೋ ಬುಕ್ ಮಾಡಿದ್ದಾರೆ. ಈ ವೇಳೆ ಆ್ಯಪ್‌ನಲ್ಲಿ 256 ರೂ. ತೋರಿಸಿದೆ. ಆದರೆ ಚಾಲಕ 338 ರೂ. ನೀಡುವಂತೆ ಸೂಚಿಸಿದ್ದಾನೆ. ಇದಕ್ಕೆ ಹಿಂದೇಟು ಹಾಕಿದಾಗ ಕಪಾಳ ಮೋಕ್ಷ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪ್ರಯಾಣಿಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Got harassed and threatened by a Bengaluru auto driver. He has told me that he will beat me up outside my office whenever I go. And said racial slurs. He was asking for 200rs extra out of nowhere. Just a 20 year college student returning back from my internship @nammayatri pic.twitter.com/GwsYPqMrCI
— Fak3eer (@fak3eer) December 6, 2024
ಹೆಚ್ಚುವರಿ ಮೊತ್ತ ನೀಡಲು ನಿರಾಕರಿಸಿದಾಗ ತಾಳ್ಮೆ ಕಳೆದುಕೊಂಡ ಚಾಲಕ ಕೆಟ್ಟ ಪದಗಳಿಂದ ನಿಂದಿಸಿ ತನಗೆ ಕಪಾಳ ಮೋಕ್ಷ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ತನಗೆ ಕನ್ನಡ ತಿಳಿಯದ ಕಾರಣ ಭಯಭೀತನಾಗಿ, ಹೆಚ್ಚಿನ ಮೊತ್ತವನ್ನು ಪಾವತಿಸಿದ್ದೇನೆ ಎಂದು ಪ್ರಯಾಣಿಕ ಈ ಘಟನೆಯನ್ನು ಪ್ರಯಾಣಿಕನು ಹೇಳಿಕೊಂಡಿದ್ದಾರೆ. ಆಟೋ ಚಾಲಕನ ಈ ರೀತಿಯ ವರ್ತನೆ ಕಂಡು ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಇದನ್ನು ಓದಿ: Viral Video: ಕ್ಯಾಬ್ ಡ್ರೈವರ್ ವಾಂತಿ ಮಾಡಿದಾಗ ಈ ಮಹಿಳೆ ಹೀಗಾ ಮಾಡೋದು?! ವಿಡಿಯೊ ನೋಡಿ
ಈ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಪ್ರಯಾಣಿಕರು ತಮಗಾದ ಕಹಿ ಅನುಭವವನ್ನು ಕೂಡ ಹಂಚಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿದ್ದು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿದೆ. ನೆಟ್ಟಿಗರೊಬ್ಬರು ಬೆಂಗಳೂರಿನಲ್ಲಿ ಆಟೋ ಚಾಲಕರ ವರ್ತನೆ ಮಿತಿ ಮೀರಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮೊತ್ತೊಬ್ಬರು ಎಂತಹ ಸಂದರ್ಭದಲ್ಲಿಯೂ ಆಟೋದಲ್ಲಿ ನೇರವಾಗಿ ಮನೆ ಮುಂದೆ ಇಳಿಯಬಾರದು, ಬದಲಾಗಿ ಸಾರ್ವಜನಿಕ ಸ್ಥಳದಲ್ಲಿ ಇಳಿಯಬೇಕು ಎಂದು ಒತ್ತಿಹೇಳಿದ್ದಾರೆ.