Friday, 13th December 2024

ಆನ್‌ಲೈನ್ ವಹಿವಾಟು ಸುರಕ್ಷತೆ ಮುಖ್ಯವಾಗಲಿ

ದೇಶದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದಂತೆಲ್ಲ ಆಧುನಿಕತೆಯ ಸ್ವರೂಪ ವಿಸ್ತಾರಗೊಳ್ಳುತ್ತಾ ಸಾಗುತ್ತಿದೆ. ದಿನೇ ದಿನೇ ಡಿಜಿಟಲ್ ವ್ಯವಸ್ಥೆಯ ಬಳಕೆ, ಅವಶ್ಯಕತೆ, ವ್ಯಾಮೋಹಗಳಿಗೆ ಒಳಗಾಗುತ್ತಿರುವ ಜನತೆ ವಂಚನೆಗಳಿಗೂ ಸಿಲುಕುತ್ತಿದ್ದಾರೆ.

ಆಧುನಿಕತೆಗೆ ಒಗ್ಗಿಕೊಳ್ಳಬೇಕಿರುವ ಈ ಸಂದರ್ಭದಲ್ಲಿ ಡಿಜಿಟಲ್ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಿರುವುದು ಬಹುಮುಖ್ಯ. ಆದರೆ ಸದ್ಭಳಕೆಯಷ್ಟೇ ದುರ್ಬಳಕೆಯೂ ಹೆಚ್ಚಿರುವುದರಿಂದ ಸುರಕ್ಷತೆಗೆ ಆದ್ಯತೆ ಅವಶ್ಯಕ. ಭಾರತದಲ್ಲಿ ಅನಧಿಕೃತ ಡಿಜಿಟಲ್ ಸಾಲ ಗಳು ಹಾಗೂ ಆಪ್‌ಗಳ ಬಳಕೆ ಹೆಚ್ಚಾಗಿದೆ. ಇವುಗಳ ಮೂಲಕ ಡಿಜಿಟಲ್ ವಂಚನೆಗಳು ಸಹ ಹೆಚ್ಚುತ್ತಿವೆ. ಈ ಬಗ್ಗೆ ಸೂಚನೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಸುರಕ್ಷತೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದೆ.

ತ್ವರಿತ ಸಾಲಗಳ ಹೆಸರಿನಲ್ಲಿ ವಂಚನೆ ಹೆಚ್ಚುತ್ತಿದೆ. ಆನ್‌ಲೈನ್ ವ್ಯವಹಾರದ ಮೂಲಕ ತ್ವರಿತ ಸಾಲದ ಆಮಿಷವೊಡ್ಡಿ ಹೆಚ್ಚಿನ
ಬಡ್ಡಿ, ಗೌಪ್ಯ ಶುಲ್ಕಗಳನ್ನು ವಿಽಸುವ ಬೆಳವಣಿಗೆ ಕಂಡುಬರುತ್ತಿದೆ. ಕೆಲವು ಜಾಹೀರಾತಿನ ಆಮಿಷಗಳಿಗೆ ಒಳಗಾಗಿ ಕೆವೈಸಿ ಮಾಹಿತಿಗಳನ್ನು ಹಂಚಿಕೊಳ್ಳುವುದರಿಂದಲೂ ವಂಚನೆಗಳು ದಾಖಲಾಗುತ್ತಿವೆ. ಇದರಿಂದ ಗ್ರಾಹಕರು ಡಿಜಿಟಲ್ ವ್ಯವಹಾರ ಹಾಗೂ ಆಪ್‌ಗಳ ಬಳಕೆ ಸಂದರ್ಭದಲ್ಲಿ ಹೆಚ್ಚಿನ ಸುರಕ್ಷತೆಯ ನಿಯಮಗಳನ್ನು ಪಾಲಿಸಬೇಕೆಂದು ಭಾರತೀಯ ರಿಸರ್ವ್
ಬ್ಯಾಂಕ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಡಿಜಿಟಲ್ ವ್ಯವಸ್ಥೆಗೆ ಒಗ್ಗಿಕೊಳ್ಳುವಷ್ಟೇ ಸುರಕ್ಷತೆ ನಿಯಮಗಳನ್ನು ಅನುಸರಿಸುವುದು ಸಹ ಮುಖ್ಯ