ಜಿಪಂ ಸದಸ್ಯ ಬಸವರಾಜ ಹಿರೇಗೌಡರ ಫೇಸ್ಬುಕ್ ಹ್ಯಾಕ್, ಹಣ ಹಾಕದಿರಲು ಮನವಿ
ಜಿಪಂ ಸದಸ್ಯ ಬಸವರಾಜ ಹಿರೇಗೌಡರ ಫೇಸ್ಬುಕ್ ಹ್ಯಾಕ್, ಹಣ ಹಾಕದಿರಲು ಮನವಿ
![Profile](https://vishwavani.news/static/img/user.png)
![WhatsApp-Image-2020-11-24-at-08.17.01-135x300.jpeg](https://cdn-vishwavani-prod.hindverse.com/media/images/WhatsApp-Image-2020-11-24-at-08.17.01-135x3.max-1200x800.jpg)
ಸಿಂಧನೂರು : ರೌಡಕುಂದ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಹಿರೇಗೌಡರ ಅವರ ಸಾಮಾ ಜಿಕ ಜಾಲತಾಣ ಫೇಸ್ಬುಕ್ ಖಾತೆ ಹ್ಯಾಕ್ (ಕನ್ನ)ಆಗಿದ್ದು, ಯಾರೋ ಒಬ್ಬ ವ್ಯಕ್ತಿ ಹಣ ಅಕೌಂಟ್ ನಂಬರಿಗೆ ಹಾಕಲು ಮನವಿ ಮಾಡಿದ್ದಾರೆ.
ಇದು ನನ್ನ ಫೇಸ್ಬುಕ್ ಹ್ಯಾಕ್ ಮಾಡಿದ್ದಾರೆ. ದಯವಿಟ್ಟು ಯಾರು ಹಣ ಹಾಕಬಾರದು ಎಂದು ಜಿಪಂ ಸದಸ್ಯ ಬಸವರಾಜ ಹಿರೇಗೌಡ ಮನವಿ ಮಾಡಿದ್ದಾರೆ. ಈ ಕುರಿತು ಮಂಗಳವಾರ ರಾತ್ರಿ ದೂರವಾಣಿ ಮೂಲಕ ಮಾತನಾಡಿ, ಬಸವರಾಜ ಹಿರೇಗೌಡರು ಫೇಸ್ಬುಕ್ ಅನ್ನು ಮತ್ತೊಂದು ತೆರೆದು ಅದರಲ್ಲಿ ಅಕೌಂಟ್ ನಂಬರ್ ಬರೆದು ಹಣ ಬೇಕಾಗಿದೆ ಎಂದು ಮೆಸೇಜ್ ಮಾಡಿದ್ದಾರೆ.
ಅದು ನನ್ನ ಮೆಸೇಜ್ ಅಲ್ಲ, ಯಾರೋ ತನ್ನ ಖಾತೆಯನ್ನು ಹ್ಯಾಕ್ ಮಾಡಿ ಈ ತರ ಸುಳ್ಳು ಹೇಳಿ ಹಣ ದೋಚುವ ಕೆಲಸ ಮಾಡು ತ್ತಿದ್ದಾರೆ. ಯಾರೂ ಹಣ ಹಾಕಬಾರದು ಎಂದರು.
ಈ ಕುರಿತು ಬುಧವಾರ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ