Ram Gopal Varma: ರಜನಿಕಾಂತ್ ಓರ್ವ ಉತ್ತಮ ನಟನೆ? ಅದು ನನಗೆ ಗೊತ್ತಿಲ್ಲ ಎಂದ ರಾಮ್ ಗೋಪಾಲ್ ವರ್ಮಾ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದ ರಾಮ್ ಗೋಪಾಲ್ ಸ್ಟಾರ್ ಮತ್ತು ಸಾಮಾನ್ಯ ನಟನ ಬಗ್ಗೆ ವ್ಯತ್ಯಾಸ ತಿಳಿಸುವ ಸಲುವಾಗಿ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಉದಾಹರಣೆ ನೀಡಿದ್ದು ಸ್ಲೋ ಮೋಷನ್ ಇಲ್ಲದೆ ರಜನಿಕಾಂತ್ ಇಲ್ಲ ಎಂದಿದ್ದಾರೆ. ಸಂದರ್ಶಕ ನಟ ಹಾಗೂ ಸ್ಟಾರ್ ನಟನ ಸಿನಿಮಾ ಕುರಿತಾಗಿ ಪ್ರಶ್ನೆ ಮಾಡಿದ್ದಕ್ಕೆ ನಿರ್ದೇಶಕ ಈ ಪ್ರತಿಕ್ರಿಯೆ ನೀಡಿದ್ದಾರೆ.
![ರಜನಿಕಾಂತ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಕಮೆಂಟ್!](https://cdn-vishwavani-prod.hindverse.com/media/original_images/ram_gopal.jpg)
ರಾಮ್‌ಗೋಪಾಲ್ ವರ್ಮಾ ಮತ್ತು ರಜನಿಕಾಂತ್
![Profile](https://vishwavani.news/static/img/user.png)
ನವದೆಹಲಿ: ರಾಜಕೀಯ, ಸಿನಿಮಾ, ಇನ್ನಿತರ ಬಗ್ಗೆ ಆಗಾಗ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಅವರು ಸೂಪರ್ ಸ್ಟಾರ್ ರಜನಿಕಾಂತ್ ಗೆ ಸರಿಯಾಗಿ ಡ್ಯಾನ್ಸ್ ಮಾಡೋಕೆ ಬರಲ್ಲ ಅಂತ ಟ್ವೀಟ್ ಮಾಡಿ, ವ್ಯಾಪಕ ಟೀಕೆಗೂ ಗುರಿಯಾಗಿದ್ದರು. ಇದೀಗ ಮತ್ತೆ ರಾಮ್ ಗೋಪಾಲ್ ವರ್ಮಾ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ಪ್ರಶಂಸನೀಯ ಹೇಳಿಕೆ ಒಂದನ್ನು ನೀಡಿದ್ದು ಸ್ಲೋ ಮೋಷನ್ ಇಲ್ಲದೆ ರಜನಿಕಾಂತ್ ಸಿನಿಮಾ ಕಂಪ್ಲಿಟ್ ಆಗಲ್ಲ ಎಂದಿದ್ದಾರೆ. ಸದ್ಯ ಈ ಹೇಳಿಕೆ ರಜನಿಕಾಂತ್ ಅಭಿಮಾನಿಗಳಿಗೆ ಆಶ್ಚರ್ಯ ಉಂಟು ಮಾಡಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದ ರಾಮ್ ಗೋಪಾಲ್ ವರ್ಮಾ ಸ್ಟಾರ್ ಮತ್ತು ಸಾಮಾನ್ಯ ನಟನ ಬಗ್ಗೆ ವ್ಯತ್ಯಾಸ ತಿಳಿಸುವ ಸಲುವಾಗಿ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಉದಾಹರಣೆ ನೀಡಿದ್ದು ಸ್ಲೋ ಮೋಷನ್ ಇಲ್ಲದೆ ರಜನಿಕಾಂತ್ ಇಲ್ಲ ಎಂದಿದ್ದಾರೆ. ಸಂದರ್ಶಕ ನಟ ಹಾಗೂ ಸ್ಟಾರ್ ನಟನ ಸಿನಿಮಾ ಕುರಿತಾಗಿ ಪ್ರಶ್ನೆ ಮಾಡಿದ್ದಕ್ಕೆ ನಿರ್ದೇಶಕ ಈ ಪ್ರತಿಕ್ರಿಯೆ ನೀಡಿದ್ದಾರೆ. ನಟ ಎಂದರೆ ಒಂದು ಪಾತ್ರ, ಸ್ಟಾರ್ ಎಂದರೆ ಅದು ಅಭಿನಯ, ಇವೆರಡು ಮೇಲ್ನೋಟಕ್ಕೆ ಒಂದೇ ಅನಿಸಿದರೂ ಇವುಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಹೇಳಿ ರಜನಿಕಾಂತ್ ಅವರನ್ನೇ ಉದಾಹರಣೆಯಾಗಿ ಹೇಳಿಕೆ ನೀಡಿದ್ದಾರೆ.
ರಜನಿಕಾಂತ್ ಓರ್ವ ಉತ್ತಮ ನಟನೆ? ಅದರ ಬಗ್ಗೆ ನನಗೆ ಗೊತ್ತಿಲ್ಲ. ರಜನಿಕಾಂತ್ ಅವರು ಎಲ್ಲ ತರನಾದ ಪಾತ್ರ ಮಾಡುತ್ತಾರೆ ಎಂದು ನನಗೆ ಅನಿಸಲಾರದು.ಆದರೆ ಸ್ಲೋಮೋಷನ್ ಅನ್ನು ಅವರು ಹೆಚ್ಚಾಗಿ ಇಷ್ಟ ಪಡುತ್ತಾರೆ. ಸ್ಲೋಮೋಷನ್ ಇಲ್ಲದೆ ರಜನಿಕಾಂತ್ ಇಲ್ಲ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿಕೆ ನೀಡಿದ್ದಾರೆ.
ಅಭಿಮಾನಿಗಳಿಗೂ ಅವರ ಸ್ಲೋಮೋಷನ್ ಸ್ಟೆಪ್ , ಫೈಟ್, ಕತೆ ಸಾಗುವ ಪರಿ ಇಷ್ಟ. ಹೀಗಾಗಿ ಅವರ ಸಿನಿಮಾದಲ್ಲಿ ರಜನಿಕಾಂತ್ ಏನು ಮಾಡದೆಯೂ ಸಿನೆಮಾ ಹಿಟ್ ಆಗಲಿದೆ. ಇವರ ಸ್ಲೋಮೋಷನ್ ಸಿಕ್ವೆನ್ಸ್ ಗಳೇ ಅಭಿಮಾನಿಗಳಿಗೆ ಕಿಕ್ ಮತ್ತು ಎಕ್ಸೈಟ್ ಮೆಂಟ್ ನೀಡಲಿದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: Bangalore News: "ಸೂರ್ಯರಾಧನೆ' ಕಾರ್ಯಕ್ರಮದಲ್ಲಿ ನೂರಾರು ಜನರು 108 ಸುತ್ತುಗಳ "ಸೂರ್ಯ ನಮಸ್ಕಾರ'
ಬಳಿಕ ಮಾತನಾಡಿ, ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಅವರನ್ನು ಅಭಿಮಾನಿಗಳು ದೇವರಂತೆ ಕಾಣುತ್ತಾರೆ. ಹೀಗಾಗಿ ಅವರಿಗೆ ಸಿನಿಮಾದಲ್ಲಿ ಅಭಿನಯಿಸುವುದು ಬಹಳ ಕಷ್ಟವಾಗಿ ಬಿಡುತ್ತದೆ. ಅಮಿತಾ ಬಚ್ಚನ್ ಅವರು ಒಂದು ಸಿನೆಮಾದಲ್ಲಿ ಹೊಟ್ಟೆ ನೋವು ಬರುವ ಪಾತ್ರ ಮಾಡಿದ್ದಾರೆ ಅದು ಜನರಿಗೆ ರೀಚ್ ಆಗಲೆ ಇಲ್ಲ. ಅಮಿತಾ ಬಚ್ಚನ್ ಅವರಿಗೆ ಹೊಟ್ಟೆ ನೋವು ಬರುವುದನ್ನು ಜನರು ನೋಡಲು ಇಷ್ಟಪಡಲ್ಲ. ಯಾಕೆಂದರೆ ಅವರೆಲ್ಲ ದೇವಮಾನವರಂತೆ ಜನರು ಸ್ವೀಕಾರ ಮಾಡಿದ್ದಾರೆ. ಹಾಗಾಗಿ ಓರ್ವ ಸ್ಟಾರ್ ನಟ ಸಾಮಾನ್ಯ ವ್ಯಕ್ತಿಯ ಪಾತ್ರ ಮಾಡುವುದನ್ನು ಜನರು ನೋಡಲು ಇಷ್ಟ ಪಡಲ್ಲ. ಅದು ಅವರ ಅಭಿಮಾನಿಗಳಿಗೆ ನಿರಾಶೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.