ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Vishweshwar Bhat Column: ಚಿಕ್ಕದು ಸುಂದರ

ಫ್ಯೂಟಾನ್ ಮಲಗುವ ಹಾಸಿಗೆಗಳು (ಸಾಮಾನ್ಯ ಹಾಸಿಗೆಯ ಬದಲು ಹೊತ್ತೊಯ್ಯಬಹುದಾದ ಹಾಸಿಗೆ) ಬಳಸುತ್ತಾರೆ, ಇದನ್ನು ಹಗಲು ಹೊತ್ತಿನಲ್ಲಿ ಮಡಿಸಿಡ ಬಹುದು. ಹೀಗಾಗಿ, ಜಾಗವನ್ನು ಉಳಿಸಬಹುದು. ಜಪಾನಿನಲ್ಲಿ ಜಾಗ ತುಂಬಾ ದುಬಾರಿ. ಉದಾ ಹರಣೆಗೆ, ಟೋಕಿಯೋ ಅಥವಾ ಒಸಾಕಾದಂಥ ನಗರಗಳಲ್ಲಿ ಭೂಮಿಯ ದರ ಹೆಚ್ಚು ಆಗಿರುವ ಕಾರಣ ಮನೆಯ ಗಾತ್ರ ಕಡಿಮೆ ಯಾಗುತ್ತದೆ

ಚಿಕ್ಕದು ಸುಂದರ

ಜಪಾನಿಯರಲ್ಲಿ ಒಂದು ವಿಶೇಷ ಗುಣವಿದೆ. Small is beautiful ಎಂಬ ಮಾತು ಜಪಾನಿಗೆ ಹೆಚ್ಚು ಅನ್ವರ್ಥಕ. ಅವರು ಎಲ್ಲವನ್ನೂ ಚಿಕ್ಕದಾಗಿ ರೂಪಿಸುತ್ತಾರೆ. ಅದಕ್ಕೆ ಅವರ ಕಣ್ಣುಗಳೂ ಕಾರಣವಿರಬಹುದು. ಯಾಕೆಂದರೆ ಅವರ ಕಣ್ಣುಗಳೂ ಚಿಕ್ಕವು. ಚಿಕ್ಕ ದೇಶ ವಾದರೂ, ಜಗತ್ತಿನ ಮಹಾನ್ ಶಕ್ತಿಗಳಲ್ಲಿ ಜಪಾನ್ ಒಂದಾಗಿದೆ. ಯಾವುದೇ ಅಂತಾ ರಾಷ್ಟ್ರೀಯ ವೇದಿಕೆಯಲ್ಲಿ ಜಪಾನಿಯರನ್ನು ಹೊರತುಪಡಿಸಿ ಯಾವ ಘಟನೆಗಳೂ ಜರುಗುವುದಿಲ್ಲ. ಜಪಾನ್ ಮಹಾನ್ ದೇಶವಾಗಿರಬಹುದು, ಆದರೆ ಅಲ್ಲಿನ ಅಂತರಂಗ ಎಲ್ಲವನ್ನೂ ಸಣ್ಣದಾಗಿ ನೋಡುವುದರಲ್ಲಿ ಕೇಂದ್ರೀಕೃತವಾಗಿದೆ. ಅಲ್ಲಿನ ಕಾರುಗಳು ಚಿಕ್ಕವು, ಮನೆಗಳು ಚಿಕ್ಕವು, ಹೋಟೆಲ್ ರೂಮುಗಳು, ಸಭಾಂಗಣಗಳು ಚಿಕ್ಕವು, ರೆಸ್ಟೋ ರೆಂಟ್‌ಗಳು ಚಿಕ್ಕವು, ಬಾರ್‌ಗಳು ಚಿಕ್ಕವು, ಅಂಗಡಿಗಳು ಚಿಕ್ಕವು ಮತ್ತು ಬೀದಿಗಳು ಸಹ ಚಿಕ್ಕವು.

ಇದನ್ನೂ ಓದಿ: Vishweshwar Bhat Column: ಕೊರಿಯನ್‌ ಮನೆಯಲ್ಲಿ ಕಂಡಿದ್ದು

ಆದರೂ, ಎಲ್ಲವನ್ನೂ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ, ‘ಹಿಸುಕಿದ ಗಾತ್ರ’ದ ಹೊರತಾಗಿಯೂ ಜಪಾನಿಯರು ಆರಾಮದಾಯಕ ಮತ್ತು ಸಾಮರಸ್ಯದ ಜೀವನ ನಡೆಸು ತ್ತಿದ್ದಾರೆ. ಇದಕ್ಕೆ ಜಪಾನಿನ ಭೌಗೋಳಿಕ ಪರಿಸ್ಥಿತಿ ಮೂಲಕಾರಣ. ಮೂಲತಃ ಜಪಾನ್ ಒಂದು ದ್ವೀಪರಾಷ್ಟ್ರ. ಇದು 4 ಪ್ರಮುಖ ದ್ವೀಪಗಳನ್ನು (ಹೋಕ್ಕೆ ಡೋ, ಹೋನ್ಶೂ, ಶಿಕೋಕು ಮತ್ತು ಕ್ಯೂಶೂ) ಹೊಂದಿದೆ. ಆದರೆ ಜಪಾನಿನ ಒಟ್ಟು ಭೂವಿಸ್ತೀರ್ಣ 3.77 ಲಕ್ಷ ಚದರ ಕಿಲೋಮೀಟರ್ ಮಾತ್ರ. ಇದು ಭಾರತದ ಒಂದು ರಾಜ್ಯದಷ್ಟು ದೊಡ್ಡದಾಗಿರ ಬಹುದು.

ಆದರೆ ಇದರ ಶೇ.70ರಷ್ಟು ಭೂಭಾಗವು ಪರ್ವತಗಳಿಂದ ಕೂಡಿದೆ. ಆದ್ದರಿಂದ, ಅತಿ ಕಡಿಮೆ ಅಥವಾ ಮಿತಿಯಾದ ಜಾಗದಲ್ಲಿ ಹೆಚ್ಚು ಜನರು ವಾಸಿಸುವಂತಾಗಲು ಜಪಾನ್ ತನ್ನ ವಾಸ್ತುಶಿಲ್ಪಿ ಮತ್ತು ಜೀವನಶೈಲಿಯನ್ನು ರೂಪಿಸಿಕೊಂಡಿದೆ. ಜಪಾನಿನ ನಗರಗಳು ಜನಸಂಖ್ಯೆಯಿಂದ ತುಂಬಿವೆ. ಉದಾಹರಣೆಗೆ, ಟೋಕಿಯೋ ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ತೀವ್ರ ಜನಸಂಖ್ಯಾ ದಟ್ಟಣೆಯ ಕಾರಣ, ಅಲ್ಲಿನ ಮನೆಗಳು, ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ಗಳು, ಬೀದಿಗಳು ಚಿಕ್ಕದಾಗಿವೆ.

ಇದಕ್ಕೆ ಸಾಂಸ್ಕೃತಿಕ ಕಾರಣಗಳೂ ಇವೆ. ಜಪಾನಿಯರು ಸ್ಥಳ ಮತ್ತು ಸಂಪತ್ತುಗಳ ಆರ್ಥಿಕ ಬಳಕೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಶತಮಾನಗಳ ಕಾಲ, ಜಪಾನಿಯರು ‘ಮಿನಿ ಮಲಿಸಂ’ (ಅತ್ಯಂತ ಕಡಿಮೆ ವಸ್ತುಗಳನ್ನು ಬಳಸುವ ಸಂಸ್ಕೃತಿ) ಅನುಸರಿಸುತ್ತಿದ್ದಾರೆ. ಈ ಮಿನಿಮಲಿಸಂ ಬೌದ್ಧ ಧರ್ಮ ಮತ್ತು ಶಿಂಟೋ ಸಂಪ್ರದಾಯಗಳಿಂದ ಪ್ರೇರಿತವಾಗಿದೆ. ಅಲ್ಲಿನ ಮನೆಗಳು ಚಿಕ್ಕದಾಗಿರುವುದಕ್ಕೆ ಈ ಕಾರಣವೂ ಇದೆ. ಅವರು ಕೇವಲ ಅಗತ್ಯ ವಸ್ತುಗಳನ್ನು ಮಾತ್ರ ಬಳಸುತ್ತಾರೆ.

ಉದಾಹರಣೆಗೆ, ಫ್ಯೂಟಾನ್ ಮಲಗುವ ಹಾಸಿಗೆಗಳು (ಸಾಮಾನ್ಯ ಹಾಸಿಗೆಯ ಬದಲು ಹೊತ್ತೊಯ್ಯಬಹುದಾದ ಹಾಸಿಗೆ) ಬಳಸುತ್ತಾರೆ, ಇದನ್ನು ಹಗಲು ಹೊತ್ತಿನಲ್ಲಿ ಮಡಿಸಿಡ ಬಹುದು. ಹೀಗಾಗಿ, ಜಾಗವನ್ನು ಉಳಿಸಬಹುದು. ಜಪಾನಿನಲ್ಲಿ ಜಾಗ ತುಂಬಾ ದುಬಾರಿ. ಉದಾ ಹರಣೆಗೆ, ಟೋಕಿಯೋ ಅಥವಾ ಒಸಾಕಾದಂಥ ನಗರಗಳಲ್ಲಿ ಭೂಮಿಯ ದರ ಹೆಚ್ಚು ಆಗಿರುವ ಕಾರಣ ಮನೆಯ ಗಾತ್ರ ಕಡಿಮೆಯಾಗುತ್ತದೆ.

ಜನರು ಇಲ್ಲಿನ ಖಾಸಗಿ ಮನೆಗಳನ್ನು ಕೊಳ್ಳಲು ಸಾಧ್ಯವಿಲ್ಲ, ಹೀಗಾಗಿ ಚಿಕ್ಕ ಅಪಾರ್ಟ್‌ ಮೆಂಟ್‌ಗಳಲ್ಲಿ ವಾಸಿಸುತ್ತಾರೆ. ಜಪಾನಿನ ರಸ್ತೆಗಳು ತೀರಾ ಚಿಕ್ಕವು. ಹೀಗಾಗಿ, ಕಾರುಗಳ ಗಾತ್ರವೂ ಕೆಲವು ಪಾಶ್ಚಿಮಾತ್ಯ ದೇಶಗಳಿಗಿಂತ ಚಿಕ್ಕದು. ಜಪಾನಿಯರು ದೊಡ್ಡ ಕಾರು ಗಳನ್ನು ನಿರ್ಮಿಸಿ ರಫ್ತು ಮಾಡುತ್ತಾರೆ, ಆದರೆ ಸ್ವಂತ ಬಳಕೆಗೆ ಸಣ್ಣ ಕಾರುಗಳನ್ನು ಬಯಸುತ್ತಾರೆ.

ಭೂಕಂಪ ಮತ್ತು ಸುನಾಮಿ ಅಪಾಯ ಯಾವತ್ತೂ ಇದ್ದಿದ್ದೇ. ಜಪಾನ್ ಭೂಕಂಪವಲಯ ದೇಶ. ಹೀಗಾಗಿ, ಇಲ್ಲಿನ ಕಟ್ಟಡಗಳು ಭೂಕಂಪವನ್ನು ತಡೆಯುವ ರೀತಿಯಲ್ಲಿ ನಿರ್ಮಾಣ ಗೊಂಡಿರುತ್ತವೆ. ಹೆಚ್ಚಿನ ಎತ್ತರದ ಕಟ್ಟಡಗಳು ಕಷ್ಟವಾದ್ದರಿಂದ ಚಿಕ್ಕದಾದ, ಶಕ್ತಿಯುತ ಕಟ್ಟಡಗಳನ್ನು ಬಳಸುತ್ತಾರೆ. ತಂತ್ರಜ್ಞಾನ ಮತ್ತು ವಿನ್ಯಾಸದ ಪ್ರಭಾವವೂ ಚಿಕ್ಕ ಸಂಗತಿ ಗಳನ್ನು ಹೊಂದಲು ಪ್ರೇರಕವಾಗಿವೆ.

ಜಪಾನ್ ಅತ್ಯಂತ ಉನ್ನತ ತಂತ್ರeನ ರಾಷ್ಟ್ರ. ಆದರೆ, ಇಲ್ಲಿ ಉತ್ತಮ ಬುದ್ಧಿ ಮತ್ತೆಯಿಂದ ಜಾಗವನ್ನು ಬಳಸುವ ಪರಿ ಬಹಳ ವಿಶೇಷ. ಉದಾಹರಣೆಗೆ, ಚಿಕ್ಕ ಮನೆಗಳಲ್ಲಿಯೇ ಬಹಳ ಅನುಕೂಲಕರ ರೀತಿಯ ಶೆಲ, ಡ್ರಾಯರ್, ಫೋಲ್ಡೆಬಲ್ ಪೀಠೋಪಕರಣಗಳನ್ನು ಬಳಸು ತ್ತಾರೆ.