ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral News: ಡೈಪರ್ ಹಾಕ್ಕೊಂಡೇ ನೀವು ಇಲ್ಲಿಗೆ ಕೆಲಸಕ್ಕೆ ಹೋಗ್ಬೇಕು!

ಒಂದೊಂದು ಕಂಪನಿಯಲ್ಲಿ ಒಂದೊಂದು ವಿಚಿತ್ರ ನಿಯಮಗಳಿರುತ್ತವೆ. ಕೆಲವು ಉದ್ಯೋಗಿಗಳ ಪಾಲಿಗೆ ಅನುಕೂಲಕರವಾಗಿದ್ದರೆ ಇನ್ನು ಕೆಲವು ನಿಯಮಗಳು ಉದ್ಯೋಗಿಗಳ ಪಾಲಿಗೆ ಕಿರಿಕಿರಿ ಉಂಟು ಮಾಡುತ್ತವೆ. ಚೀನಾದ ಮ್ಯಾನುಫ್ಯಾಕ್ಚರಿಂಗ್ ಕಂಪನಿಯೊಂದರಲ್ಲಿ ಜಾರಿಗೆ ತಂದಿರುವ ವಿಚಿತ್ರ ನಿಯಮ ಇದೀಗ ಸಖತ್ ಸುದ್ದಿ ಮಾಡ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಈ ಕಂಪನಿಯಲ್ಲಿ ಶೌಚಾಲಯ ಬಳಕೆಗೆ ಕೇವಲ ಟೂ ಮಿನಿಟ್ಸ್ ಟೈಮ್!

ಸಾಂದರ್ಭಿಕ ಚಿತ್ರ.

Profile Sushmitha Jain Feb 24, 2025 8:00 AM

ಬೀಜಿಂಗ್: ಪ್ರತಿಯೊಂದು ಕಂಪನಿಗೂ ತನ್ನದೇ ಆದ ನೀತಿ-ನಿಯಮಗಳಿರುತ್ತವೆ. ತನ್ನ ಉದ್ಯೋಗಿಗಳು ಕಾರ್ಯಸ್ಥಳದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬುದರ ಸ್ಪಷ್ಟ ಸೂಚನೆಯನ್ನು ಕಂಪನಿಯೊಂದು ತನ್ನ ಎಚ್.ಆರ್. ವ್ಯವಸ್ಥೆಯ ಮೂಲಕ ತಮ್ಮ ಉದ್ಯೋಗಿಗಳಿಗೆ ಕಾಲ ಕಾಲಕ್ಕೆ ನೀಡುತ್ತದೆ. ಕಂಪನಿಯೊಂದಕ್ಕೆ ಸೇರಿ, ಅಲ್ಲಿನ ಒಪ್ಪಂದಕ್ಕೆ ಸಹಿ ಹಾಕಿದ ಉದ್ಯೋಗಿಯೊಬ್ಬರು ತಮಗೆ ಇಷ್ಟವಿರಲಿ, ಇಲ್ಲದಿರಲಿ ಕೆಲಸ ಮಾಡುವ ಸಂಸ್ಥೆಯ ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿರುತ್ತದೆ. ಈ ಹಿಂದೆ ಜಪಾನ್‌ನ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಆಫೀಸಿನಲ್ಲೇ ಮದ್ಯ ಸರಬರಾಜು ಮಾಡುವ ಮತ್ತು ಅವರಿಗೆ ಅಗತ್ಯವಿದ್ದಲ್ಲಿ ಹ್ಯಾಂಗೋವರ್ ಲೀವ್ ಗಳನ್ನು ನೀಡುವ ಸುದ್ದಿಯನ್ನು ತಿಳಿಸಿದ್ದೆವು (Viral News). ಆದರೆ ಇದೀಗ ಚೀನಾದ ಕಂಪನಿಯೊಂದು ತನ್ನ ವಿಚಿತ್ರ ರೂಲ್ ಮೂಲಕ ಸುದ್ದಿಯಾಗಿದೆ.

ಚೀನಾದ ಗೌಂಗ್ ಡಾಂಗ್ ಪ್ರಾಂತ್ಯದಲ್ಲಿರುವ ಕಂಪನಿಯೊಂದು ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಶೌಚಾಲಯ ಬಳಕೆಗೆ ನಿರ್ದಿಷ್ಟ ಸಮಯವನ್ನು ಫಿಕ್ಸ್ ಮಾಡುವ ಮೂಲಕ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಹೌದು, ಚೀನಾದ ಈ ಪ್ರಾಂತ್ಯದಲ್ಲಿರುವ ತ್ರಿ ಬ್ರದರ್ಸ್ ಮೆಷಿನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ತನ್ನ ಉದ್ಯೋಗಿಗಳಿಗಾಗಿ ‘ಶೌಚಾಲಯ ಬಳಕೆಯ ನಿರ್ವಹಣೆ ನಿಯಮ’ವನ್ನು ಜಾರಿಗೆ ತಂದಿದೆ. ತನ್ನ ಉದ್ಯೋಗಿಗಳ ಆರೊಗ್ಯದ ದೃಷ್ಟಿಯಿಂದ ಈ ನಿಯಮಾವಳಿಗಳನ್ನು ಜಾರಿಗೆ ತಂದಿರುವುದಾಗಿ ಈ ಕಂಪನಿ ಹೇಳಿಕೊಂಡಿದೆ. ಈ ನಿಯಮದ ಪ್ರಕಾರ ಈ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ದಿನದ ನಿರ್ಧಿಷ್ಟ ಸಮಯದಲ್ಲಿ ಕೇವಲ ಎರಡು ನಿಮಿಷಗಳ ಕಾಲವಷ್ಟೇ ಶೌಚಾಲಯವನ್ನು ಬಳಸಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಸಮಯ ಶೌಚಾಲಯವನ್ನು ಬಳಸುವ ಅಗತ್ಯತೆಯಿದ್ದಲ್ಲಿ ಎಚ್.ಆರ್. ಅನುಮತಿ ಪಡೆದುಕೊಳ್ಳುವುದು ಕಡ್ಡಾಯ.

ಇದನ್ನೂ ಓದಿ: Donald Trump: ಮಸ್ಕ್‌ ಮಗ ಸಿಂಬಳ ಒರೆಸಿದ್ದಕ್ಕೆ ಟ್ರಂಪ್‌ ಕಚೇರಿಯಿಂದ 145 ವರ್ಷ ಹಳೆಯ ರೆಸಲ್ಯೂಟ್ ಡೆಸ್ಕ್ ಬದಲಾವಣೆ?

ವಿಶೇಷ ಸನ್ನಿವೇಶಗಳಲ್ಲಿ ಅಥವಾ ಆರೋಗ್ಯ ಸಮಸ್ಯೆಗಳಿದ್ದ ಸಂದರ್ಭಗಳಲ್ಲಿ ಉದ್ಯೋಗಿಗಳು ನಿಗದಿಪಡಿಸಿದ ಸಂದರ್ಭಕ್ಕಿಂತ ಹೆಚ್ಚಿನ ಸಮಯ ಶೌಚಾಲಯವನ್ನು ಬಳಸಬೇಕಾಗಿದ್ದಲ್ಲಿ ಎಚ್.ಆರ್. ವಿಭಾಗದಿಂದ ವಿಶೇಷ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಈ ಕಂಪನಿ ಇತ್ತೀಚೆಗೆ ಹೊರಡಿಸಿರುವ ಈ ನಿಯಮಾವಳಿಯಲ್ಲಿ, ಕೆಲಸದ ಸಮಯದಲ್ಲಿ ತನ್ನ ಉದ್ಯೋಗಿಗಳು ಮಲ-ಮೂತ್ರ ವಿಸರ್ಜನೆಗೆ ಸಮಯವನ್ನು ನಿಗದಿಪಡಿಸಿದ್ದು, ಈ ನಿಯಮಾವಳಿಗೆ ಫೆ. 11ರಂದು ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಈ ನಿಯಮಾವಳಿ ಮಾ. 1ರಿಂದ ಜಾರಿಗೆ ಬರಲಿದೆ. ಈ ನಿಯಮವನ್ನು ಮೀರುವ ಉದ್ಯೋಗಿಗಳಿಗೆ ನಿರ್ದಿಷ್ಟ ಪ್ರಮಾಣದ ಪನಿಶ್‌ಮೆಂಟ್‌ ಇದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಈ ವಿಚಿತ್ರ ನಿಯಮಾವಳಿಯ ಕುರಿತು ಚೀನಾದ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದ್ದು, ತನ್ನ ಉದ್ಯೋಗಿಗಳ ಶೌಚಾಲಯ ಬಳಕೆಗೆ ಕಂಪನಿ ನಿಗದಿಪಡಿಸಿರುವ ಸಮಯಾವಕಾಶ ಹೀಗಿದೆ: ಬೆಳಿಗ್ಗೆ 8 ಗಂಟೆಗಿಂತ ಮುಂಚೆ, 10.30ರಿಂದ 10.40ರವರೆಗೆ, ಮಧ್ಯಾಹ್ನ 12.00 ರಿಂದ 1.30ರವರೆಗೆ, ಅಪರಾಹ್ನ 3.30 ರಿಂದ 3.40ರವರೆಗೆ, ಸಾಯಂಕಾಲ 5.30ರಿಂದ 6 ಗಂಟೆಯವರೆಗೆ ಅಥವಾ 9 ಗಂಟೆಯ ಬಳಿಕ. ಇವುಗಳನ್ನು ಹೊರತುಪಡಿಸಿ ಉಳಿದ ಸಮಯಗಳಲ್ಲಿ ಉದ್ಯೋಗಿಗಳು ಶೌಚಾಲಯಕ್ಕೆ ತೆರಳಿದರೆ ಎರಡು ನಿಮಿಷಗಳೊಳಗಾಗಿ ತಮ್ಮ ಪ್ಲೇಸ್‌ಗೆ ಹಿಂತಿರುಗಬೇಕು.