ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Champions Trophy scenarios: ಪಾಕ್‌ಗೆ ಇನ್ನೂ ಇದೆ ಸೆಮಿ ಅವಕಾಶ; ಹೇಗಿದೆ ಈ ಲೆಕ್ಕಾಚಾರ?

champions trophy semi final scenario: ಒಂದೊಮ್ಮೆ ನ್ಯೂಜಿಲ್ಯಾಂಡ್‌ ತಂಡ ಇಂದು ಬಾಂಗ್ಲಾ ವಿರುದ್ಧ ಸೋತು, ಭಾರತ ವಿರುದ್ಧ ಗೆದ್ದರೆ, ಬಾಂಗ್ಲಾ ಅಂತಿಮ ಪಂದ್ಯದಲ್ಲಿ ಪಾಕ್‌ ವಿರುದ್ಧ ಗೆದ್ದರೆ, ಆಗ ಭಾರತ, ಬಾಂಗ್ಲಾ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದಂತಾಗುತ್ತದೆ. ಆಗ ರನ್‌ರೇಟ್‌ ಆಧಾರದಲ್ಲಿ ಮುಂದಿರುವ 2 ತಂಡಗಳು ಸೆಮಿಗೆ ಪ್ರವೇಶಿಸಲಿದೆ.

ಪಾಕ್‌ಗೆ ಇನ್ನೂ ಇದೆ ಸೆಮಿ ಅವಕಾಶ; ಹೇಗಿದೆ ಈ ಲೆಕ್ಕಾಚಾರ?

Profile Abhilash BC Feb 24, 2025 10:15 AM

ದುಬೈ: ಚಾಂಪಿಯನ್ಸ್‌ ಟ್ರೋಫಿಯ 'ಎ' ಗುಂಪಿನಲ್ಲಿ ಈಗ ಸೆಮಿಫೈನಲ್‌(Champions Trophy scenarios) ಲೆಕ್ಕಾಚಾರ ಆರಂಭವಾಗಿ. ಈ ಗುಂಪಿನಲ್ಲಿ ಸತತ 2 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಬಹುತೇಕ ತನ್ನ ಸೆಮಿ ಫೈನಲ್‌ ಟಿಕೆಟ್‌ ಖಾತ್ರಿ ಪಡಿಸಿದೆ. ಸತತ 2 ಸೋಲು ಕಂಡಿರುವ ಹಾಲಿ ಚಾಂಪಿಯನ್‌ ಪಾಕಿಸ್ತಾನ ಹಲವು ಲೆಕ್ಕಾಚಾರ ಮತ್ತು ಪವಾಡವೊಂದು ಸಂಭವಿಸಿದರೆ ಸೆಮಿ ಪ್ರವೇಶಿಸುವ ಕ್ಷೀಣ ಅವಕಾಶವೊಂದನ್ನು ಹೊಂದಿದೆ. ಈ ಲೆಕ್ಕಾಚಾರದ ವರದಿ ಇಲ್ಲಿದೆ.

ಸದ್ಯ ಭಾರತ ಸೇಫ್‌...

ಭಾರತ ತಂಡ ಗುಂಪು ಹಂತದ ಮುಂದಿನ ಪಂದ್ಯದಲ್ಲಿ ಭಾನುವಾರ ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ. ಬಾಂಗ್ಲಾದೇಶ ವಿರುದ್ಧ ಸೋಮವಾರ ನ್ಯೂಜಿಲೆಂಡ್‌ ಗೆದ್ದರೆ, ಆಗ ಭಾರತ-ನ್ಯೂಜಿಲೆಂಡ್‌ ಪಂದ್ಯ ಔಪಚಾರಿಕ ಎನಿಸಲಿದೆ. ಉಭಯ ತಂಡಗಳೂ ಸೆಮಿಫೈನಲ್‌ಗೇರಲಿರುವುದರಿಂದ ಗುಂಪಿನಲ್ಲಿ ಅಗ್ರಸ್ಥಾನಕ್ಕಾಗಿ ಸೆಣಸಾಡಬೇಕಿದೆ. ಆಗ ಪಾಕ್‌ ಸೆಮಿಯಿಂದ ಅಧಿಕೃತವಾಗಿ ಹೊರಬೀಳಲಿದೆ.

ಇಂದು(ಫೆ.24) ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ನ್ಯೂಜಿಲ್ಯಾಂಡ್‌ ವಿರುದ್ಧ ಗೆದ್ದರೆ, ಪಾಕಿಸ್ತಾನದ ಸೆಮಿ ಆಸೆ ಜೀವಂತವಿರಲಿದೆ. ಇಲ್ಲೂ ಕೂಡ ಒಂದು ಲೆಕ್ಕಾಚಾರವಿದೆ. ನ್ಯೂಜಿಲ್ಯಾಂಡ್‌ ತಂಡ ಭಾರತ ವಿರುದ್ಧವೂ ಸೋಲು ಕಾಣಬೇಕು. ಆಗ ಬಾಂಗ್ಲಾ, ನ್ಯೂಜಿಲ್ಯಾಂಡ್‌ ತಲಾ ಒಂದೊಂದು ಪಂದ್ಯ ಗೆದ್ದಂತಾಗುತ್ತದೆ. ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾ ವಿರುದ್ಧ ಆಡಲಿದೆ. ಇಲ್ಲಿ ಪಾಕ್‌ ರನ್‌ ರೇಟ್‌ ಲೆಕ್ಕಾಚಾರದಲ್ಲಿ ಗೆದ್ದರೆ ಸೆಮಿಫೈನಲ್‌ ಪ್ರವೇಶಿಸಬಹುದು. ಪಾಕ್‌ನ ಸೆಮಿ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಇದನ್ನೂ ಓದಿ IND vs PAK: ಕೊಹ್ಲಿ ಶತಕ ವೈಭವ; ಪಾಕ್‌ ವಿರುದ್ಧ ಭಾರತಕ್ಕೆ 6 ವಿಕೆಟ್‌ ಜಯ

ಬಾಂಗ್ಲಾಗೂ ಇದೆ ಅವಕಾಶ

ಭಾರತ ವಿರುದ್ಧ ಸೋಲು ಕಂಡಿರುವ ಬಾಂಗ್ಲಾದೇಶಕ್ಕೂ ಸೆಮಿಗೆ ಲಗ್ಗೆಯಿಡುವ ಅವಕಾಶವಿದೆ. ಇಂದು ನ್ಯೂಜಿಲ್ಯಾಂಡ್‌ ವಿರುದ್ಧ ಮತ್ತು ಪಾಕ್‌ ವಿರುದ್ಧ ಗೆದ್ದರೆ, ಬಾಂಗ್ಲಾ ಕೂಡ ಸೆಮಿ ಪ್ರವೇಶಿಸಬಹುದು.

ಹೀಗಾದರೆ ರನ್‌ ರೇಟ್‌ ನಿರ್ಣಾಯಕ

ಒಂದೊಮ್ಮೆ ನ್ಯೂಜಿಲ್ಯಾಂಡ್‌ ತಂಡ ಇಂದು ಬಾಂಗ್ಲಾ ವಿರುದ್ಧ ಸೋತು, ಭಾರತ ವಿರುದ್ಧ ಗೆದ್ದರೆ, ಬಾಂಗ್ಲಾ ಅಂತಿಮ ಪಂದ್ಯದಲ್ಲಿ ಪಾಕ್‌ ವಿರುದ್ಧ ಗೆದ್ದರೆ, ಆಗ ಭಾರತ, ಬಾಂಗ್ಲಾ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದಂತಾಗುತ್ತದೆ. ಆಗ ರನ್‌ರೇಟ್‌ ಆಧಾರದಲ್ಲಿ ಮುಂದಿರುವ 2 ತಂಡಗಳು ಸೆಮಿಗೆ ಪ್ರವೇಶಿಸಲಿದೆ.