ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Upcoming IPO: ಐಪಿಒ ಮೂಲಕ 745 ಕೋಟಿ ರೂ ಸಂಗ್ರಹಕ್ಕೆ ಆನಂದ ರಾಠಿ ಗ್ರೂಪ್‌ ಸಜ್ಜು!

ಆನಂದ್ ರಾಠಿ ಗ್ರೂಪ್‌ನ ಬ್ರೋಕರೇಜ್ ಸಂಸ್ಥೆ ಐಪಿಒ ಮೂಲಕ ರೂ 745 ಕೋಟಿ ಸಂಗ್ರಹಿಸಲು ಮಾರುಕಟ್ಟೆ ನಿಯಂತ್ರಕ ಸೆಬಿಗೆಗೆ ಮತ್ತೆ ಅರ್ಜಿ ಸಲ್ಲಿಸಿದೆ. ಈ ಐಪಿಒಗೆ ಪ್ರಮುಖ ಹಣಕಾಸು ಕಂಪನಿಗಳಾದ ನುವಾಮ ವೆಲ್ತ್‌ ಮ್ಯಾನೇಜ್‌ ಮೆಂಟ್ ಲಿಮಿಟೆಡ್, ಡಿಎಎಂ ಕ್ಯಾಪಿಟಲ್ ಅಡ್ವೈಸರ್ಸ್‌ ಲಿಮಿಟೆಡ್ ಮತ್ತು ಆನಂದ್ ರಾಠಿ ಅಡ್ವೈಸರ್ಸ್‌ ಲಿಮಿಟೆಡ್‌ ಸಹಾಯ ಮಾಡಲಿವೆ.

745 ಕೋಟಿ ರೂ ಗೆ ಐಪಿಒ ತರಲು DRHP ಸಲ್ಲಿಸಿದ ಆನಂದ್ ರಾಠಿ!

Profile Pushpa Kumari Apr 2, 2025 8:48 PM

ನವದೆಹಲಿ: ಆನಂದ ರಾಠಿ (Anand Rathi) ಗ್ರೂಪ್‌ನ ಬ್ರೋಕರೇಜ್‌ ಅಂಗಸಂಸ್ಥೆ ಆನಂದ ರಾಠಿ ಶೇರ್ಸ್ ಆಂಡ್‌ ಬ್ರೋಕರ್ಸ್ ಐಪಿಒ(ಆರಂಭಿಕ ಸಾರ್ವಜನಿಕ ಕೊಡುಗೆ) ಪ್ರವೇಶಕ್ಕೆ ನಿರ್ಧರಿಸಿದ್ದು, ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ(SEBI) ಎದುರು ಎರಡನೇ ಬಾರಿಗೆ ಕರಡು ದಾಖಲೆಗಳನ್ನು (DRHP) ಸಲ್ಲಿಕೆ ಮಾಡಿದೆ.‌ ಐಪಿಒ ಮೂಲಕ 745 ಕೋಟಿ ರೂ ಸಂಗ್ರಹಕ್ಕೆ ಮುಂದಾಗಿರುವ ಸಂಸ್ಥೆ ಈ ಮೊದಲು ಡಿಸೆಂಬರ್‌ನಲ್ಲಿ ಕರಡು ದಾಖಲೆಗಳನ್ನು ಸಲ್ಲಿಕೆ ಮಾಡಿತ್ತು. 5 ರೂಪಾಯಿ ಮುಖಬೆಲೆಯ ಷೇರು ಇದಾಗಿದ್ದು 745 ಕೋಟಿ ರೂ ಮೌಲ್ಯದ ಷೇರುಗಳು ಸಂಪೂರ್ಣ ಹೊಸ ವಿತರಣೆ ಆಗಿದೆ. ಈ ಜೊತೆಗೆ ಬುಕ್‌ ರನ್ನಿಂಗ್‌ ಲೀಡ್‌ ಮ್ಯಾನೇಜರ್ಸ್ (BRLM) ಸಲಹೆಗಳನ್ನು ಪಡೆದು ಐಪಿಒ ಪೂರ್ವದಲ್ಲಿ 149 ಕೋಟಿ ರೂ ಸಂಗ್ರಹದ ಯೋಜನೆಯನ್ನು ಕೂಡ ಹೊಂದಿದೆ. ಐಪಿಒ ಪೂರ್ವ ಸಂಗ್ರಹ ಪೂರ್ಣಗೊಂಡರೆ ಹೊಸ ಸಂಚಿಕೆಯಿಂದ ಐಪಿಒ-ಪೂರ್ವ ನಿಯೋಜನೆಗೆ ಅನುಗುಣವಾಗಿ ಸಂಗ್ರಹಿಸಲಾದ ಮೊತ್ತವನ್ನು ಕಡಿಮೆ ಮಾಡಲಾಗುತ್ತದೆ.

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ದಿಂದ ಸಂಗ್ರಹಿಸಲಾದ ಮೊತ್ತದಲ್ಲಿ 550 ಕೋಟಿ ರೂ ಹಣವನ್ನು ದೀರ್ಘಕಾಲದ ಕಾರ್ಯನಿರತ ಬಂಡವಾಳದ ಅಗತ್ಯತೆಗೆ ಹಾಗೂ ಇನ್ನಿತರ ವ್ಯಾವಹಾರಿಕ ಅಗತ್ಯತೆಗೆ ಬಳಸಲಾಗುವುದು. ಈ ಕೊಡುಗೆಯನ್ನು ಬುಕ್‌ ಬಿಲ್ಡಿಂಗ್‌ ವ್ಯವಸ್ಥೆ ಮೂಲಕ ಕೈಗೊಳ್ಳಲಾಗುತ್ತಿದ್ದು ಶೇ. 50% ರಷ್ಟು ಅರ್ಹ ಸಾಂಸ್ಥಿಕ ಖರೀದಿದಾರರಿಗೆ, ಶೇ.15 ರಷ್ಟು ಸಾಂಸ್ಥಿಕವಲ್ಲದ ಖರೀದಿದಾರರಿಗೆ ಹಾಗೂ ಶೇ. 30 ರಷ್ಟು ಚಿಲ್ಲರೆ ವೈಯಕ್ತಿಕ ಹೂಡಿಕೆದಾರರಿಗೆ ಹಂಚಲಾಗಿದೆ.ಈ ಐಪಿಒಗೆ ಪ್ರಮುಖ ಹಣಕಾಸು ಕಂಪನಿಗಳಾದ ನುವಾಮ ವೆಲ್ತ್‌ ಮ್ಯಾನೇಜ್‌ಮೆಂಟ್ ಲಿಮಿಟೆಡ್, ಡಿಎಎಂ ಕ್ಯಾಪಿಟಲ್ ಅಡ್ವೈಸರ್ಸ್‌ ಲಿಮಿಟೆಡ್ ಮತ್ತು ಆನಂದ್ ರಾಠಿ ಅಡ್ವೈಸರ್ಸ್‌ ಲಿಮಿಟೆಡ್‌ ಸಹಾಯ ಮಾಡಲಿವೆ.

ಇದನ್ನು ಓದಿ: Bank Holidays: ಏಪ್ರಿಲ್‌ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಭರ್ಜರಿ ರಜೆ, ಗ್ರಾಹಕರು ಗಮನಿಸಿ

ಆನಂದ್‌ ರಾಠಿ ಹಣಕಾಸು ಸಂಸ್ಥೆ:

ಆನಂದ್ ರಾಠಿ ಷೇರ್ ಮತ್ತು ಸ್ಟಾಕ್ ಬ್ರೋಕರ್ಸ್ ಲಿಮಿಟೆಡ್, ‘ಆನಂದ್ ರಾಠಿ’ ಹೆಸರಿನಲ್ಲಿ ಹಣಕಾಸು ಸೇವೆಗಳನ್ನು ಈಗಾಗಲೇ ನೀಡುತ್ತಿದೆ. ಈ ಕಂಪನಿಯು ಗರಿಷ್ಠ ಹೂಡಿಕೆದಾರರಿಗೆ ಶ್ರೀಮಂತ ವ್ಯಕ್ತಿಗಳು ಮತ್ತು ಸಂಸ್ಥೆ ಗಳಿಗೆ ಸೇವೆ ಸಲ್ಲಿಸುತ್ತದೆ. ಆನಂದ್ ರಾಠಿ ಷೇರ್ ಮತ್ತು ಸ್ಟಾಕ್ ಬ್ರೋಕರ್ಸ್ ಭಾರತದ ಸುಮಾರು 54 ನಗರಗಳಲ್ಲಿ 90 ಶಾಖೆಗಳನ್ನು ಆರಂಭ ಮಾಡಿದೆ. ಈ ಕಂಪನಿಯು ಆನ್‌ಲೈನ್ ಮೂಲಕ ಸೇವೆಗಳನ್ನು ನೀಡು ತ್ತಿದ್ದು ಇದೀಗ ಐಪಿಒಗೆಗಾಗಿ ಕಂಪನಿಯು ಡಿಆರ್‌ಎಚ್‌ಪಿಯನ್ನು ಮರು ಸಲ್ಲಿಕೆ ಮಾಡಿದ್ದು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಈ ಕುರಿತು ಅಂತಿಮ ತೀರ್ಮಾನ ಮಾಡಲಿದೆ.