Viral Video: ಟಿಕ್‍ಟಾಕ್ ವಿಡಿಯೋಗಾಗಿ ರೋಗಿಯ ಜೊತೆ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ನರ್ಸ್; ವಿಡಿಯೊ ನೋಡಿ
ನರ್ಸ್ ಒಬ್ಬಳು ಟಿಕ್‍ಟಾಕ್ ವಿಡಿಯೊಗಳಿಗಾಗಿ ರೋಗಿಗಳ ಜೊತೆ ಅನುಚಿತವಾಗಿ ಡ್ಯಾನ್ಸ್ ಮಾಡಿದ್ದು, ಈ ಆಘಾತಕಾರಿ ವಿಡಿಯೊ ಜಾರ್ಜಿಯಾದ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ವೈರಲ್ ಆಗಿದೆ. ಮಾಹಿತಿ ತಿಳಿದ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಟಿಬಿಲಿಸಿ: ರೋಗಿಗಳ ಆರೈಕೆ ಮಾಡುವುದು ನರ್ಸ್‍ಗಳ ಕರ್ತವ್ಯವಾಗಿದೆ. ಆದರೆ ಇಲ್ಲೊಬ್ಬಳು ನರ್ಸ್ ಅಂಗವಿಕಲ ರೋಗಿಯ ಜೊತೆ ಅನುಚಿತವಾಗಿ ಡ್ಯಾನ್ಸ್ ಮಾಡುತ್ತಾ ಟಿಕ್‍ಟಾಕ್ ವಿಡಿಯೊಗಳನ್ನು ಮಾಡಿದ್ದಾಳೆ. ಈ ಆಘಾತಕಾರಿ ವಿಡಿಯೊ ಜಾರ್ಜಿಯಾದ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ಗಳಲ್ಲಿ ವೈರಲ್(Viral Video) ಆಗಿದೆ. ಸದ್ಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
19 ವರ್ಷದ ಲುಕ್ರೇಸಿಯಾ ಕೊರ್ಮಾಸ್ಸಾ ಕೊಯಿಯಾನ್ ಎಂಬ ಮಹಿಳೆ ಈ ಕೃತ್ಯವನ್ನು ಎಸಗಿದ್ದಾಳೆ. ವಿಡಿಯೊದ ಬಗ್ಗೆ ಲೋಗನ್ವಿಲ್ಲೆ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಲಾಗಿತ್ತು. ತನಿಖೆಯ ನಂತರ, ಅಧಿಕಾರಿಗಳು ಜನವರಿ 28 ರಂದು ಸರ್ಚ್ ವಾರಂಟ್ ಜಾರಿಗೊಳಿಸಿದರು, ಇದು ನರ್ಸ್ ಬಂಧನಕ್ಕೆ ಕಾರಣವಾಯಿತು. ನಂತರ ಆಕೆಯನ್ನು ವಾಲ್ಟನ್ ಕೌಂಟಿ ಜೈಲಿಗೆ ಕಳುಹಿಸಲಾಗಿದೆ.
🚨🇺🇸VIRAL TIKTOK LANDS GEORGIA HEALTHCARE WORKER IN JAIL
— Mario Nawfal (@MarioNawfal) January 31, 2025
Lucrecia Kormassa Koiyan, 19, was arrested after posting a shocking TikTok of herself dancing provocatively over a disabled patient in their home, police said.
The video shows Koiyan, wearing scrubs and a stethoscope,… pic.twitter.com/7xi7xkYoxm
ವಿಡಿಯೊದಲ್ಲಿ, ಆಕೆ ಕುರ್ಚಿ ಮೇಲೆ ಕುಳಿತಿರುವ ಅಂಗವಿಕಲ ರೋಗಿಯ ಜೊತೆ ನಿಂತು ಕನ್ನಡಿಯ ಮುಂದೆ ಕಾಮಪ್ರಚೋದಕವಾಗಿ ಡ್ಯಾನ್ಸ್ ಮಾಡುವುದು ಸೆರೆಯಾಗಿದೆ. ಲೋಗನ್ವಿಲ್ಲೆಯಲ್ಲಿರುವ ರೋಗಿಯ ನಿವಾಸದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವೈರಲ್ ಆದ ಮತ್ತೊಂದು ವಿಡಿಯೊದಲ್ಲಿ, ಆಕೆ ಡ್ಯಾನ್ಸ್ ಮಾಡುವಾಗ ಬಾತ್‍ಟಬ್‍ನ ಅಂಚುಗಳ ಮೇಲೆ ನಿಂತು ರೋಗಿಗೆ ತನ್ನ ಜೇಬಿನಿಂದ ಏನೋ ತೆಗೆದು ಬಲವಂತವಾಗಿ ತಿನ್ನಿಸುವುದು ಸೆರೆಯಾಗಿದೆ. ಹಾಗೇ ಆಕೆ ಈ ಬಾರಿ ಇನ್ನೊಬ್ಬ ರೋಗಿಯೊಂದಿಗೆ, ಬಾತ್‍ಟಬ್‍ನಲ್ಲಿ ಟಾಪ್ಲೆಸ್ ಆಗಿ ಮಲಗಿದ್ದಳು. ಇದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸುದ್ದಿಯನ್ನೂ ಓದಿ: Viral News: ಲಾಟರಿಯಲ್ಲಿ ಕೇರಳದ ನರ್ಸ್‌ಗೆ ಜಾಕ್‌ಪಾಟ್; ಇವರಿಗೆ ಸಿಕ್ಕ ಹಣ ನಿಮ್ಮ ಊಹೆಗೂ ಮೀರಿದ್ದು
ಜಾರ್ಜಿಯಾ ಪೊಲೀಸರು ಆಕೆಯ ವಿರುದ್ಧ ಮಾಹಿತಿ ಪಡೆದ ನಂತರ ಅವಳನ್ನು ಬಂಧಿಸಿದ್ದಾರೆ. ಆದರೆ ನಂತರ ಅವಳು 7,500 ಡಾಲರ್ ಬಾಂಡ್ ಪಾವತಿಸಿ ವಾಲ್ಟನ್ ಕೌಂಟಿ ಜೈಲಿನಿಂದ ಹೊರಬಂದಿದ್ದಾಳೆ ಎನ್ನಲಾಗಿದೆ. ಪೊಲೀಸ್ ಮುಖ್ಯಸ್ಥ ಎಂ.ಡಿ.ಲೋರಿ ಈ ವಿಡಿಯೊವನ್ನು "ಭಯಾನಕ ಮತ್ತು ಅಸಹ್ಯಕರ" ಎಂದು ಕರೆದಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.