ಅಪರಾಧ ಪ್ರಕರಣಗಳನ್ನು ಬೇಧಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು: ನಿವೃತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಚ್.ನಂಜುಂಡಯ್ಯ ಸಲಹೆ
ಅಪರಾಧ ಪ್ರಕರಣಗಳನ್ನು ಚುರುಕುತನದಿಂದ ಭೇದಿಸುವ ಕೌಶಲವನ್ನು ಬೆಳೆಸಿಕೊಳ್ಳಲು ನಿವೃತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಚ್.ನಂಜುಂಡಯ್ಯ ಸಲಹೆ ನೀಡಿದರು. ತಾಲೂಕಿನ ಅಣಕನೂರಿನಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿನ ಕವಾ ಯತು ಮೈದಾನದಲ್ಲಿ ಕೈಗೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಚಿಕ್ಕಬಳ್ಳಾಪುರ: ಅಪರಾಧ ಪ್ರಕರಣಗಳನ್ನು ಚುರುಕುತನದಿಂದ ಭೇದಿಸುವ ಕೌಶಲವನ್ನು ಬೆಳೆಸಿಕೊಳ್ಳಲು ನಿವೃತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಚ್.ನಂಜುಂಡಯ್ಯ ಸಲಹೆ ನೀಡಿದರು. ತಾಲೂಕಿನ ಅಣಕನೂರಿನಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣ ದಲ್ಲಿನ ಕವಾಯತು ಮೈದಾನದಲ್ಲಿ ಕೈಗೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಪೊಲೀಸರು ಮಾನವೀಯತೆ, ಸಮಾಜದ ಬಗೆಗಿನ ಪ್ರಾಮಾಣಿಕ ಕಳಕಳಿಯನ್ನು ಹೊಂದಿರ ಬೇಕು. ಕಾನೂನು ಸುವ್ಯವಸ್ಥೆಯ ಮೂಲಕ ಜನರು ಶಾಂತಿ, ನೆಮ್ಮದಿಯಿಂದ ಜೀವನ ನಡೆಸುವಂತಹ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯು ಮೊದಲಿನಿಂದಲೂ ಶಿಸ್ತು ಪಾಲನೆಗೆ ಹೆಸರುವಾಸಿ. ಒತ್ತಡವನ್ನು ನಿಭಾಯಿಸುತ್ತಲೇ ಸಮಾಜದ ಹಿತಕ್ಕಾಗಿ ನಿರಂತರ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿಸಿ ಕೊಳ್ಳುವಂತಹುದರಲ್ಲೂ ಮುಂಚೂಣಿಯಲ್ಲಿದೆ. ಇದರ ಗೌರವವನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಇದನ್ನೂ ಓದಿ: Chikkaballapur news: ಸಂವಿಧಾನವೇ ನಮ್ಮ ಧರ್ಮ ಗ್ರಂಥ : ಪ್ರೊ.ಬಿ.ರಾಮಚಂದ್ರಪ್ಪ
ಪೊಲೀಸ್ ಸಿಬ್ಬಂದಿ ಕಾನೂನು ನಿಯಮಗಳ ಬಗ್ಗೆ ಸಮರ್ಪಕ ಅರಿವು ಹೊಂದಿರಬೇಕು. ಆಗ ಮಾತ್ರ ಬೇರೆಯವರಿಂದ ಅಧಿಕಾರ ಚಲಾಯಿಸಿಕೊಳ್ಳುವಂತಹುದು ತಪ್ಪುತ್ತದೆ. ದೋಷಗಳಿಲ್ಲದೇ ಜವಾಬ್ದಾರಿ ನಿಭಾಯಿಸಲು ಸಹಕಾರಿಯಾಗುತ್ತದೆ ಎಂದರು.
ಪ್ರತಿಯೊಬ್ಬರಿಗೂ ದೈನಂದಿನ ಜೀವನದಲ್ಲಿ ಅನೇಕ ಸವಾಲುಗಳು ಎದುರಾಗುವಂತಹುದು ಸಹಜ. ಇದೇ ವೇಳೆ ದಿಟ್ಟತನವನ್ನು ಪ್ರದರ್ಶಿಸಬೇಕೇ ಹೊರತು ಹಿಂಜರಿಯಬಾರದು. ೊನೆಗೆ ನಿರಂತರ ಪ್ರಯತ್ನದಿಂದ ಯಶಸ್ವಿ ಲಭಿಸುತ್ತದೆ ಎಂದರು.
ನಿವೃತ್ತ ವೃತ್ತ ನಿರೀಕ್ಷಕ ತಬ್ರೆಆಲಂಪಾಷಾ ಮಾತನಾಡಿ, ಸೇನಾ ಪಡೆಗಳು ಗಡಿಯನ್ನು ಕಾಯುವ ಮಾದರಿಯಲ್ಲಿ ಪೊಲೀಸರು ಒಳಾಡಳಿತ ಪ್ರದೇಶದಲ್ಲಿ ರಕ್ಷಣೆಯಲ್ಲಿ ತೊಡಗಿ ದ್ದು ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ ಇಮಾಮ್ ಖಾಸಿಂ, ಉಪ ಪೊಲೀಸ್ ಅಧೀಕ್ಷಕ ಶಿವಕುಮಾರ್ ಮತ್ತಿತರರು ಇದ್ದರು.
ಪೊಲೀಸರ ಕಲ್ಯಾಣ ಸೇವೆ
ರಾಜ್ಯ ಪೊಲೀಸ್ ಪಡೆಯನ್ನು ೧೯೬೫ರ ಏ.೨ ರಂದು ಕರ್ನಾಟಕ ಪೊಲೀಸ್ ಕಾಯ್ದೆಗೆ ಒಳಪಡಿಸಲಾಯಿತು. ಇದರ ಸ್ಮರಣೆಗಾಗಿ ಪ್ರತಿ ವರ್ಷ ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತಿದೆ. ಇದೇ ವೇಳೆ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದ ತೋರಿದ ಶೌರ್ಯ, ಸಾಹಸ ಹಾಗೂ ನಿಸ್ವಾರ್ಥ ಸೇವೆಯನ್ನು ಸ್ಮರಿಸಲಾಗುತ್ತದೆ. ಪೊಲೀಸ್ ಧ್ವಜಗಳನ್ನು ಮಾರಿ, ಸಂಗ್ರಹವಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಅರ್ಪಿಸಲಾಗುತ್ತದೆ. ಇದರ ಮೂಲಕ ನಿವೃತ್ತಿ ಹೊಂದಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಕುಟುಂಬದವರ ಕ್ಷೇಮ ವನ್ನು ಕಾಪಾಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದರು.
ನಿವೃತ್ತರಿಗೆ ಸನ್ಮಾನ
ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಹಾಗೂ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಪೊಲೀಸರ ಮಕ್ಕಳನ್ನು ಸನ್ಮಾನಿಸಲಾಯಿತು. ವೆಂಕಟೇಶಪ್ಪ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್, ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿ ಪಥ ಸಂಚಲನ, ಧ್ವಜ ವಂದನೆ ಗಮನ ಸೆಳೆಯಿತು.