Stock Market: ಷೇರುಪೇಟೆ ಮಹಾ ಪತನದ ಬೆನ್ನಲ್ಲೇ ಸೆನ್ಸೆಕ್ಸ್ 1,000 ಪಾಯಿಂಟ್ಸ್ ಜಂಪ್- ಹೂಡಿಕೆದಾರರಿಗೆ ಕೊಂಚ ರಿಲೀಫ್
Stock Market: ಮಂಗಳವಾರ ಆಸ್ಟ್ರೇಲಿಯಾ ಮತ್ತು ಏಷ್ಯಾದ ಮಾರುಕಟ್ಟೆಗಳು ಚೇತರಿಕೆಯ ಲಕ್ಷಣಗಳನ್ನು ತೋರಿಸಿವೆ. ಜಪಾನ್‌ನ ನಿಕ್ಕಿ ಸೂಚ್ಯಂಕವು ಶೇ. 6 ರಷ್ಟು ಏರಿತು. ಟ್ರಂಪ್ ಮತ್ತು ಇನ್ನು ಚೀನಾದ ಬ್ಲೂ-ಚಿಪ್‌ಗಳು ಶೇ. 0.7 ರಷ್ಟು ಏರಿದರೆ, ದಕ್ಷಿಣ ಕೊರಿಯಾದ ಕೋಸ್ಪಿ ಶೇ. 1.7 ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಶೇ. 2.25 ರಷ್ಟು ಏರಿತು.


ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಪ್ರತೀಕಾರ ತೆರಿಗೆ ಪರಿಣಾಮವಾಗಿ ಭಾರತ ಸೇರಿದಂತೆ ವಿಶ್ವದ ಬಹುತೇಕ ಎಲ್ಲ ದೇಶಗಳ ಷೇರು ಮಾರುಕಟ್ಟೆಯಲ್ಲಿ(Stock Market) ರಕ್ತಪಾತ ಸಂಭವಿಸಿತ್ತು. ಈ ಆಘಾತ ಬೆನ್ನಲ್ಲೇ ಇಂದು ಮುಂಬೈ ಷೇರುಪೇಟೆ ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ 1,000 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆ ಕಂಡಿದ್ದು, ಹಸಿರು ಬಣ್ಣದಲ್ಲೇ ಮಾರುಕಟ್ಟೆ ಕಾರ್ಯಾರಂಭ ಮಾಡಿತು. ಇಂದು ನಿಫ್ಟಿ ಮತ್ತು ಸೆನ್ಸೆಕ್ಸ್ ಶೇ. 1.5 ಕ್ಕಿಂತ ಹೆಚ್ಚು ಜಿಗಿದವು, ನಿಫ್ಟಿ 22,500 ಕ್ಕಿಂತ ಹೆಚ್ಚು ಮತ್ತು ಸೆನ್ಸೆಕ್ಸ್ 74,200 ಕ್ಕಿಂತ ಹೆಚ್ಚು ವಹಿವಾಟು ನಡೆಸಿತು. ಎಲ್ಲಾ ವಲಯ ಸೂಚ್ಯಂಕಗಳು ತೀವ್ರ ಚೇತರಿಕೆ ಕಂಡವು. ಆ ಮೂಲಕ ತೀವ್ರ ನಷ್ಟದಿಂದ ಆತಂಕಕ್ಕೀಡಾಗಿದ್ದ ಹೂಡಿಕೆದಾರರಿಗೆ ರಿಲೀಫ್ ಸಿಕ್ಕಿದೆ.
ಮಂಗಳವಾರ ಆಸ್ಟ್ರೇಲಿಯಾ ಮತ್ತು ಏಷ್ಯಾದ ಮಾರುಕಟ್ಟೆಗಳು ಚೇತರಿಕೆಯ ಲಕ್ಷಣಗಳನ್ನು ತೋರಿಸಿವೆ. ಜಪಾನ್‌ನ ನಿಕ್ಕಿ ಸೂಚ್ಯಂಕವು ಶೇ. 6 ರಷ್ಟು ಏರಿತು. ಟ್ರಂಪ್ ಮತ್ತು ಇನ್ನು ಚೀನಾದ ಬ್ಲೂ-ಚಿಪ್‌ಗಳು ಶೇ. 0.7 ರಷ್ಟು ಏರಿದರೆ, ದಕ್ಷಿಣ ಕೊರಿಯಾದ ಕೋಸ್ಪಿ ಶೇ. 1.7 ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಶೇ. 2.25 ರಷ್ಟು ಏರಿತು. ಇಂಡೋನೇಷ್ಯಾದ ಜಕಾರ್ತಾ ಕಾಂಪೋಸಿಟ್ ಶೇ. 9 ಕ್ಕಿಂತ ಹೆಚ್ಚು ಕುಸಿದರೆ, ವಿಯೆಟ್ನಾಂನ ಬೆಂಚ್‌ಮಾರ್ಕ್ ಸೂಚ್ಯಂಕವು ಶೇ. 5 ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಥೈಲ್ಯಾಂಡ್‌ನ SET ಶೇ. 4 ಕ್ಕಿಂತ ಹೆಚ್ಚು ಕುಸಿದಿದೆ, ಆಸ್ಟ್ರೇಲಿಯಾದ S&P/ASX 200 ಆರಂಭಿಕ ಹಂತದಲ್ಲಿ ಶೇ. 0.18 ರಷ್ಟು ಏರಿಕೆ ಕಂಡಿದೆ. ಪ್ಯಾನ್-ಯುರೋಪಿಯನ್ STOXX 50 ಫ್ಯೂಚರ್‌ಗಳು ಶೇ. 2.2 ರಷ್ಟು ಏರಿಕೆ ಕಂಡರೆ, US S&P 500 ಫ್ಯೂಚರ್‌ಗಳು ಶೇ. 0.9 ರಷ್ಟು ಏರಿಕೆ ಕಂಡಿವೆ.
ಈ ಸುದ್ದಿಯನ್ನೂ ಓದಿ: Donald Trump: ಔಷಧಿ ಚೆನ್ನಾಗಿಯೇ ಕೆಲಸ ಮಾಡ್ತಿದೆ; ಸುಂಕ ನೀತಿ ಬಗ್ಗೆ ಟ್ರಂಪ್ ಸಮರ್ಥನೆ
ಸೋಮವಾರ ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 3,000ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡರೆ, ನಿಫ್ಟಿ ಕೂಡ 1,000ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿತು. ಹೂಡಿಕೆದಾರರಿಗೆ ಇದರಿಂದಾಗಿ ಇವತ್ತು 19 ಲಕ್ಷ ಕೋಟಿ ರುಪಾಯಿಗಳ ನೋಶನಲ್ ನಷ್ಟ ಉಂಟಾಗಿದೆ. ಹೀಗಾಗಿ ಇಂದು BLACK MONDAY ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸ್ಟಾಕ್ ಮಾರ್ಕೆಟ್‌ನ ಸೆಕ್ಟರ್‌ಗಳನ್ನು ಗಮನಿಸುವುದಿದ್ದರೆ, ನಿಫ್ಟಿ ಮೆಟಲ್ 8% ಮತ್ತು ನಿಫ್ಟಿ ಐಟಿ 7% ಕುಸಿತಕ್ಕೀಡಾಯಿತು. ನಿಫ್ಟಿ ಆಟೊ, ರಿಯಾಲ್ಟಿ ಮತ್ತು ತೈಲ ಮತ್ತು ಅನಿಲ ಸೂಚ್ಯಂಕಗಳು ತಲಾ 5% ಇಳಿಕೆಯಾಯಿತು. ವಿಶಾಲ ಮಾರುಕಟ್ಟೆಯಲ್ಲಿ ಸ್ಮಾಲ್ ಕ್ಯಾಪ್ ಷೇರುಗಳು 10% ಮತ್ತು ಮಿಡ್ ಕ್ಯಾಪ್‌ಗಳು 7.3% ಕುಸಿತಕ್ಕೀಡಾಯಿತು. ಬೆಳಗ್ಗೆ 9:16 ಕ್ಕೆ ಬಿಎಸ್‌ಇ ಸೆನ್ಸೆಕ್ಸ್ 3,072 ಅಂಕ ಕುಸಿತಕ್ಕೀಡಾಯಿತು. ನಿಫ್ಟಿ 50 ಸೂಚ್ಯಂಕವೂ 1,146 ಅಂಕಿ ಇಳಿಯಿತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಸೆನ್ಸೆಕ್ಸ್ 72,133 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 21,872ರ ಮಟ್ಟದಲ್ಲಿತ್ತು. 12.20ರ ವೇಳೆಗೆ ಸೆನ್ಸೆಕ್ಸ್ 3,200 ಅಂಕಗಳ ಕುಸಿತಕ್ಕೀಡಾಯಿತು. ಬಿಎಸ್‌ಇನಲ್ಲಿ ಲಿಸ್ಟೆಡ್ ಆಗಿರುವ ಎಲ್ಲ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 19 ಲಕ್ಷ ಕೋಟಿ ರುಪಾಯಿ ಇಳಿಕೆಯಾಯಿತು. 383 ಲಕ್ಷ ಕೋಟಿ ರುಪಾಯಿಗೆ ಇಳಿಯಿತು.