Friday, 13th December 2024

ಪಂಜಾಬ್‌’ನಲ್ಲಿ ನೈಟ್‌ ಕರ್ಫ್ಯೂ ಅವಧಿ ವಿಸ್ತರಣೆ: ಏಪ್ರಿಲ್ 30 ರವರೆಗೆ ಬಂದ್‌

ಚಂಡೀಗಢ: ಕರೊನಾ ಹೆಚ್ಚಳದ ಹಿನ್ನೆಲೆಯಲ್ಲಿ‌ ಪಂಜಾಬ್ ಸರ್ಕಾರ ನೈಟ್‌ ಕರ್ಫ್ಯೂ ಅವಧಿಯನ್ನು ವಿಸ್ತರಿಸಿದ್ದು, ಖಾಸಗಿ ಲ್ಯಾಬ್ʼಗಳ ಆರ್ ಟಿ-ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಟೆಸ್ಟಿಂಗ್ (ಆರ್ ಎಟಿ) ಬೆಲೆಯನ್ನ ಕ್ರಮವಾಗಿ ₹450 ಮತ್ತು ₹300ಕ್ಕೆ ಇಳಿಸಿದೆ.

ಅಧಿಸೂಚನೆ ಬಿಡುಗಡೆ ಮಾಡಿದ ಸರ್ಕಾರ, ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗಿದ್ದ ಕರ್ಫ್ಯೂ ಸಮಯವನ್ನ ರಾತ್ರಿ 8 ರಿಂದ ಬೆಳಿಗ್ಗೆ 5 ರವರೆಗೆ ವಿಸ್ತರಿಸಿದೆ. ಏಪ್ರಿಲ್ 30 ರವರೆಗೆ ಎಲ್ಲಾ ಬಾರ್ʼಗಳು, ಸಿನೆಮಾ ಹಾಲ್ʼಗಳು, ಜಿಮ್ʼಗಳು, ಸ್ಪಾಗಳು, ಕೋಚಿಂಗ್ ಕೇಂದ್ರ ಗಳು, ಕ್ರೀಡಾ ಸಂಕೀರ್ಣಗಳನ್ನು ಮುಚ್ಚಲು ಆದೇಶಿಸಿದೆ.

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಭೆ ಸೇರುವುದನ್ನು ತಪ್ಪಿಸಲು ರಾಮನವಮಿ ಸಂದರ್ಭ ಮೊಹಾಲಿ ಬುಧವಾರ ಸಂಪೂರ್ಣ ಲಾಕ್ ಡೌನ್ʼನಲ್ಲಿರುತ್ತದೆ’ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.