Pune Horror: ಚಾಕು ತೋರಿಸಿ ಬೆದರಿಕೆ.. ಸೋದರ ಸಂಬಂಧಿ ಜೊತೆ ಅಶ್ಲೀಲ ಕೃತ್ಯಕ್ಕೆ ಒತ್ತಾಯ, ನಂತರ ಮಹಿಳೆ ಮೇಲೆ ರೇಪ್; ಹಣ ದೋಚಿ ಎಸ್ಕೇಪ್!
ಚಾಕು ತೋರಿಸಿ ಬೆದರಿಕೆವೊಡ್ಡಿ ಸೋದರ ಸಂಬಂಧಿ ಜೊತೆಗೇ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಬಳಿಕ ಇಬ್ಬರು ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಹೀನ ಕೃತ್ಯದ ಬಳಿಕ ಕಿಡಿಗೇಡಿಗಳು ಮಹಿಳೆ ಮತ್ತು ಆಕೆ ಸೋದರ ಸಂಬಂಧಿ ಬಳಿಯಿಂದ ಹಣ, ಒಡವೆ ದೋಚಿ ಎಸ್ಕೇಪ್ ಆಗಿದ್ದಾರೆ.


ಪುಣೆ: ನಿರ್ಜನ ಪ್ರದೇಶದಲ್ಲಿ ಸೋದರ ಸಂಬಂಧಿ ಜೊತೆ ಇದ್ದ ಮಹಿಳೆ ಮೇಲೆ ಇಬ್ಬರು ಕಿಡಿಗೇಡಿಗಳು ಅತ್ಯಾಚಾರ ಎಸಗಿ ಆಕೆಯ ಬಳಿ ಇದ್ದ ಹಣ ಮತ್ತು ಒಡವೆ ದೋಚಿ ಪರಾರಿಯಾಗಿದ್ದಾರೆ. ಇದಕ್ಕೂ ಮುನ್ನ ಚಾಕು ಹಿಡಿದು ಬೆದರಿಸಿ ಆಕೆ ಮತ್ತು ಜತೆಗಿದ್ದ ಸೋದರ ಸಂಬಂಧಿ ಅಶ್ಲೀಲ ಕೃತ್ಯದಲ್ಲಿ ತೊಡಗುವಂತೆ ಒತ್ತಾಯಿಸಿ ಅದನ್ನು ರೆಕಾರ್ಡ್ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಕ್ಷಣವೇ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಘಟನೆ?
ಪುಣೆಯ ಶಿರೂರ್ ತಹಸಿಲ್ ಪ್ರದೇಶದಲ್ಲಿ ಶನಿವಾರ 19ವರ್ಷದ ಮಹಿಳೆ ತನ್ನ ಸೋದರಸಂಬಂಧಿ ಜೊತೆ ನಿರ್ಜನ ಪ್ರದೇಶದಲ್ಲಿ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದರು. ಅಲ್ಲಿಗೆ ಬೈಕ್‌ನಲ್ಲಿ ಬಂದ ಇಬ್ಬರು ಮಧ್ಯವಯಸ್ಕ ಯುವಕರು ಅವರಿಗೆ ಚಾಕು ತೋರಿಸಿ ಬೆದರಿಕೆವೊಡ್ಡಿದ್ದಾರೆ. ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದರು. ಅದಕ್ಕೊಪ್ಪದೇ ಇದ್ದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಮಹಿಳೆ ಮತ್ತು ಜತೆಗಿದ್ದ ಯುವಕನ ಅಶ್ಲೀಲ ವಿಡಿಯೊವನ್ನು ಚಿತ್ರೀಕರಿಸಿಕೊಂಡ ಕಿಡಿಗೇಡಿಗಳು, ಮಹಿಳೆ ಮೇಲೆ ಒಬ್ಬರಾದ ಮೇಲೊಬ್ಬರಂತೆ ಎರಗಿ ಅತ್ಯಾಚಾರ ಮಾಡಿದ್ದಾರೆ. ಕೊನೆಗೆ ಆಕೆಯ ಮೂಗುತ್ತಿ ಮತ್ತು ಪೆಂಡೆಂಟ್ ಸೇರಿದಂತೆ ಚಿನ್ನದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ರಂಜನ್‌ಗಾಂವ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಹಾದೇವ್ ವಾಘ್ಮೋಡೆ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Pune Horror: ಪುಣೆ ಅತ್ಯಾಚಾರ ಪ್ರಕರಣ: ಶಂಕಿತನ ಫೋಟೋ ಬಿಡುಗಡೆ, ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ
ಆರೋಪಿ ಅರೆಸ್ಟ್
ಈ ಘಟನೆಯ ನಂತರ ಮಹಿಳೆ 112 ಗೆ ಕರೆ ಮಾಡಿ ಅಪರಾಧದ ಬಗ್ಗೆ ದೂರು ನೀಡುವಲ್ಲಿ ಯಶಸ್ವಿಯಾದರು ಎಂದು ವಾಘ್ಮೋಡೆ ಹೇಳಿದರು. ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ ಆರೋಪಿಗಳನ್ನು ಬಂಧಿಸಲು ತಕ್ಷಣವೇ ಕ್ರಮ ಕೈಗೊಂಡರು ಎಂದು ಅವರು ಹೇಳಿದರು. ಮಹಿಳೆ ನೀಡಿದ ವಿವರಣೆಯ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ದರೋಡೆ ಮಾಡಲಾದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಮಾರ್ಚ್ 7 ರ ಶುಕ್ರವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ವಾರದ ದಿಂದೆಯಷ್ಟೇ ಪುಣೆಯಲ್ಲಿ ಇಂಹತದೇ ಒಂದು ಘೋರ ಕೃತ್ಯ ನಡೆದಿತ್ತು. ಫೆ. 25ರ ಬೆಳಗ್ಗೆ ಮಹಿಳೆ ಪ್ಲಾಟ್‌ಫಾರ್ಮ್‌ನಲ್ಲಿ ಪೈಥಾನ್‌ಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ಮಹಿಳೆ ಬಳಿಗೆ ಬಂದು ಸಹೋದರಿ ಎಂದು ಕರೆದು ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿದ್ದಾನೆ. ಆಕೆಯನ್ನು ನಿಲ್ದಾಣದ ಆವರಣದಲ್ಲಿ ಬೇರೆಡೆ ನಿಲ್ಲಿಸಿದ್ದ ಶಿವಶಾಹಿ ಎಸಿ ಬಸ್ಸಿನ ಬಳಿಗೆ ಕರೆದೊಯ್ದಿದ್ದಾನೆ. ನಂತರ ಬಸ್ಸಿನೊಳಗಿನ ದೀಪಗಳು ಉರಿಯದ ಕಾರಣ ಮೊದಲು ಬಸ್ ಹತ್ತಲು ಹಿಂಜರಿದಳು, ಆದರೆ ಆ ವ್ಯಕ್ತಿ ಅದು ಸರಿಯಾದ ವಾಹನ ಎಂದು ಮನವೊಲಿಸಿ ಒಳಗೆ ಹೋಗಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದ. ಅಲ್ಲದೇ ಈ ಕೃತ್ಯದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.