Physical Abuse: ವಿದ್ಯೆ ಕಲಿಸುವ ಗುರುವೇ ಮಂಚಕ್ಕೆ ಕರೆದ; ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ವಿದ್ಯಾರ್ಥಿನಿ
ಕಾಲೇಜಿನ ವಿಭಾಗ ಮುಖ್ಯಸ್ಥ ಶಿಕ್ಷಕರೊಬ್ಬರು ಲೈಂಗಿಕ ಕಿರುಕುಳ ನೀಡಿದ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ. ಶಿಕ್ಷಕ ತಾನು ಹೇಳಿದ ಹಾಗೆ ಕೇಳದೆ ಇದ್ದರೆ ನಿನ್ನ ಭವಿಷ್ಯವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.


ಭುವನೇಶ್ವರ: ಕಾಲೇಜಿನ ವಿಭಾಗ ಮುಖ್ಯಸ್ಥ ಶಿಕ್ಷಕರೊಬ್ಬರು ಲೈಂಗಿಕ (Physical Abuse) ಕಿರುಕುಳ ನೀಡಿದ ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು (Self Harming) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ. ಶಿಕ್ಷಕ ತಾನು ಹೇಳಿದ ಹಾಗೆ ಕೇಳದೆ ಇದ್ದರೆ ನಿನ್ನ ಭವಿಷ್ಯವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿಯನ್ನು ಉಳಿಸಲು ಹೋದ ಆಕೆಯ ಗೆಳತಿಗೂ ಬೆಂಕಿ ತಗುಲಿದ್ದು, ಆಕೆಯ ದೇಹ ಸಹ ಶೇ 70 ರಷ್ಟು ಸುಟ್ಟು ಹೋಗಿದೆ.
ವಿಭಾಗದ ಮುಖ್ಯಸ್ಥರನ್ನು ಬಂಧಿಸಲಾಗಿದೆ ಹಾಗೂ ಕಾಲೇಜು ಪ್ರಾಂಶುಪಾಲರನ್ನು ಉನ್ನತ ಶಿಕ್ಷಣ ಇಲಾಖೆಯು ಅಮಾನತುಗೊಳಿಸಿದೆ. ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್ ಹೇಳಿದ್ದಾರೆ. ಇಂಟಿಗ್ರೇಟೆಡ್ ಬಿ.ಎಡ್ ಕಾರ್ಯಕ್ರಮದ ವಿದ್ಯಾರ್ಥಿನಿಯಾಗಿದ್ದ ಆ ಯುವತಿ ಜುಲೈ 1 ರಂದು ಫಕೀರ್ ಮೋಹನ್ ಕಾಲೇಜಿನ ಆಂತರಿಕ ದೂರು ಸಮಿತಿಗೆ ದೂರು ನೀಡಿದ್ದರು. ತನ್ನ ವಿಭಾಗದ ಮುಖ್ಯಸ್ಥ ಸಮೀರ್ ಕುಮಾರ್ ಸಾಹು ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಳು. ಏಳು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿವಿದ್ಯಾರ್ಥಿನಿಗೆ ಭರವಸೆ ನೀಡಲಾಗಿತ್ತು, ಆದರೆ ಏನೂ ಆಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಶನಿವಾರ, ವಿದ್ಯಾರ್ಥಿನಿ ಹಾಗೂ ಇತರರು, ಕಾಲೇಜಿನ ಗೇಟ್ ಹೊರಗೆ ಪ್ರತಿಭಟನೆ ಆರಂಭಿಸಿದರು. ಆಕೆಯ ಸಹ ವಿದ್ಯಾರ್ಥಿಗಳು ಹೇಳುವಂತೆ, ಆಕೆ ಇದ್ದಕ್ಕಿದ್ದಂತೆ ಎದ್ದು, ಪ್ರಾಂಶುಪಾಲರ ಕಚೇರಿಯ ಸಮೀಪವಿರುವ ಪ್ರದೇಶಕ್ಕೆ ಓಡಿಹೋಗಿ, ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಳು. ಒಬ್ಬ ವ್ಯಕ್ತಿ ಅವಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾನೆ, ಆದರೆ ಅವನ ಟೀ-ಶರ್ಟ್‌ಗೆ ಬೆಂಕಿ ಹೊತ್ತಿಕೊಂಡ ನಂತರ ಅವನು ಹಿಂದೆ ಸರಿಯುತ್ತಾನೆ.
ಈ ಸುದ್ದಿಯನ್ನೂ ಓದಿ: Physical Abuse: ''ಬ್ಲೌಸ್ ಒಳಗೆ ಕೈ ಹಾಕಿದ’': ಮಲೇಷ್ಯಾದ ಅರ್ಚಕನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ನಟಿ
ಆ ವಿದ್ಯಾರ್ಥಿನಿ ಇಂದು ನನ್ನ ಕಚೇರಿಯಲ್ಲಿ ನನ್ನನ್ನು ಭೇಟಿಯಾಗಿ ತಾನು ತೀವ್ರ ಮಾನಸಿಕ ಒತ್ತಡವನ್ನು ಎದುರಿಸುತ್ತಿರುವುದಾಗಿ ಹೇಳಿದಳು. ಸಾಹು ಅವರನ್ನು ಕಚೇರಿಗೆ ಕರೆಯಲು ಅವಳು ನನ್ನನ್ನು ಕೇಳಿಕೊಂಡಳು, ನಾನು ಕರೆ ಮಾಡಿದೆ". ದುಡುಕಿ ಈ ನಿರ್ಧಾರ ಕೈಗೊಂಡಿದ್ದಾಳೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.