ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UP Horror: ಆಸ್ತಿ ವಿವಾದ; ಮಹಿಳೆಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಂದು, ಸುಟ್ಟು ಹಾಕಿದ ವ್ಯಕ್ತಿ

ಉತ್ತರ ಪ್ರದೇಶದ ಇಟಾವಾದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಮಹಿಳೆಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಸುಟ್ಟು ಹಾಕಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆಗೆ ಮದ್ಯ ಕುಡಿಸಿ, ಕತ್ತು ಹಿಸುಕಿ  ಕೊಂದು, ಸುಟ್ಟು ಹಾಕಿದ ವ್ಯಕ್ತಿ

Profile Vishakha Bhat Apr 13, 2025 2:26 PM

ಲಖನೌ: ಉತ್ತರ ಪ್ರದೇಶದ ಇಟಾವಾದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಮಹಿಳೆಗೆ ಮದ್ಯ ಕುಡಿಸಿ, ಕತ್ತು ಹಿಸುಕಿ ಕೊಲೆ(Murdre) ಮಾಡಿ ಬಳಿಕ ಸುಟ್ಟು ಹಾಕಿದ್ದಾನೆ. ಆರೋಪಿಗಳಾದ ಶಿವೇಂದ್ರ ಯಾದವ್ (26) ಮತ್ತು ಆತನ ಸಹಾಯಕ ಗೌರವ್ (19) ಮೊದಲು ಆಸ್ತಿ ದಾಖಲೆಗಳನ್ನು ನೀಡಲು ಸಂತ್ರಸ್ತೆ 25 ವರ್ಷದ ಅಂಜಲಿಗೆ ಕರೆ ಮಾಡಿ, ನಂತರ ಆಕೆಗೆ ಮದ್ಯ ಕುಡಿಸಿ, ಉಸಿರುಗಟ್ಟಿಸಿ ಕೊಂದು, ಸುಟ್ಟು ಹಾಕಿ, ಶವವನ್ನು ನದಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಐದು ದಿನಗಳಿಂದ ಕಾಣೆಯಾಗಿದ್ದ ಅಂಜಲಿಯ ಶವ ಶನಿವಾರ ನದಿಯ ಬಳಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆರೋಪಿಯು ತನ್ನ ತಂದೆ ಮತ್ತು ಹೆಂಡತಿಗೆ ವೀಡಿಯೊ ಕರೆ ಮಾಡಿ ಸಂತ್ರಸ್ತೆಯ ಶವವನ್ನು ತೋರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳ ಕುಟುಂಬ ಸದಸ್ಯರು ಚರಂಡಿಯ ಬಳಿ ಸುಟ್ಟು ಕರಕಲಾದ ಸ್ಕೂಟರ್ ಅನ್ನು ಕಂಡುಕೊಂಡ ನಂತರ ಆಕೆಯ ವ್ಯವಹಾರ ಪಾರ್ಟ್ನರ್ ಆಗಿದ್ದ ವ್ಯಕ್ತಿ ಮೇಲೆ ಕೊಲೆ ಆರೋಪ ಹೊರಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದರು. ಆಕೆಯ ಸಹೋದರಿ ಕಿರಣ್ ಹೇಳುವಂತೆ ಆರೋಪಿಯು ಅಂಜಲಿಯಿಂದ ಭೂಮಿಗಾಗಿ 6 ​​ಲಕ್ಷ ರೂ.ಗಳನ್ನು ಪಡೆದಿದ್ದ. ನಂತರ ದಾಖಲೆಗಳನ್ನು ನೀಡುವ ನೆಪದಲ್ಲಿ ಅವನು ತನಗೆ ಕರೆ ಮಾಡಿ ಆಕೆಯನ್ನು ಕೊಂದಿದ್ದಾನೆ ಎಂದು ಹೇಳಿದ್ದಾರೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ ಯಾದವ್ ಮತ್ತು ಆತನ ಪತ್ನಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಮಗಳ್ನೇ ತಂದೆಯೇ ಹತ್ಯೆ ಮಾಡಿದ್ದಾನೆ ಎನ್ನಲಾದ ಘಟನೆ ಬಿಹಾರದ ಸಮಸ್ತಿಪುರದಲ್ಲಿ (Bihar Samastipur) ನಡೆದಿದೆ. ಮುಖೇಶ್ ಸಿಂಗ್ ಎಂಬಾತನೇ ತನ್ನ ಮಗಳನ್ನು ಕೊಲೆ ಮಾಡಿದ ತಂದೆ. ಸಮಸ್ತಿಪುರದ ನಿವಾಸಿ ಆಗಿರುವ ಸಾಕ್ಷಿ ತನ್ನ ಕಾಲೇಜಿನಲ್ಲೇ ಓದುತ್ತಿದ್ದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಮಗಳ ಪ್ರೇಮ ಪುರಾಣ ಹೆತ್ತವರಿಗೆ ತಿಳಿದು ಈ ವಿಷಯ ದೊಡ್ಡ ಜಗಳವೇ ನಡೆದಿತ್ತು. ಸಾಕ್ಷಿಯ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಮಗಳ ಪ್ರೀತಿ ವಿಚಾರ ತಿಳಿದ ಮೇಲೆ ಯುವಕನಿಂದ ದೂರವಿರುವಂತೆ ಮುಖೇಶ್ ಸಿಂಗ್ ಎಚ್ಚರಿಕೆ ನೀಡಿದ್ದ.

ಈ ಸುದ್ದಿಯನ್ನೂ ಓದಿ: Basanagouda Patil Yatnal: ಯತ್ನಾಳ್‌ ಹತ್ಯೆಗೆ ಸಂಚು; ಆಡಿಯೋ ಬೆನ್ನಲ್ಲೇ ಮತ್ತೊಂದು ಸ್ಫೋಟಕ ವಿಡಿಯೋ ವೈರಲ್‌!

ಮಗಳನ್ನು ಹೊಡೆದು ಬಡೆದು ಬುದ್ಧಿ‌ ಹೇಳಿದ್ರು‌ ಮಗಳು ಸುಧಾರಿಸಿರಲಿಲ್ಲ. ಅಲ್ಲದೇ ಮನೆಯವರ ಒಪ್ಪಿಗೆ ಸಿಗದ ಹಿನ್ನಲೆ ಸಾಕ್ಷಿ ಮನ ಮೆಚ್ಚಿದ ಹುಡುಗನೊಂದಿಗೆ ದಿಲ್ಲಿಗೆ ಓಡಿ ಹೋಗಿದ್ದಳು. ಇದು ಮಗಳ ಮೇಲೆ ತಂದೆಗೆ ಇರೋ ಕೋಪ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ಎರಡು ದಿನ ಸುಮ್ಮನಿದ್ದು ಮೂರನೇ ದಿನ ಆಕೆಯನ್ನು ಕೊಲೆ ಮಾಡಿದ್ದಾರೆ. ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.