ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಟ್ರಂಪ್‌ ಹತ್ಯೆ ಮಾಡಲು ಪೋಷಕರನ್ನೇ ಕೊಂದ ಯುವಕ; ಯಾರು ಈ ಆರೋಪಿ ನಿಕಿತಾ ಕಾಸಾಪ್?

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹತ್ಯೆಗೆ ಸಂಚು ರೂಪಿಸಿದ್ದ ವಿಸ್ಕಾನ್ಸಿನ್‌ನ 17 ವರ್ಷದ ನಿಕಿತಾ ಕಾಸಾಪ್ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಿ ಸರ್ಕಾರವನ್ನು ಉರುಳಿಸುವ ಸಲುವಾಗಿ ತನ್ನ ಪೋಷಕರನ್ನೇ ಕೊಂದಿದ್ದಾನೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಟ್ರಂಪ್‌ ಹತ್ಯೆ ಮಾಡಲು ಪೋಷಕರನ್ನೇ ಕೊಂದ ಯುವಕ!

Profile Vishakha Bhat Apr 14, 2025 9:47 AM

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಹತ್ಯೆಗೆ ಸಂಚು ರೂಪಿಸಿದ್ದ ವಿಸ್ಕಾನ್ಸಿನ್‌ನ 17 ವರ್ಷದ ನಿಕಿತಾ ಕಾಸಾಪ್ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಿ ಸರ್ಕಾರವನ್ನು ಉರುಳಿಸುವ ಸಲುವಾಗಿ ತನ್ನ ಪೋಷಕರನ್ನೇ ಕೊಂದಿದ್ದಾನೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ತನ್ನ ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ಹಣ ಕ್ರೋಢೀಕರಿಸಲು ಮತ್ತು ಅಗತ್ಯ ಸ್ವಾತಂತ್ರ್ಯ ಪಡೆಯಲು 17 ವರ್ಷದ ಯುವಕ ತನ್ನ ಪೋಷಕರನ್ನೇ ಹತ್ಯೆ ಮಾಡಿದ್ದಾನೆ. ಫೆಬ್ರವರಿ 11 ರಂದು ನಿಕಿತಾ ಕಾಸಾಪ್ ತನ್ನ ತಾಯಿ ಟಟಿಯಾನಾ ಕಾಸಾಪ್ (35) ಮತ್ತು ಮಲತಂದೆ ಡೊನಾಲ್ಡ್ ಮೇಯರ್ (51) ಅವರನ್ನು ಮನೆಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಳೆದ ಮಾರ್ಚ್‍ನಲ್ಲಿ ನಿಕಿಟಾ ಕಸಪ್ ಎಂಬ ಯುವಕನನ್ನು ವೂಕೇಶಾದಲ್ಲಿರುವ ಆತನ ಮನೆಯಿಂದಲೇ ಅವನನ್ನು ಬಂಧಿಸಿದ್ದರು. ವಿಚಾರಣೆಯಲ್ಲಿ ಆತ ಟ್ರಂಪ್‌ ಅವರ ಹತ್ಯೆಗೆ ಯೋಜನೆ ರೂಪಿಸಿದ್ದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೆ ಉಗ್ರಗಾಮಿ ಸಂಚು ರೂಪಿಸಲು "ಆರ್ಥಿಕ ಸ್ವಾತಂತ್ರ್ಯವನ್ನು ಪೋಷಕರ ಕೊಲೆ ಮಾಡಿದ್ದಾಗಿ ಆತ ಹೇಳಿದ್ದಾನೆ. ರಾಜಕೀಯ ಮುಖಂಡರನ್ನು ಹತ್ಯೆ ಮಾಡಿ ಅರಾಜಕತೆ ಸೃಷ್ಟಿಸುವ ಯೋಜನೆ, ಯುವಕನ ಬಳಿ ಪತ್ತೆಯಾದ ಮೂರು ಪುಟಗಳ ದಾಖಲೆಯಿಂದ ಪತ್ತೆಯಾಗಿದೆ. "ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಹತ್ಯೆ ಮಾಡುವುದರಾಜಕೀಯ ಮುಖಂಡರನ್ನು ಹತ್ಯೆ ಮಾಡಿ ಅರಾಜಕತೆ ಸೃಷ್ಟಿಸುವ ಯೋಜನೆ, ಯುವಕನ ಬಳಿ ಪತ್ತೆಯಾದ ಮೂರು ಪುಟಗಳ ದಾಖಲೆಯಿಂದ ಪತ್ತೆಯಾಗಿದೆ. "ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಹತ್ಯೆ ಮಾಡುವುದರಿಂದ ಅರಾಜಕತೆ ಸೃಷ್ಟಿಯಾಗುವುದು ಖಚಿತ" ಎಂದು ಯುವಕ ಬರೆದಿರುವುದು ತಿಳಿದು ಬಂದಿದೆ. ಫೆಬ್ರುವರಿ 11ರಂದು ಈ ಹತ್ಯೆ ನಡೆದಿದೆ ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ. ಯುವಕ ಅಡುಗೆಮನೆಯ ಬಳಿ ಹೊದಿಕೆಗಳರಾಶಿಯಲ್ಲಿ ಮೃತದೇಹಗಳನ್ನು ಹುದುಗಿಸಿ ಇಟ್ಟಿದ್ದ.

ನಿಕಿತಾ ಕಾಸಾಪ್ ಯಾರು?

ಹದಿನೇಳು ವರ್ಷದ ಪ್ರೌಢಶಾಲಾ ವಿದ್ಯಾರ್ಥಿ ನಿಕಿತಾ ಕಾಸಾಪ್ ವಿರುದ್ಧ ವೌಕೇಶಾ ಕೌಂಟಿಯಲ್ಲಿ ಒಂಬತ್ತು ಅಪರಾಧಗಳ ಆರೋಪವಿದೆ. ಇದರಲ್ಲಿ ಎರಡು ಉದ್ದೇಶಪೂರ್ವಕ ನರಹತ್ಯೆ, ಎರಡು ಶವವನ್ನು ಮರೆಮಾಡಿದ್ದಕ್ಕಾಗಿ, ಹಾಗೆಯೇ ಗುರುತಿನ ಕಳ್ಳತನ ಮತ್ತು 10,000 ಡಾಲರ್ (ಸುಮಾರು ₹ 8.6 ಲಕ್ಷ) ಗಿಂತ ಹೆಚ್ಚಿನ ಕಳ್ಳತನದ ಆರೋಪಗಳು ಸೇರಿವೆ. ಏಪ್ರಿಲ್ 9 ರಂದು ಪ್ರಾಥಮಿಕ ವಿಚಾರಣೆಗಾಗಿ ನಿಕಿತಾ ಕಾಸಾಪ್ ನ್ಯಾಯಾಲಯಕ್ಕೆ ಹಾಜರಾದರು ಮತ್ತು 1 ಮಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 8.6 ಕೋಟಿ) ಬಾಂಡ್ ಮೇಲೆ ಬಂಧನದಲ್ಲಿದ್ದಾನೆ. ಆತನನ್ನು ಮತ್ತೆ ಮೇ 7 ರಂದು ನ್ಯಾಯಾಲಯಕ್ಕೆ