Saturday, 27th April 2024

ಶಾಲೆ ಆರಂಭವಾದ ಎರಡೇ ದಿನದಲ್ಲಿ ಒಂಬತ್ತು ಶಿಕ್ಷಕರಿಗೆ ಕೊರೋನಾ ದೃಢ

ಗದಗ: ಜಿಲ್ಲೆಯ ಗದಗ ನಗರದಲ್ಲಿರುವ ಲೊಯೊಲಾ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸೇಂಟ್ ಜಾನ್ಸ್ ಪ್ರಾಥಮಿಕ ‌ಮತ್ತು ಪ್ರೌಢಶಾಲೆ, ಸಿ.ಎಸ್.ಪಾಟೀಲ ಪ್ರೌಢಶಾಲೆ ಮತ್ತು ಮಾಡೆಲ್ ಪ್ರಾಥಮಿಕ ಶಾಲೆಯ ಒಟ್ಟು ಒಂಬತ್ತು ಶಿಕ್ಷಕರಿಗೆ ಕೋವಿಡ್-19 ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.

ನರಗುಂದ ತಾಲ್ಲೂಕಿನ ಜಗಾಪೂರ ಗ್ರಾಮದ ಪ್ರೌಢಶಾಲೆಯ ಶಿಕ್ಷಕರಿಗೆ ಪಾಸಿಟಿವ್ ಬಂದಿದ್ದು, ಶಾಲೆಯನ್ನು ಬಂದ್ ಮಾಡಿ, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

6665 ಶಿಕ್ಷಕರನ್ನು ಕೋವಿಡ್ ಟೆಸ್ಟ್ ಗೆ ಒಳಪಡೆಸಲಾಗಿದ್ದು, 9 ಮಂದಿ ಶಿಕ್ಷಕರಿಗೆ ಕೋವಿಡ್19 ದೃಢವಾಗಿದೆ ಎಂದು ಗದಗ ಜಿಲ್ಲೆಯ ಡಿಡಿಪಿಐ ಬಸವಲಿಂಗಪ್ಪ ಜಿ.ಎಂ.ತಿಳಿಸಿದ್ದಾರೆ.

ನರಗುಂದ ತಾಲ್ಲೂಕಿನ ಜಗಾಪುರ ಸರ್ಕಾರಿ ಪ್ರೌಢ ಶಾಲೆಯನ್ನು ಶನಿವಾರದಿಂದ ಏಳು ದಿನ ಶಾಲೆ ಬಂದ್ ಮಾಡಲಾಗಿದೆ. ಈ ಶಿಕ್ಷಕರನ್ನು 14 ದಿನಗಳ ಕಾಲ ಹೋಂ ಕ್ವಾರಂಟೈನ್, ಇವರ ಪ್ರಾಥಮಿಕ ಸಂಪರ್ಕ ಹೊಂದಿದ್ದ 7 ಜನ ಶಿಕ್ಷಕರನ್ನು ಹೊಂ ಕ್ವಾರಂಟೈನ್ಗೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!