ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Elon Musk : ಸರಿಯಾಗಿ ಕೆಲಸ ನಿರ್ವಹಿಸಿ ಇಲ್ಲವೇ ಉದ್ಯೋಗ ತೊರೆಯಿರಿ; ಸರ್ಕಾರಿ ಉದ್ಯೋಗಿಗಳಿಗೆ ಮಸ್ಕ್‌ ಖಡಕ್‌ ವಾರ್ನಿಂಗ್‌

ಅಮೆರಿಕದ ಫೆಡರಲ್ ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದು ಭೀತಿಯನ್ನು ಎದುರಿಸುತ್ತಿದ್ದಾರೆ. ಶನಿವಾರ ಎಲಾನ್‌ ಮಸ್ಕ್‌ ಅಮೆರಿಕದ ಫೆಡರಲ್ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ನಿರ್ವಹಿಸಿ ಇಲ್ಲವೇ ಉದ್ಯೋಗ ತೊರೆಯಿರಿ ಎಂದು ಹೇಳಿದ್ದಾರೆ. ದಕ್ಷತಾ ಇಲಾಖೆಯಿಂದ ಅನುದಾನ ಕಡಿತದ ಘೋಷಣೆ ಬಂದ ಬಳಿ ಈ ಹೇಳಿಕೆ ಬಂದಿದೆ.

ಅಮೆರಿಕದ ಸರ್ಕಾರಿ ಉದ್ಯೋಗಿಗಳಿಗೆ ಶಾಕ್‌ ಕೊಟ್ಟ ಎಲಾನ್‌ ಮಸ್ಕ್‌

ಎಲಾನ್‌ ಮಸ್ಕ್‌

Profile Vishakha Bhat Feb 23, 2025 11:11 AM

ವಾಷಿಂಗ್ಟನ್‌: ಅಮೆರಿಕದ ದಕ್ಷತಾ ಇಲಾಖೆಯ (DOGE) ನೇತೃತ್ವವನ್ನು ಎಲಾನ್‌ ಮಸ್ಕ್‌ (Elon Musk) ವಹಿಸಿಕೊಂಡ ನಂತರ ಸಾಕಷ್ಟು ಬದಲಾವಣೆಗಳು ಪ್ರಾರಂಭವಾಗಿವೆ. ಇದೀಗ ಮಸ್ಕ್‌ ಮತ್ತೊಂದು ಹೇಳಿಕೆಯನ್ನು ನೀಡಿದ್ದು, ಅಮೆರಿಕದ ಫೆಡರಲ್ ಉದ್ಯೋಗಿಗಳು ತಮ್ಮ ಕೆಲಸವನ್ನು ಕಳೆದು ಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಶನಿವಾರ ಎಲಾನ್‌ ಮಸ್ಕ್‌ ಅಮೆರಿಕದ ಫೆಡರಲ್ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ನಿರ್ವಹಿಸಿ ಇಲ್ಲವೇ ಉದ್ಯೋಗ ತೊರೆಯಿರಿ ಎಂದು ಹೇಳಿದ್ದಾರೆ. ದಕ್ಷತಾ ಇಲಾಖೆಯಿಂದ ಅನುದಾನ ಕಡಿತದ ಘೋಷಣೆ ಬಂದ ಬಳಿ ಈ ಹೇಳಿಕೆ ಬಂದಿದೆ.

ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಟ್ರಂಪ್‌ ಕಳೆದ ವಾರ ಏನು ಮಾಡಿದಿರಿ ಎಂಬುದರ ಬಗ್ಗೆ ಶೀಘ್ರದಲ್ಲಿ ನಿಮಗೆ ಇಮೇಲ್‌ಗಳು ಬರಲಿವೆ. ಒಂದು ವೇಳೆ ಅದಕ್ಕೆ ಉತ್ತರಿಸಲು ವಿಫಲರಾದರೆ ಅದನ್ನು ರಾಜಿನಾಮೆ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳಂತಹ ಸರ್ಕಾರಿ ಸಂಸ್ಥೆಗಳ ನೌಕರರು ಈಗಾಗಲೇ ಇಮೇಲ್ ಸ್ವೀಕರಿಸಲು ಪ್ರಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ ಮತ್ತು ಜೈಲು ಅಧಿಕಾರಿಗಳು ಸಹ ಇಮೇಲ್ ಸ್ವೀಕರಿಸಿದ್ದಾರೆ ಎಂದು ಅಮೆರಿಕದ ಸುದ್ದಿ ಸಂಸ್ಥೆಗಳು ತಿಳಿಸಿವೆ.

ಸದ್ಯ ಬಂದಿರುವ ಇಮೇಲ್‌ನಲ್ಲಿ ಕಳೆದ ವಾರ ನೀವು ಏನು ಮಾಡಿದ್ದೀರಿ? ಎಂದು ಉದ್ಯೋಗಿಗಳು ಕಳೆದ ಏಳು ದಿನಗಳಲ್ಲಿ ತಮ್ಮ ಸಾಧನೆಗಳನ್ನು ಸರಿಸುಮಾರು ಐದು ಬುಲೆಟ್ ಪಾಯಿಂಟ್‌ಗಳಲ್ಲಿ ವಿವರಿಸಲು ಕೇಳಲಾಗಿದೆ. ಇಮೇಲ್‌ಗೆ ಉತ್ತರಿಸಲು ಸೋಮವಾರ ರಾತ್ರಿಯವರೆಗೂ ಸಮಯ ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ: Donald Trump: ಭಾರತಕ್ಕೆ ಎಂಟ್ರಿ ಕೊಡಲು ಟೆಸ್ಲಾ ಸಿದ್ಧತೆ; ಎಲಾನ್‌ ಮಸ್ಕ್‌ ನಿರ್ಧಾರ ಅನ್ಯಾಯ ಎಂದ ಡೊನಾಲ್ಡ್‌ ಟ್ರಂಪ್‌

ಮಸ್ಕ್‌ ಗುಣಗಾನ ಮಾಡಿದ ಟ್ರಂಪ್‌

ಶನಿವಾರ ಮುಂಜಾನೆ, ಟ್ರಂಪ್ ತಮ್ಮ ಟ್ರುತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಮಸ್ಕ್ "ಉತ್ತಮ ಕೆಲಸ ಮಾಡುತ್ತಿದ್ದಾರೆ, ಆದರೆ ಅವರು ಇನ್ನೂ ಹೆಚ್ಚು ಕ್ರಿಯಾಶೀಲರಾಗಿರುವುದನ್ನು ನಾನು ನೋಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ದಕ್ಷತಾ ಇಲಾಖೆಯ ನೇತೃತ್ವವನ್ನು ಎಲಾನ್‌ ಮಸ್ಕ್‌ ವಹಿಸಿಕೊಂಡ ನಂತರ ಸಾಕಷ್ಟು ಬದಲಾವಣೆಯಾಗಿದೆ. ಸರ್ಕಾರಿ ವೆಚ್ಚವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸರಿಯಾದ ರೀತಿಯಲ್ಲಿ ವಿನಿಯೋಗಿಸಲು DOGE, 723 ಮಿಲಿಯನ್ ಡಾಲರ್ ವಿದೇಶಿ ನೆರವು ನಿಧಿಯನ್ನು ಕಡಿತಗೊಳಿಸಲು ನಿರ್ಧರಿಸಿದೆ.