ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Belagavi Assault Case: ಕಂಡಕ್ಟರ್‌ ಮೇಲೆ ಹಲ್ಲೆ, ಐವರ ಬಂಧನ, ನಾಲಿಗೆ ಹರಿಬಿಟ್ಟ ʼನಾಲಾಯಕ್‌ʼ ಮುಖಂಡ

ಬೆಳಗಾವಿಯ ಎಂಇಎಸ್ ಮುಖಂಡನೊಬ್ಬ ʼಕನ್ನಡ ಸಂಘಟನೆಯವರು ನಾಲಾಯಕ್‌ʼ ಎಂದು ನಾಲಿಗೆ ಹರಿಬಿಟ್ಟಿದ್ದಾನೆ. ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಇದುವರೆಗೂ ಒಟ್ಟು ಐವರನ್ನು ಬಂಧಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರದಲ್ಲಿ ಮರಾಠಿ ಪುಂಡರಿಂದ ಭಾಷಾ ಕಿರಿಕ‌್ ಮುಂದುವರೆದಿದೆ.

ಕಂಡಕ್ಟರ್‌ ಮೇಲೆ ಹಲ್ಲೆ, ಐವರ ಬಂಧನ, ನಾಲಿಗೆ ಹರಿಬಿಟ್ಟ ʼನಾಲಾಯಕ್‌ʼ ಮುಖಂಡ

ಹಲ್ಲೆಗೊಳಗಾದ ಕಂಡಕ್ಟರ್‌ ಮತ್ತು ಎಂಇಎಸ್‌ ಮುಖಂಡ ಶುಭಂ ಶಳಕೆ

ಹರೀಶ್‌ ಕೇರ ಹರೀಶ್‌ ಕೇರ Feb 23, 2025 5:19 PM

ಬೆಳಗಾವಿ: ಕನ್ನಡ ಮಾತನಾಡು ಎಂದಿದ್ದಕ್ಕೆ ಕೆಎಸ್​​ಆರ್​ಟಿಸಿ (KSRTC) ಕಂಡಕ್ಟರ್ (conductor) ಮೇಲೆ ಹಲ್ಲೆ (Belagavi Assault Case) ಮಾಡಿದ್ದ ಮತ್ತೊಬ್ಬನನ್ನು ಬಂಧಿಸಲಾಗಿದೆ. 2 ದಿನಗಳ ಹಿಂದೆ ಕಂಡಕ್ಟರ್ ಮಹದೇವಪ್ಪ ದೂರು ದಾಖಲಿಸಿದ್ದರು. ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಿದ್ದ ಪೊಲೀಸರು, ಇಂದು ಮತ್ತೋರ್ವ ಆರೋಪಿ ಮೋಹನ್ ಹಂಚಿನಮನಿ(25) ಎಂಬಾತನನ್ನು ಅರೆಸ್ಟ್​ ಮಾಡಿದ್ದಾರೆ. ಸದ್ಯ ಮಾರಿಹಾಳ ಠಾಣೆ ಪೊಲೀಸರು ಒಟ್ಟು ಐವರನ್ನು ಬಂಧಿಸಲಾಗಿದೆ. ಈ ನಡುವೆ ಬೆಳಗಾವಿಯ ಎಂಇಎಸ್ ಮುಖಂಡನೊಬ್ಬ ʼಕನ್ನಡ ಸಂಘಟನೆಯವರು ನಾಲಾಯಕ್‌ʼ ಎಂದು ನಾಲಿಗೆ ಹರಿಬಿಟ್ಟಿದ್ದಾನೆ.

ಬೆಳಗಾವಿ- ಮಹಾರಾಷ್ಟ್ರ ಸಂಚಾರ ಸ್ಥಗಿತ

ಕರ್ನಾಟಕ, ಮಹಾರಾಷ್ಟ್ರದಲ್ಲಿ ಮರಾಠಿ ಪುಂಡರಿಂದ ಭಾಷಾ ಕಿರಿಕ‌್ ಮುಂದುವರೆದಿದೆ. ಪುಣೆಯಲ್ಲಿ ಕರ್ನಾಟಕ ಸಾರಿಗೆ ಬಸ್ ತಡೆದು ಕಪ್ಪು ಮಸಿಯಿಂದ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟಿಕೆ ಮೆರೆದಿದ್ದಾರೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕನ್ನಡದಲ್ಲಿ ಮಾತಾಡು ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಗೂಂಡಾಗಿರಿ ಪ್ರಕರಣ ಗಡಿ ಜಿಲ್ಲೆಯಲ್ಲಿ ಭಾಷಾ ಬಾಂಧವ್ಯಕ್ಕೆ ಕೊಳ್ಳಿಯಿಟ್ಟಿದೆ. ಎಂಇಎಸ್, ಶಿವಸೇನೆ ಪುಂಡರ ಪುಂಡಾಟಿಕೆ ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಮುಂದುವರೆದಿದೆ. ನಿನ್ನೆ ರಾತ್ರಿ ಮಹಾರಾಷ್ಟ್ರದ ಪುಣೆಯ ಸ್ವಾರಗೇಟ್​ನಲ್ಲಿ ಕರ್ನಾಟಕದ ಅಂಬಾರಿ ಬಸ್​​ಗೆ ಕಪ್ಪು ಮಸಿ ಹಚ್ಚಿದ್ದಾರೆ. ಶಿವಸೇನೆ ಪುಂಡರು ಕರ್ನಾಟಕದ ಬಸ್ ಮೇಲೆ ಕಪ್ಪು ಮಸಿಯಿಂದ ಜೈ ಮಹಾರಾಷ್ಟ್ರ ಮತ್ತು ಮರಾಠಾ ಮಾನುಸ ಅಂತಾ ಬರೆದು ಗೂಂಡಾವರ್ತನೆ ತೋರಿದ್ದಾರೆ.

ಬೆಳಗಾವಿ ಡಿಪೋಗೆ‌ ಸೇರಿದ್ದ ಅಂಬಾರಿ ಬಸ್ ಇಂದು ಬೆಳಗ್ಗೆ ಬೆಳಗಾವಿಗೆ ವಾಪಸ್ ಬಂದಿದೆ. ನಿನ್ನೆಯಷ್ಟೇ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡರು ಕರ್ನಾಟಕ ಬಸ್​​ಗೆ ಭಗವಾ ಧ್ವಜ ಕಟ್ಟಿದ್ದರು. ಇದಾದ ಬಳಿಕ ‌ರಾತ್ರಿ ಮಸಿ ಬಳೆದು ಕೃತ್ಯ ಎಸಗಿದ್ದಾರೆ. ಇದರಿಂದ ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಮಧ್ಯೆ ಸುಗಮ ಬಸ್ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಪುಣೆಯಲ್ಲಿ ಮಸಿ ಹಚ್ಚಿದ್ದರಿಂದ ಮಹಾರಾಷ್ಟ್ರ ಸರ್ಕಾರದ ಬಸ್​​ಗಳು ಕರ್ನಾಟಕ ರಾಜ್ಯದ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಿವೆ.

ಇತ್ತ ಬೆಳಗಾವಿಯಿಂದ ಸುಮಾರು 150ಕ್ಕೂ ಅಧಿಕ ಬಸ್​​ಗಳ ಕಾರ್ಯಾಚರಣೆ ಮಾಡುತ್ತಿದ್ದು, ಇಂದು ಬಹುತೇಕ ಬಸ್​ಗಳು ಗಡಿವರೆಗೂ ಮಾತ್ರ ಸಂಚರಿಸುತ್ತಿವೆ. ಆಗಾಗ ಒಂದು ಬಸ್​​ಗಳನ್ನ ಕಳುಹಿಸುತ್ತಿದ್ದು ಗಡಿಯಲ್ಲಿ ಬಿಗುವಿನ ವಾತಾವರಣ ಇದ್ದರೆ, ಮಹಾರಾಷ್ಟ್ರ ಪ್ರವೇಶಿಸದಂತೆ ಸಾರಿಗೆ ಇಲಾಖೆಯವರು ಸೂಚನೆ ಕೊಟ್ಟು ಕಳಿಸಿದ್ದಾರೆ. ಇತ್ತ ಬಸ್​ಗಳೇ ಇಲ್ಲದ ಕಾರಣ ಬೆಳಗಾವಿ, ಕೊಲ್ಲಾಪುರ, ಪುಣೆಯಲ್ಲಿ ಕರ್ನಾಟಕದ ಪ್ರಯಾಣಿಕರು ಪರದಾಡುವಂತಾಗಿದೆ.

ಕನ್ನಡಿಗರ ಕುರಿತು ನಾಲಿಗೆ ಹರಿಬಿಟ್ಟ ʼನಾಲಾಯಕ್‌ʼ ಮುಖಂಡ

ಬೆಳಗಾವಿಯಲ್ಲಿ ಕನ್ನಡದ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರ ಗೂಂಡಾಗಿರಿಯನ್ನು ಎಂಇಎಸ್ ಮುಖಂಡ ಶುಭಂ ಶಳಕೆ ಎಂಬಾತ ಸಮರ್ಥಸಿಕೊಂಡಿದ್ದಾನೆ. ʼಕನ್ನಡಪರ ಹೋರಾಟಗಾರರು ನಾಲಾಯಕ್‌ʼ ಎಂದು ಎಂಇಎಸ್ ಮುಖಂಡ ಬೆಳಗಾವಿ ನೆಲದಲ್ಲಿ ನಿಂತುಕೊಂಡೇ ನಾಲಿಗೆ ಹರಿ ಬಿಟ್ಟಿದ್ದಾನೆ. ಎಂಇಎಸ್ ಮುಖಂಡ ಶುಭಂ ಶಳಕೆಯಿಂದ‌ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಕಂಡಕ್ಟರ್ ಬಾಲಕಿ ಜೊತೆಗೆ ಅಸಭ್ಯ ವರ್ತನೆ ಮಾಡಿದ್ದಾನೆ. ಅದಕ್ಕೆ ಪೊಲೀಸರು ಪೋಕ್ಸೋ ಕೇಸ್ ಹಾಕಿದ್ದಾರೆ. ಇಂತಹ ನೀಚ, ನಾಲಾಯಲಕ್‌ ಕಂಡಕ್ಟರ್, ಇಂತಹ ಕಂಡಕ್ಟರ್ ಪರ ನಿಂತ ಕನ್ನಡ ಪರ ಸಂಘಟನೆಗಳು ಸಹ ನಾಲಾಯಕರು ಎಂದಿದ್ದಾನೆ.

ಇದನ್ನೂ ಓದಿ: Belagavi Assault Case: ಮಹಾರಾಷ್ಟ್ರ ಬಳಿಕ ಕರ್ನಾಟಕದಿಂದಲೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸ್ಥಗಿತ