Kash Patel: ಅಮೆರಿಕನ್ಸ್‌ಗೆ ತೊಂದ್ರೆ ಕೊಟ್ರೆ ಯಾವ ಗ್ರಹದಲ್ಲಿದ್ರೂ ಹುಡುಕಿ ಹೊಡಿತೀವಿ- FBI ಮಖ್ಯಸ್ಥರಾಗುತ್ತಿದ್ದಂತೆ ಕಾಶ್ ಪಟೇಲ್ ಖಡಕ್ ಎಚ್ಚರಿಕೆ
ಸದ್ಯ ಅಮೆರಿಕದ ಎಫ್ಬಿಐನ ಮುಖ್ಯಸ್ಥರಾಗಿ ಆಯ್ಕೆ ಆದ ಭಾರತದ ಗುಜರಾತ್ ಮೂಲದ ಕಾಶ್ ಪಟೇಲ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಎಫ್ಬಿಐನ ನಿರ್ದೇಶಕರನ್ನು ಆಯ್ಕೆ ಮಾಡಲು ವೋಟ್ ಮಾಡಲಾಗಿತ್ತು. ಇದರಲ್ಲಿ 51 ಮತಗಳು ಕಾಶ್ ಪಟೇಲ್ಗೆ ಪರವಾಗಿ ಇದ್ದರೆ, 49 ವೋಟ್ಗಳು ವಿರುದ್ಧವಾಗಿ ಬಂದಿವೆ.


ವಾಷಿಂಗ್ಟನ್: ಅಮೆರಿಕದ ಆಂತರಿಕ ಗುಪ್ತಚರ ಇಲಾಖೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ಮುಖ್ಯಸ್ಥರಾಗಿ ಭಾರತೀಯ ಮೂಲದ ಕಾಶ್ ಪಟೇಲ್(Kash Patel) ಆಯ್ಕೆಯಾಗಿದ್ದಾರೆ. ಈ ಅತ್ಯುನ್ನತ ಜವಾಬ್ದಾರಿ ದೊರೆತಿರುವುದಕ್ಕೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡುವ ಸಂಸತ ವ್ಯಕ್ತಪಡಿಸಿರುವ ಅವರು, ಮಿಷನ್ ಡೈರೆಕ್ಟರ್ ಕ್ಲೀಯರ್ ಆಗಿದೆ. ಒಳ್ಳೆಯ ಪೊಲೀಸರು ಒಳ್ಳೆಯವರಾಗಿ ಇಲಾಖೆಯಲ್ಲಿ ಉಳಿಯಲಿದ್ದಾರೆ. ಎಫ್ಬಿಐ ಬಗೆಗಿನ ನಂಬಿಕೆಯನ್ನು ಪುನಃ ನಿರ್ಮಿಸಲಾಗುವುದು. ಎಫ್ಬಿಐಗೆ 9ನೇ ನಿರ್ದೇಶಕರಾಗಿ ಆಯ್ಕೆ ಆಗಿದ್ದಕ್ಕೆ ಸಂತಸ ಇದೆ. ಅಧ್ಯಕ್ಷ ಟ್ರಂಪ್ ಹಾಗೂ ಅಟಾರ್ನಿ ಜನರಲ್ ಬೋಂದಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
I am honored to be confirmed as the ninth Director of the Federal Bureau of Investigation.
— FBI Director Kash Patel (@FBIDirectorKash) February 20, 2025
Thank you to President Trump and Attorney General Bondi for your unwavering confidence and support.
The FBI has a storied legacy—from the “G-Men” to safeguarding our nation in the wake of…
G-Men ನಿಂದ 9/11 ರವರೆಗೆ ರಾಷ್ಟ್ರವನ್ನು ಎಫ್ಬಿಐ ಸುರಕ್ಷಿತವಾಗಿ ರಕ್ಷಣೆ ಮಾಡಿದೆ. ಅಮೆರಿಕನ್ಸ್ ನ್ಯಾಯಕ್ಕೆ ಬದ್ಧವಾಗಿರುವ ಎಫ್ಬಿಐಗೆ ಈಗಲೂ ಬದ್ಧರಾಗಿದ್ದಾರೆ. ನ್ಯಾಯ ವ್ಯವಸ್ಥೆಯು ರಾಜಕೀಯಕರಣ ಆಗುತ್ತಿರುವುದರಿಂದ ಜನರಿಂದ ಸ್ವಲ್ಪ ನಂಬಿಕೆ ಕಳೆದುಕೊಂಡಿದೆ. ಆದರೆ ಅದು ಇಂದಿಗೆ ಕೊನೆಗೊಳ್ಳುತ್ತದೆ. ಸಂಸ್ಥೆಯಲ್ಲಿ ಮಹಿಳೆಯರು, ಪುರುಷರು ಜೊತೆಯಲ್ಲಿ ಕೆಲಸ ಮಾಡಿ ಅಮೆರಿಕದ ಜನರು ಹೆಮ್ಮೆ ಪಡುವಂತೆ ಎಫ್ಬಿಐಯನ್ನು ಫುನಃ ನಿರ್ಮಿಸಲಾಗುವುದು. ಅಮೆರಿಕಕ್ಕೆ ಹಾನಿ ಮಾಡಲು ಹಾಗೂ ಅಮೆರಿಕನ್ರಿಗೆ ತೊಂದರೆ ಮಾಡಬೇಕು ಅಂದುಕೊಂಡವರಿಗೆ ಇದು ಎಚ್ಚರಿಕೆ. ನಮಗೆ ಹಾನಿ ಮಾಡಿ ಈ ಗ್ರಹದ ಯಾವುದೇ ಮೂಲೆಯಲ್ಲೂ ಇದ್ದರೂ ನಾವು ನಿಮ್ಮನ್ನು ಅಟ್ಟಾಡಿಸಿ ಬೇಟೆಯಾಡುತ್ತೇವೆ ಎಂದು ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯಾರು ಈ ಕಾಶ್ ಪಟೇಲ್ ?
1980ರ ಫೆಬ್ರವರಿ 25ರಂದು ನ್ಯೂಯಾರ್ಕ್‌ಗೆ ಪೂರ್ವ ಆಫ್ರಿಕಾದಿಂದ ವಲಸೆ ಬಂದ ಗುಜರಾತ್ ನ ವಡೋದರ ಮೂಲದ ದಂಪತಿಯ ಮಗನಾಗಿ ಜನಿಸಿದ ಕಾಶ್ ಪಟೇಲ್ ಅವರ ಮೂಲ ಹೆಸರು ಕಶ್ಯಪ್ ಪಟೇಲ್. ರಿಚ್ಮಂಡ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ ಅವರು ಯೂನಿವರ್ಸಿಟಿ ಕಾಲೇಜ್ ಲಂಡನ್ ನಲ್ಲಿ ಕಾನೂನು ಪದವಿಯನ್ನು ಪಡೆದರು.
ವೃತ್ತಿ ಜೀವನದ ಆರಂಭದಲ್ಲಿ ಉನ್ನತ ಕಾನೂನು ಸಂಸ್ಥೆಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸುವಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ ಕಾಶ್, ಸುಮಾರು ಒಂಬತ್ತು ವರ್ಷಗಳ ಕಾಲ ಮಿಯಾಮಿ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದರು. ಕೊಲೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಆರ್ಥಿಕ ಅಪರಾಧಗಳು ಸೇರಿದಂತೆ ಹಲವು ಸಂಕೀರ್ಣ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದರು. ಟ್ರಂಪ್ ಅವರ ಅನೇಕ ರಾಜಕೀಯ ವಿರೋಧಿಗಳನ್ನು ಕಟಕಟೆಗೆ ಬಂದು ನಿಲ್ಲುವಂತೆ ಮಾಡಿದ ಕಾಶ್ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.
ಆಡಳಿತ ಅನುಭವ
ಕಾಶ್ ಪಟೇಲ್ ಅವರು ನ್ಯಾಯಾಂಗ ಇಲಾಖೆಯಲ್ಲಿ ಭಯೋತ್ಪಾದನಾ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಲ್-ಖೈದಾ ಮತ್ತು ಐಸಿಸ್‌ನಂತಹ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳ ತನಿಖೆ, ಕಾನೂನು ಕ್ರಮ ಕೈಗೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಜಾಗತಿಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಸಹಯೋಗದೊಂದಿಗೆ ಜಂಟಿ ವಿಶೇಷ ಕಾರ್ಯಾಚರಣೆಗಳ ಕಮಾಂಡ್ ಗೆ (JSOC) ನ್ಯಾಯಾಂಗ ಇಲಾಖೆಯ ಸಂಪರ್ಕ ಅಧಿಕಾರಿಯಾಗಿಯು ಅವರು ಕೆಲಸ ಮಾಡಿದ್ದಾರೆ.
17 ಗುಪ್ತಚರ ಸಮುದಾಯ ಏಜೆನ್ಸಿಗಳ ಮೇಲ್ವಿಚಾರಣೆ ಮತ್ತು ಅಧ್ಯಕ್ಷರ ದೈನಂದಿನ ಕಾರ್ಯಕ್ರಮಗಳ ವಿವರಗಳನ್ನು ವಿತರಿಸುವ ರಾಷ್ಟ್ರೀಯ ಗುಪ್ತಚರ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪ್ರಧಾನ ಉಪನಾಯಕರಾಗಿಯೂ ಅವರು ಕೆಲಸ ಮಾಡಿದ್ದಾರೆ. 2016 ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪದ ಬಗ್ಗೆ ಹೌಸ್ ಇಂಟೆಲ್ ಮತ್ತು ನ್ಯೂನ್ಸ್ ಮೆಮೊ ಸಮಿತಿ ತನಿಖೆಯನ್ನು ಮುನ್ನಡೆಸಲು ಗುಪ್ತಚರ ಗೃಹ ಖಾಯಂ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ರೆಪ್. ಡೆವಿನ್ ನ್ಯೂನ್ಸ್ ಅವರು ಪಟೇಲ್ ಅವರನ್ನು ಆಯ್ಕೆ ಮಾಡಿಕೊಂಡದ್ದು ಪಟೇಲ್ ಅವರ ವೃತ್ತಿಜೀವನದ ಪ್ರಮುಖ ಘಟ್ಟವಾಗಿತ್ತು.
ಟ್ರಂಪ್ ಅವರ ಪ್ರಚಾರ ಸ್ವಯಂಸೇವಕರಿಗೆ ಬಂಧನದ ಭೀತಿ ಎದುರಾದಾಗ ನ್ಯಾಯಾಂಗ ಇಲಾಖೆಯ ವಿಧಾನಗಳನ್ನು ಟೀಕಿಸುವ ನಾಲ್ಕು ಪುಟಗಳ ವರದಿಯಾದ “ನ್ಯೂನ್ಸ್ ಮೆಮೊ” ಕರಡು ರಚನೆಯಲ್ಲಿ ಪಟೇಲ್ ಮಹತ್ವದ ಪಾತ್ರ ವಹಿಸಿದ್ದಾರೆ. ಇದು ಟ್ರಂಪ್ ಅವರ ಮೇಲೆ ಪ್ರಭಾವ ಬೀರಿತ್ತು. ನ್ಯೂನ್ಸ್ ಮೆಮೊ ಸಮಿತಿಯಲ್ಲಿದ್ದ ಪಟೇಲ್ ಅವರು ಟ್ರಂಪ್ ಆಡಳಿತದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು. 2019ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಗೆ (NSC) ಸಿಬ್ಬಂದಿಯಾಗಿ ಸೇರಿದ ಪಟೇಲ್ ಅನಂತರ ಭಯೋತ್ಪಾದನಾ ನಿಗ್ರಹ ನಿರ್ದೇಶನಾಲಯದ ಹಿರಿಯ ನಿರ್ದೇಶಕರಾದರು.
ಈ ಸಂದರ್ಭದಲ್ಲಿ ಪಟೇಲ್ ಅವರು ಐಸಿಸ್ ಮತ್ತು ಅಲ್- ಖೈದಾ ನಾಯಕರ ವಿರುದ್ಧದ ಕಾರ್ಯಾಚರಣೆ, ಸಿರಿಯನ್ ಸರ್ಕಾರ ಹಿಡಿದಿದ್ದ ಅಮೆರಿಕನ್ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ವಾಪಸಾತಿ ಸೇರಿದಂತೆ ಹಲವಾರು ಪ್ರಕರಣಗಳ ಮೇಲ್ವಿಚಾರಣೆಯನ್ನು ಮಾಡಿದರು.
2020ರ ಫೆಬ್ರವರಿಯಲ್ಲಿ ಪಟೇಲ್ ಅವರು ಕಾರ್ಯನಿರ್ವಾಹಕ ನಿರ್ದೇಶಕ ರಿಚರ್ಡ್ ಗ್ರೆನೆಲ್ ಅವರಿಗೆ ಪ್ರಧಾನ ಉಪನಿರ್ದೇಶಕರಾಗಿ ಆಯ್ಕೆಯಾಗಿ ಆಯ್ಕೆಯಾಗುವ ಮೂಲಕ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ (ODNI) ಕಚೇರಿಗೆ ಸೇರ್ಪಡೆಯಾದರು. ಅನಂತರ ಅವರು ರಕ್ಷಣಾ ಕಾರ್ಯದರ್ಶಿ ಕ್ರಿಸ್ಟೋಫರ್ ಮಿಲ್ಲರ್ ಅವರ ಮುಖ್ಯ ಸಿಬ್ಬಂದಿಯಾದರು. ರಕ್ಷಣಾ ಇಲಾಖೆಯ ಕಾರ್ಯಾಚರಣೆ ಮತ್ತು ಪರಿವರ್ತನೆಯ ಪ್ರಕ್ರಿಯೆಗಳ ಮೇಲೆ ಗಮನಾರ್ಹ ಪ್ರಭಾವವನ್ನು ಬೀರಿದರು.
ಈ ಸುದ್ದಿಯನ್ನೂ ಓದಿ: Kash Patel: ಅಮೆರಿಕದ FBI ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ್ ಪಟೇಲ್ ನೇಮಕ
ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಮುದಾಯದ ಸವಾಲುಗಳ ಬಗ್ಗೆ ಕಾಶ್ ಪಟೇಲ್ ಮತ್ತು ಟ್ರಂಪ್ ಅವರ ಅಭಿಪ್ರಾಯಗಳು ಒಂದೇ ರೀತಿಯಾಗಿದೆ. ಟ್ರಂಪ್ ಅವರ ಮೊದಲ ಅವಧಿಯ ಅಂತ್ಯದ ವೇಳೆಗೆ ಸಿಐಎ ಅಥವಾ ಎಫ್ ಬಿಐಯ ಉಪ ನಿರ್ದೇಶಕರ ಪಾತ್ರಕ್ಕೆ ಪಟೇಲ್ ಅವರನ್ನು ಪರಿಗಣಿಸಲಾಗಿತ್ತು. ಆದರೆ ಇದನ್ನು ಸಿಐಎ ನಿರ್ದೇಶಕಿ ಗಿನಾ ಹ್ಯಾಸ್ಪೆಲ್ ಮತ್ತು ಅಟಾರ್ನಿ ಜನರಲ್ ಬಿಲ್ ಬಾರ್ ವಿರೋಧಿಸಿದ್ದರು. ಪಟೇಲ್ ಅವರಿಗೆ ಅಗತ್ಯ ಅನುಭವದ ಕೊರತೆ ಇರುವುದಾಗಿ ವಾದಿಸಿದರು. ಹಿಂದಿನ ಚುನಾವಣೆಯಲ್ಲಿ ಟ್ರಂಪ್ ಸರ್ಕಾರ ಸೋತ ಬಳಿಕವೂ ಪಟೇಲ್ ಅವರು ಟ್ರಂಪ್ ಅವರ ಕಾರ್ಯಸೂಚಿಯ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರ ವ್ಯಾಪಾರ ಮತ್ತು ಮಾಧ್ಯಮ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ.
ಗವರ್ನಮೆಂಟ್ ಗ್ಯಾಂಗ್‌ಸ್ಟರ್ಸ್: ದಿ ಡೀಪ್ ಸ್ಟೇಟ್, ದಿ ಟ್ರೂತ್, ಅಂಡ್ ದಿ ಬ್ಯಾಟಲ್ ಫಾರ್ ಅವರ್ ಡೆಮಾಕ್ರಸಿ ಸ್ಮರಣ ಸಂಚಿಕೆಯನ್ನು ಬರೆದಿರುವ ಪಟೇಲ್, ಮಕ್ಕಳ ಕಾಲ್ಪನಿಕ ಕಥೆಯನ್ನು ರಚಿಸಿದ್ದಾರೆ.