Car Accident: ಪ್ರವಾಸಕ್ಕೆಂದು ಅಮೆರಿಕಕ್ಕೆ ಹೋಗಿದ್ದ ಭಾರತೀಯ ಕುಟುಂಬ ಕಾರಿನಲ್ಲೇ ಸಜೀವ ದಹನ!
ಮಿನಿ ಟ್ರಕ್‌ಗೆ ಕಾರೊಂದು ಡಿಕ್ಕಿಯಾಗಿ (Car Accident) ಭಾರತೀಯ ಮೂಲದ (Hyderabad based family) ಒಂದೇ ಕುಟುಂಬದ ನಾಲ್ವರು ಸಜೀವ ದಹನವಾದ ಘಟನೆ ಸೋಮವಾರ ಅಮೆರಿಕದ (america) ಗ್ರೀನ್ ಕೌಂಟಿಯಲ್ಲಿ (Green County) ನಡೆದಿದೆ. ರಜೆಯ ಹಿನ್ನೆಲೆಯಲ್ಲಿ ಅವರು ತಮ್ಮ ಸಂಬಂಧಿಕರನ್ನು ಭೇಟಿಯಾಗಿ ಮರಳುತ್ತಿದ್ದರು ಎನ್ನಲಾಗಿದೆ.


ಡಲ್ಲಾಸ್: ಮಿನಿ ಟ್ರಕ್ ಗೆ ಕಾರೊಂದು ಡಿಕ್ಕಿಯಾಗಿ (Car Accident) ಭಾರತೀಯ ಮೂಲದ (Hyderabad based family) ಒಂದೇ ಕುಟುಂಬದ ನಾಲ್ವರು ಸಜೀವ ದಹನವಾದ ಘಟನೆ ಸೋಮವಾರ ಅಮೆರಿಕದ (america) ಗ್ರೀನ್ ಕೌಂಟಿಯಲ್ಲಿ (Green County) ನಡೆದಿದೆ. ರಜೆಯ ಹಿನ್ನೆಲೆಯಲ್ಲಿ ಅವರು ತಮ್ಮ ಸಂಬಂಧಿಕರನ್ನು ಭೇಟಿಯಾಗಿ ಮರಳುತ್ತಿದ್ದರು ಎನ್ನಲಾಗಿದೆ. ತಪ್ಪಾದ ಬದಿಯಲ್ಲಿ ಚಲಿಸುತ್ತಿದ್ದ ಮಿನಿ ಟ್ರಕ್ ಅವರ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದುದರಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ರಜೆಯ ಹಿನ್ನೆಲೆಯಲ್ಲಿ ಅಮೆರಿಕದಲ್ಲಿದ್ದ ಹೈದರಾಬಾದ್ ಮೂಲದ ಭಾರತೀಯ ಕುಟುಂಬವು ಸಂಬಂಧಿಕರನ್ನು ಭೇಟಿಯಾಗಿ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಡಲ್ಲಾಸ್ ನ ಗ್ರೀನ್ ಕೌಂಟಿಯಲ್ಲಿ ತಪ್ಪಾದ ಬದಿಯಿಂದ ಬರುತ್ತಿದ್ದ ಮಿನಿ ಟ್ರಕ್ ಅವರ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಹೈದರಾಬಾದ್ ಮೂಲದ ತೇಜಸ್ವಿನಿ, ವೆಂಕಟ್ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ.
ಅವರೆಲ್ಲ ಕಳೆದ ವಾರ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಅಟ್ಲಾಂಟಾಗೆ ಕಾರಿನಲ್ಲಿ ಚಲಾಯಿಸಿಕೊಂಡು ಹೋಗಿದ್ದರು. ಅವರು ಮರಳಿ ಡಲ್ಲಾಸ್‌ಗೆ ಹಿಂತಿರುಗುತ್ತಿದ್ದಾಗ ಈ ದುರಂತ ಘಟನೆ ನಡೆದಿದೆ. ಗ್ರೀನ್ ಕೌಂಟಿಯಲ್ಲಿ ತಪ್ಪಾದ ದಿಕ್ಕಿನಿಂದ ಬರುತ್ತಿದ್ದ ಮಿನಿ ಟ್ರಕ್ ಅವರ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಇದರ ಪರಿಣಾಮ ಕಾರು ಬೆಂಕಿಗೆ ಆಹುತಿಯಾಗಿದೆ. ಕಾರಿನ ಒಳಗೆ ಇದ್ದ ನಾಲ್ವರು ಪ್ರಯಾಣಿಕರು ಸಿಲುಕಿಕೊಂಡು ಸುಟ್ಟು ಕರಕಲಾಗಿದ್ದಾರೆ.
ಕಾರು ಸಂಪೂರ್ಣ ಸುಟ್ಟು ಬೂದಿಯಾಗಿದ್ದು,ಬಳಿಕ ಅಧಿಕಾರಿಗಳು ಬೆಂಕಿಯನ್ನು ನಂದಿಸಿ ಮೃತರ ಅವಶೇಷಗಳನ್ನು ಹೊರತೆಗೆದ್ಯ್ ಮೂಳೆಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸುವ ಮೊದಲು ಮೃತರನ್ನು ಗುರುತಿಸಲು ಡಿಎನ್‌ಎ ಮಾದರಿಗಳನ್ನು ಬಳಸಲು ಪೊಲೀಸರು ಯೋಜಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Accident: ತಮಿಳುನಾಡಿನಲ್ಲಿ ಘನಘೋರ ಘಟನೆ! ಹಳಿ ಕ್ರಾಸ್ ಮಾಡ್ತಿದ್ದ ಶಾಲಾ ಬಸ್‌ಗೆ ರೈಲು ಡಿಕ್ಕಿ
2024ರ ಸೆಪ್ಟೆಂಬರ್ ನಲ್ಲಿ ಡಲ್ಲಾಸ್ ಬಳಿಯ ಟೆಕ್ಸಾಸ್‌ನ ಅನ್ನಾದಲ್ಲಿ ನಡೆದ ಅಪಘಾತದಲ್ಲಿ ನಾಲ್ವರು ಭಾರತೀಯರು ದುರಂತವಾಗಿ ಸಾವನ್ನಪ್ಪಿದ ಬಳಿಕ ಇದೀಗ ಈ ಘಟನೆ ನಡೆದಿದೆ. ಆಗ ಅವರು ಕಾರ್‌ಪೂಲಿಂಗ್ ಮಾಡುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಕಾರಿಗೆ ಬೆಂಕಿ ಹೊತ್ತಿಕೊಂಡು ಆರ್ಯನ್ ರಘುನಾಥ್ ಒರಂಪತಿ, ಫಾರೂಕ್ ಶೇಕ್, ಲೋಕೇಶ್ ಪಲಾಚರ್ಲಾ ಮತ್ತು ದರ್ಶಿನಿ ವಾಸುದೇವನ್ ಎಂಬವರು ಸುತ್ತು ಕರಕಲಾಗಿದ್ದರು.
2024 ಆಗಸ್ಟ್ ನಡೆದ ಮತ್ತೊಂದು ಟೆಕ್ಸಾಸ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ದಂಪತಿ ಸಾವನ್ನಪ್ಪಿದ್ದು, ಅವರ ಹದಿಹರೆಯದ ಮಗ ಮಾತ್ರ ಬದುಕುಳಿದಿದ್ದ. ವಾಹನವೊಂದು ಡಿಕ್ಕಿಯಾಗಿದ್ದರಿಂದ ಅವರ ಕಾರು ಬೆಂಕಿಗೆ ಆಹುತಿಯಾಗಿತ್ತು.