Niagara Falls: ಬೆಂಗಳೂರಿನಲ್ಲೂ ಭೋರ್ಗರೆಯುತ್ತಿದೆ ನಯಾಗರಾ ಜಲಪಾತ!
ಎರಡು ತಿಂಗಳ ಅವಧಿಯ ಮಹೋತ್ಸವ ಈಗ ನೋಡುಗರ ಕಣ್ಮನ ಸೆಳೆಯುತ್ತಿದೆ. ಬೆರಗುಗೊಳಿಸುವ ಈ ಜಲಪಾತ ಬಿನ್ನಿ ಮಿಲ್‌ನಲ್ಲಿ ನಡೆಯುತ್ತಿರುವ ಫ್ಯಾಮಿಲಿ ಫೇರ್‌ನಲ್ಲಿದೆ. ಇಲ್ಲಿ ಇತರ ಆಕರ್ಷಣೆಗಳೂ ಇವೆ. ಮಾರ್ಚ್ 28 ರಿಂದ ಪ್ರಾರಂಭವಾಗಿರುವ ಕಾರ್ನೀವಲ್ ಜೂನ್ 1 ರವರೆಗೆ ನಡೆಯಲಿದೆ.

ನಯಾಗರಾ ಪ್ರತಿರೂಪ

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ವಿಶ್ವಪ್ರಸಿದ್ಧ ನಯಾಗರಾ ಜಲಪಾತದ (Niagara Falls) ಪ್ರತಿರೂಪವನ್ನು ಅನಾವರಣಗೊಳಿಸಲಾಗಿದ್ದು, ಜನ ಆಕರ್ಷಣೆಗೆ ಪಾತ್ರವಾಗಿದೆ. ಬೇಸಿಗೆ ರಜೆಯ (Summer holidays) ಸಂದರ್ಭದಲ್ಲಿ ಇದು ಮಕ್ಕಳು ಹಾಗೂ ಪೋಷಕರನ್ನು ಸೆಳೆಯುತ್ತಿದೆ. ವಿಶ್ವಪ್ರಸಿದ್ಧ ನೈಸರ್ಗಿಕ ಅದ್ಭುತವಾದ ಈ ಜಲಪಾತದ 200 ಅಡಿ ಉದ್ದ ಮತ್ತು 25 ಅಡಿ ಎತ್ತರದ ಪ್ರತಿರೂಪವನ್ನು ಚಾಮರಾಜಪೇಟೆಯ ಇಟಿಎ ಮಾಲ್ ಬಳಿಯ ಐತಿಹಾಸಿಕ ಬಿನ್ನಿ ಮಿಲ್ ಮೈದಾನದಲ್ಲಿ ನಿರ್ಮಾಣ ಮಾಡಲಾಗಿದೆ.
ಎರಡು ತಿಂಗಳ ಅವಧಿಯ ಮಹೋತ್ಸವ ಈಗ ನೋಡುಗರ ಕಣ್ಮನ ಸೆಳೆಯುತ್ತಿದೆ. ಬೆರಗುಗೊಳಿಸುವ ಈ ಜಲಪಾತ ಬಿನ್ನಿ ಮಿಲ್‌ನಲ್ಲಿ ನಡೆಯುತ್ತಿರುವ ಫ್ಯಾಮಿಲಿ ಫೇರ್‌ನಲ್ಲಿದೆ. ಇಲ್ಲಿ ಇತರ ಆಕರ್ಷಣೆಗಳೂ ಇವೆ. ಮಾರ್ಚ್ 28 ರಿಂದ ಪ್ರಾರಂಭವಾಗಿರುವ ಕಾರ್ನೀವಲ್ ಜೂನ್ 1 ರವರೆಗೆ ನಡೆಯಲಿದೆ. ಎಲ್ಲ ವಯೋಮಾನದವರಿಗಾಗಿ ವಿನ್ಯಾಸಗೊಳಿಸಲಾದ ವಿವಿಧ ಮನೋರಂಜನೆಗಳುಇಲ್ಲಿವೆ. ಮೇಳದಲ್ಲಿ ಲೈವ್ ಪ್ರದರ್ಶನಗಳು ಮತ್ತು ಮನರಂಜನೆಯೊಂದಿಗೆ ಉತ್ಸಾಹಭರಿತ ವಾತಾವರಣ ಇಲ್ಲಿ ದೊರೆಯುತ್ತದೆ. ಸಂಗೀತ, ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆ.
ಮೂಲ ನಯಾಗರಾ ಜಲಪಾತದ ನೈಜತೆ ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಪ್ರತಿ ಗಂಟೆಗೆ 1 ಲಕ್ಷ ಲೀಟರ್ ನೀರನ್ನು ಪಂಪ್ ಮಾಡಲಾಗುತ್ತದೆ. ನೀರಿನ ಭೋರ್ಗರೆತ, ಎಲೆಕ್ಟ್ರಿಕ್ ಬ್ಲೂಸ್‌ನಿಂದ ಉರಿಯುತ್ತಿರುವ ಕೆಂಪು ಬಣ್ಣಕ್ಕೆ ಬದಲಾಗುವ ಡೈನಾಮಿಕ್ ಲೈಟಿಂಗ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದರ ಮುಂದೆ ನಿಂತಾಗ, ನಿಜವಾದ ಜಲಪಾತಕ್ಕೇ ಭೇಟಿ ನೀಡಿದ್ದಿರೇನೋ ಎಂಬಂತೆ ಭಾಸವಾಗುತ್ತದೆ. ಮಂಜು, ಧುಮ್ಮಿಕ್ಕುವ ನೀರು, ದೀಪಗಳು ಎಲ್ಲವೂ ಒಂದೆಡೆ ಸೇರಿ ಮರೆಯಲಾಗದ ಅನುಭವ ನೀಡುತ್ತದೆ. ರಾತ್ರಿಯಾಗುತ್ತಿದ್ದಂತೆ ಜಲಪಾತವು ಮಂಜು, ಬಹು - ಬಣ್ಣದ ದೀಪಗಳೊಂದಿಗೆ ಯಾವುದೋ ಕನಸಿನ ಲೋಕಕ್ಕೆ ಕರೆದೊಯ್ಯುತ್ತದೆ.
ಭೋರ್ಗರೆವ ನೀರಿನ ಕ್ಯಾಸ್ಕೇಡ್, ಮಂಜಿನ ಹನಿಗಳು ಮತ್ತು ಬೆರಗುಗೊಳಿಸುವ ಬೆಳಕಿನ ಪ್ರದರ್ಶನದೊಂದಿಗೆ ಎಲ್ಲರ ಚಿತ್ತವನ್ನು ಇದು ಸೆಳೆಯುತ್ತದೆ. ಮಂಜು ಮತ್ತು ಮಳೆಬಿಲ್ಲುಗಳು ಇದರ ಅತಿವಾಸ್ತವಿಕ ಸೌಂದರ್ಯವನ್ನು ಹೆಚ್ಚುವಂತೆ ಮಾಡುತ್ತವೆ. ಎಲ್ಲಾ ವಯಸ್ಸಿನ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ವಿಶೇಷ ಸೆಲ್ಫಿ ಸ್ಪಾಟ್‌ಗಳು ಮತ್ತು ವೀಕ್ಷಣಾ ಡೆಕ್‌ಗಳು ಇವೆ.
ಬೆರಗುಗೊಳಿಸುವ ಈ ಜಲಪಾತದೊಂದಿಗೆ ಫ್ಯಾಮಿಲಿ ಫೇರ್ ಇತರ ಆಕರ್ಷಣೆಗಳನ್ನೂ ಹೊಂದಿದೆ. ಸಂಜೆ 4ರಿಂದ ರಾತ್ರಿ 9 ರವರೆಗೆ ರೋಬೋಟಿಕ್ ಬಟರ್‌ಫ್ಲೈ ಪಾರ್ಕ್ ನೋಟವನ್ನೂ ಒಳಗೊಂಡಿದೆ. ಇಲ್ಲಿ ಭೇಟಿ ನೀಡುವವರು ದೈತ್ಯ ಅನಿಮ್ಯಾಟ್ರಾನಿಕ್ ಕೀಟಗಳನ್ನು ನೋಡಬಹುದಾಗಿದೆ.