ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆ ; ಜಾಗೃತಗೊಂಡ ಜಿಲ್ಲಾಡಳಿತ ಎಚ್ಚರವಹಿಸಲು ಜಿಲ್ಲಾಧಿಕಾರಿ ಸೂಚನೆ

ಇನ್ನೂ ವರದಹಳ್ಳಿ ಗ್ರಾಮದ ದ್ಯಾವಪ್ಪ ಅವರ ಮನೆಯಲ್ಲಿ ಏಕಾಏಕಿ ೪೦ಕ್ಕೂ ಹೆಚ್ಚು ಕೋಳಿಗಳು ಸತ್ತಿದ್ದು ಹಕ್ಕಿಜ್ವರದಿಂದಲೇ ಆಗಿವೆ ಎಂದು ಧೃಡಪಟ್ಟ ಕೂಡಲೇ ಪಶು ಸಂಗೋಪನೆ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನಾಕಾಬಂದಿ ಹಾಕಿ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಜೊತೆಗೆ ಗ್ರಾಮದೆಲ್ಲೆಡೆ ಬ್ಲೀಚಿಂಗ್ ಪೌಂಡರ್ ಸಿಂಪಡಿಸಿ ದರಲ್ಲದೆ ಗ್ರಾಮಸ್ಥರಿಗೆ ಧೈರ್ಯತುಂಬುತ್ತಾ ಅವರ ಆರೋಗ್ಯ ವಿಚಾರಿಸುವಲ್ಲಿ ಮಗ್ನರಾ ಗಿದ್ದಾರೆ

ಹಕ್ಕಿಜ್ವರ ಬಾದಿತ ವರದಹಳ್ಳಿ ಗ್ರಾಮಕ್ಕೆ ನಾಕಾಬಂದಿ

ವರದಹಳ್ಳಿ ಗ್ರಾಮದಲ್ಲಿ ಹಕ್ಕಿಜ್ವರದ ಪ್ರಕರಣ ಪತ್ತೆ ಹಿನ್ನೆಲೆ ಹಕ್ಕಿಗಳ ಹತ್ಯೆಗೆ ಪಶುಸಂಗೋಪನಾ ಇಲಾಖೆ ಮುಂದಾಗಿರುವ ಚಿತ್ರ..

Profile Ashok Nayak Mar 1, 2025 9:19 AM

ಪಶುಸಂಗೋಪನೆ ಇಲಾಖೆಯಿಂದ ಕೋಳಿಗಳ ಬೇಟೆಗೆ ಸಜ್ಜು

ಚಿಕ್ಕಬಳ್ಳಾಪುರ : ತಾಲೂಕಿನ ವರದಹಳ್ಳಿ ಗ್ರಾಮದ ದ್ಯಾವಪ್ಪ ಎಂಬುವರ ಮನೆಯಲ್ಲಿ ಸಾಕಿದ್ದ ೫೦ ಕ್ಕೂ ಹೆಚ್ಚು ಜಾಗಿ ಜಾತಿಯ ಕೋಳಿಗಳು ಏಕಾಏಕಿ ಮೃತಪಟ್ಟಿದ್ದವು.ನೊಂದ ಕುಟುಂಬ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪಶುಸಂಗೋಪನೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸತ್ತ ಕೋಳಿಗಳ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈ ಸಂಬAಧ ವರದಿ ಗುರುವಾರ ಬಂದಿದ್ದು, ಹಕ್ಕಿ ಜ್ವರದ ಕಾರಣ ದಿಂದಲೇ ಕೋಳಿಗಳು ಸಾವನ್ನಪ್ಪಿರುವುದಾಗಿ ದೃಢಪಟ್ಟ ನಂತರ ಜಿಲಾಡಳಿತ ವರದಹಳ್ಳಿ ಗ್ರಾಮಕ್ಕೆ ನಾಕಾಬಂದಿ ಹಾಕಲಾಗಿದೆ.

ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೀಡುಬಿಟ್ಟಿರುವ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಕೋಳಿಸಾಕಿರುವವರ ಮನೆಗಳನ್ನು ಹುಡುಕಿಕೊಂಡು ಹೋಗಿ ಅವರ ಕೋಳಿಗಳನ್ನು ಹಿಡಿಯುತಿದ್ದ ದೃಶ್ಯಗಳು ಮನಕಲಕುವಂತಿದ್ದವು.ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಮೂಲವಾಗಿರುವ ಕೋಳಿಸಾಗಣೆಗೆ ಈ ನಡೆ ತೀವ್ರ ಹಿನ್ನಡೆ ಯನ್ನು ತಂದಿದೆ ಎಂದರೆ ತಪ್ಪಾಗದು.ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡಿ ರುವ ಹಕ್ಕಿಗಳ ಮಾರಣಹೋಮಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯ÷ಕ್ತವಾಗಿದ್ದರೂ ಪರಿಹಾರದ ಅಭಯ ನೀಡಿ ಗ್ರಾಮದ ೧ ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಕೋಳಿಗಳನ್ನು ಹಿಡಿದು ಹತ್ಯೆಗೆ ಮುಂದಾಗಿದ್ದಾರೆ.ಗ್ರಾಮದಲ್ಲಿರುವ ಸುಮಾರು ೪೬೦ಕ್ಕೂ ಹೆಚ್ಚು ಸಾಕು ಕೋಳಿಗಳನ್ನು ಹತ್ಯೆ ಮಾಡಲು ಇಲಾಖೆ ಮುಂದಾಗಿದೆ.

ಇದನ್ನೂ ಓದಿ: Children and Pets: ಮನೆಯಲ್ಲಿರುವ ಶ್ವಾನದಿಂದಾಗಿ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತಾ?

ಈ ಬಗ್ಗೆ ಮಾಹಿತಿ ಪಡೆದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಶುಕ್ರ ವಾರ ಆರೋಗ್ಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ತುರ್ತು ಸಭೆ Pನಡೆಸಿ ರೋಗ ಹರಡದಂತೆ ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನೂ ವರದಹಳ್ಳಿ ಗ್ರಾಮದ ದ್ಯಾವಪ್ಪ ಅವರ ಮನೆಯಲ್ಲಿ ಏಕಾಏಕಿ ೪೦ಕ್ಕೂ ಹೆಚ್ಚು ಕೋಳಿಗಳು ಸತ್ತಿದ್ದು ಹಕ್ಕಿಜ್ವರದಿಂದಲೇ ಆಗಿವೆ ಎಂದು ಧೃಡಪಟ್ಟ ಕೂಡಲೇ ಪಶು ಸಂಗೋಪನೆ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನಾಕಾಬಂದಿ ಹಾಕಿ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಜೊತೆಗೆ ಗ್ರಾಮದೆಲ್ಲೆಡೆ ಬ್ಲೀಚಿಂಗ್ ಪೌಂಡರ್ ಸಿಂಪಡಿಸಿ ದರಲ್ಲದೆ ಗ್ರಾಮಸ್ಥರಿಗೆ ಧೈರ್ಯತುಂಬುತ್ತಾ ಅವರ ಆರೋಗ್ಯ ವಿಚಾರಿಸುವಲ್ಲಿ ಮಗ್ನರಾ ಗಿದ್ದಾರೆ.
*
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ  ಭೂಪಾಲ್‌ನ ಪ್ರಯೋಗಾಲಯ ನೀಡಿದ ವರದಿಯಿಂದ  ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವುದು ದೃಢವಾಗಿದೆ.ಈ ಗ್ರಾಮದಲ್ಲಿ ಜೀವನೋಪಾಯಕ್ಕಾಗಿ ಕೋಳಿಸಾಕಣೆ ಸಾಮಾನ್ಯ. ಸಂತೆಯಿಂದ ಕೋಳಿ ಗಳನ್ನು ತಂದು ಸಾಕಾಣಿಕೆ ಮಾಡಿರುವುದರಿಂದ ವೈರಸ್ ತಗುಲಿರಬಹುದು. ರೋಗ ನಿಯಂತ್ರಣಕ್ಕಾಗಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದೇನೆ. ಗ್ರಾಮದ ಸುತ್ತಮುತ್ತ ಲಿನ ಎಲ್ಲಾ ಕೋಳಿಗಳನ್ನು ನಾಶ ಮಾಡುವ ಬಗ್ಗೆ ಕ್ರಮ ವಹಿಸಲಾಗಿದೆ. ಗ್ರಾಮದ ಜನರ ಬಳಿ ಕೋಳಿಗಳನ್ನು ಸ್ವಯಂಪ್ರೇರಣೆಯಿAದ ಕೊಡಲು ಮನವಿ ಮಾಡಲಾಗಿದೆ. ಕೋಳಿಗಳಿಗೆ ಕಂದಾಯ ಇಲಾಖೆ ಬೆಲೆನಿಗದಿ ಮಾಡಿ ಸರಕಾರಿ ನಿಯಮಾ ವಳಿಗಳಂತೆ ವಿತರಣೆ ಮಾಡಲಾಗುವುದು. ವೈರಸ್ ಹರಡದಂತೆ ತಡೆಯಲು ಕೋಳಿಗಳ ಹತ್ಯೆ ಅನಿವಾರ್ಯ.ಜನರು ಧೈರ್ಯವಾಗಿರಬೇಕೆಂದು ಸಲಹೆ ನೀಡಿದ್ದಾರೆ.
*
ಅಧಿಕಾರಿಗಳೊಂದಿಗೆ ಜನರ ಜಟಾಪಟಿ
ಹಕ್ಕಿಜ್ವರ ಪೀಡಿತ ವರದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಜೀವಂತ ಕೋಳಿಗಳ ಹತ್ಯೆಗೆ ಮುಂದಾಗಿದ್ದರು.ಈ ವೇಳೆ ಗ್ರಾಮಸ್ಥರು ಜಿಲ್ಲಾಡಳಿತದ ಕ್ರಮಕ್ಕೆ ನಮ್ಮ ವಿರೋಧವಿಲ್ಲ, ಆದರೆ ಒಂದೊAದು ಕೋಳಿಗೆ ೨ರಿಂದ ೩ ಸಾವಿರ ಹಣಕೊಟ್ಟು ತಂದು ಸಾಕಿದ್ದೇವೆ.ಅಧಕಾರಿಗಳು ಏಕಾಏಕಿ ಬಂದು ಅವುಗಳನ್ನು ಹಿಡಿದುಕೊಂಡು ಹೋತ್ತಿರುವುದು ಸರಿಯಲ್ಲ.ಹತ್ಯೆ ಮಾಡುವ ಕೋಳಿಗಳಿಗೆ ಎಷ್ಟು ಹಣವನ್ನು ಸರಕಾರ ನೀಡುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿ ನಂತರ ಹಿಡಿದುಕೊಂಡು ಹೋಗುವುದು ಸೂಕ್ತ ಎಂದು ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದ ಘಟನೆ ಶುಕ್ರವಾರ ನಡೆಯಿತು.

*
ಜನರ ಆರೋಗ್ಯಕ್ಕೆ ತೊಂದರೆಯಿಲ್ಲ.
ಹಕ್ಕಿಜ್ವರವು ಇನ್ಲೂö್ಯಯೆಂಜಾ ಎ ವೈರಸ್‌ನಿಂದ ಬರುತ್ತದೆ.ಇದು ಕೋಳಿಗಳಲ್ಲಿ ಮಾತ್ರ ಬೆಳವಣಿಗೆ ಆಗುತ್ತದೆ.ಇಂತಹ ಕೋಳಿ ಮಾಂಸವನ್ನು ಬೇಯಿಸಿ ತಿನ್ನುವುದರಿಂದ ರೋಗ ಹರಡುವುದಿಲ್ಲ.ಬೇಯಿಸುವ ಕ್ರಮದಲ್ಲಿಯೇ ವೈರಸ್ ನಾಶವಾಗುತ್ತದೆ.ಆದರೂ ಮುಂಜಾಗ್ರತಾ ಕ್ರಮವಾಗಿ ಖಾಯಿಲೆ ಬಾರದ ಕೋಳಿಗಳ ನಾಶಕ್ಕೆ ಮುಂದಾಗಿದ್ದೇವೆ. ರೋಗಪತ್ತೆಯಾದ ಕೂಡಲೇ ಫೆ ೨೬ರಿಂದಲೇ ಗ್ರಾಮದಲ್ಲಿ ವೈರಸ್ ಹರಡದಂತೆ ಬ್ಲೀಚಿಂಗ್ ಹಾಕಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.ಜನತೆಗೆ ಸತ್ತ ಕೋಳಿಗಳನ್ನು ಎಲ್ಲೆಂದರಲ್ಲಿ ಬೀಸಾಡುವ ಬದಲಿಗೆ ಗುಂಡಿ ತೋಡಿ ಮುಚ್ಚುವ ಕೆಲಸ ಮಾಡಿ ಎಂದು ಜಾಗೃತೆ ಮೂಡಿಸಿದ್ದೇವೆ.೧ ಕಿಲೋಮೀಟರ್ ವ್ಯಾಪ್ತಿಯ ಕೋಳಿಗಳನ್ನು ನಾಶ ಮಾಡುವುದಲ್ಲದೆ ಗ್ರಾಮದಿಂದ ೧೦ ಕಿಲೋಮೀಟರ್ ವ್ಯಾಪ್ತಿಯನ್ನು ಸರ್ವಿಲಿಯನ್ಸ್ ಝೋನ್ ಎಂದು ಗುರುತಿಸಲಾಗುತ್ತದೆ.ಇಲ್ಲಿ ಪಕ್ಷಿಗಳಿಂದ ರಕ್ತದ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಲಾಗುತ್ತದೆ.೯೦ದಿನಗಳ ಕಾಲ ಇದು ಜಾರಿಯಲ್ಲಿರಲಿದೆ.

-ಡಾ.ರಂಗಪ್ಪ.ಸಹಾಯಕ ನಿರ್ದೇಶಕರು ಪಶುಸಂಗೋಪನಾ ಇಲಾಖೆ ಚಿಕ್ಕಬಳ್ಳಾಪುರ.

ಹಕ್ಕಿ ಜ್ವರ  ಯಾವಾಗಲೂ ಕೋಳಿಗಳಿಗೆ ಮಾರಕವಲ್ಲ. ಆದರೆ ಜ್ವರದ ತೀವ್ರತೆಯನ್ನು ಅವಲಂಬಿಸಿ ಕೋಳಿಗಳು ಬಹಳ ಬೇಗನೆ ಸಾಯುವ ಸಾಧ್ಯತೆ ಇದೆ. ಕೋಳಿಗಳು ರೋಗ ದಿಂದ ಬಳಲುತ್ತವೆ, ರೆಕ್ಕೆಗಳು ಸರಿಯಾಗಿ ಬೆಳೆಯುವುದಿಲ್ಲ, ಮೊಟ್ಟೆ ಇಡುವ ಪ್ರಮಾಣ ಕಡಿಮೆಯಾಗುತ್ತದೆ, ಮತ್ತು ಉಸಿರಾಟದ ತೊಂದರೆಗಳು ಉಂಟಾಗುತ್ತವೆ. ಕೆಲವು ಕೋಳಿ ಗಳು ರೋಗದಿಂದ ಚೇತರಿಸಿಕೊಳ್ಳುತ್ತವೆ, ಆದರೆ ಅವುಗಳಿಂದ ವೈರಸ್ ಹರಡುವ ಅಪಾಯ ಉಳಿದಿರುತ್ತದೆ. ತೀವ್ರ ಸಂದರ್ಭಗಳಲ್ಲಿ, ಕೋಳಿಗಳು ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಸಾಯುತ್ತವೆ. ರೋಗ ತೀವ್ರವಾಗಿದ್ದರೆ, ಸೋಂಕಿತ ಪ್ರದೇಶದಲ್ಲಿನ ಎಲ್ಲಾ ಕೋಳಿಗಳನ್ನು ನಾಶಪಡಿಸುವುದು ಸಾಮಾನ್ಯ ಪದ್ಧತಿಯಾಗಿದೆ ಎಂಬುದು ಪಶುಸಂಗೋ ಪನಾ ಇಲಾಖೆ ಅಧಿಕಾರಿಗಳ ಮಾತಾಗಿದೆ.