Smriti Irani: ಕಿರುತೆರೆಗೆ ಕಂಬ್ಯಾಕ್ ಮಾಡಿದ ಮಾಜಿ ಕೇಂದ್ರ ಸಚಿವೆ- ಫಸ್ಟ್ ಲುಕ್ ವೈರಲ್!
ಕ್ಯೂಂಕಿ ಸಾಸ್ ಭೀ ಕಭಿ ಬಹು ಥೀ ಸೀಸನ್ 2 ಧಾರವಾಹಿಯಲ್ಲಿ ನಟಿ ಸ್ಮೃತಿ ಇರಾನಿ ಫಸ್ಟ್ ಲುಕ್ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ. ಗೋಲ್ಡ್ ಬಾರ್ಡರ್ ಹೊಂದಿರುವ ಮೆರೂನ್ ಮಿಶ್ರಿತ ಸೀರೆ ಯಲ್ಲಿ ನಟಿ ಸಾಂಪ್ರದಾಯಿಕ ಗೃಹಿಣಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳ ಸೂತ್ರ, ಆಭರಣ ಮತ್ತು ಕೆಂಪು ಬಿಂದಿಯೊಂದಿಗೆ ಈ ಸೀರೆಯಲ್ಲಿ ಅಪ್ಪಟ ದೇಶೀಯ ಗ್ರಾಮೀಣ ಮಹಿಳೆಯಂತೆ ನಟಿ ಸ್ಮೃತಿ ಅವರು ಕಂಗೊಳಿಸಿದ್ದಾರೆ.


ನವದೆಹಲಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ (Smriti Irani) ಅವರು ರಾಜಕೀಯ ಮಾತ್ರವಲ್ಲದೆ ಕಿರುತೆರೆ ಹಿರಿತೆರೆಯಲ್ಲಿಯೂ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಸಿನಿಮಾ ಹಾಗೂ ಧಾರ ವಾಹಿಯಲ್ಲಿ ಬಹುಬೇಡಿಕೆ ಹೊಂದಿದ್ದ ಇವರು ರಾಜಕೀಯಕ್ಕೆ ಬಂದ ಬಳಿಕ ನಟನೆಯಿಂದ ದೂರ ಉಳಿದು ರಾಜಕೀಯ ವಿಚಾರಕ್ಕೆ ಒತ್ತು ನೀಡಿದ್ದರು. ಆದರೆ ಇದೀಗ ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥೀ ಸೀಸನ್ 2 (Kyunki Saas Bhi Kabhi Bahu Thi) ಧಾರವಾಹಿ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದು ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬಹುಸಮಯದ ಬಳಿಕ ಕಿರುತೆರೆಗೆ ಕಂಬ್ಯಾಕ್ ಆಗಿದ್ದು ವೀಕ್ಷಕರನ್ನು ರಂಜಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೀಗ ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥೀ ಧಾರವಾಹಿಯ ಫಸ್ಟ್ ಲುಕ್ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಕ್ಯೂಂಕಿ ಸಾಸ್ ಭೀ ಕಭಿ ಬಹು ಥೀ ಸೀಸನ್ 2 ಧಾರವಾಹಿಯಲ್ಲಿ ನಟಿ ಸ್ಮೃತಿ ಇರಾನಿ ಫಸ್ಟ್ ಲುಕ್ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ. ಗೋಲ್ಡ್ ಬಾರ್ಡರ್ ಹೊಂದಿರುವ ಮೆರೂನ್ ಮಿಶ್ರಿತ ಸೀರೆಯಲ್ಲಿ ನಟಿ ಸಾಂಪ್ರದಾಯಿಕ ಗೃಹಿಣಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳ ಸೂತ್ರ, ಆಭರಣ ಮತ್ತು ಕೆಂಪು ಬಿಂದಿಯೊಂದಿಗೆ ಈ ಸೀರೆಯಲ್ಲಿ ಅಪ್ಪಟ ದೇಶೀಯ ಗ್ರಾಮೀಣ ಮಹಿಳೆಯಂತೆ ನಟಿ ಸ್ಮೃತಿ ಅವರು ಕಂಗೊಳಿಸಿದ್ದಾರೆ.
ಈ ಬಾರಿ ಕೂಡ ನಟಿ ಸ್ಮೃತಿ ಇರಾನಿ ಅವರು ತುಳಸಿ ಎಂಬ ಪಾತ್ರದಲ್ಲಿ ನಟಿಸಲಿದ್ದು ಅವರನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಸ್ಮೃತಿ ಇರಾನಿ ಈ ಸೀಸನ್ ನಲ್ಲಿ ಅಭಿನಯಿಸಲು ಅವರಿಗೆ ಬಿಗಿ ಭದ್ರತೆಯ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥೀ ಧಾರವಾಹಿ 2000 ನೇ ವರ್ಷದಲ್ಲಿ ಆರಂಭವಾಗಿದ್ದು ಇದೇ ಧಾರವಾಹಿಯಲ್ಲಿ ಸ್ಮೃತಿ ಇರಾನಿ ಅವರು ತುಳಸಿ ವೀರ್ವಾನಿ ಪಾತ್ರದಲ್ಲಿ ಅಭಿನಯಿಸಿ ಜನ ಮನಗೆದ್ದಿದ್ದರು. ಸತತ 7ವರ್ಷ ಈ ಧಾರವಾಹಿ ನಂಬರ್ ಒನ್ ಎಂಬ ಖ್ಯಾತಿ ಪಡೆದು 2008ರಲ್ಲಿ ಮುಕ್ತಾಯ ಗೊಂಡಿದೆ. ಕೆಲವು ದಿನಗಳ ಹಿಂದಷ್ಟೇ ಸ್ಮೃತಿ ಇರಾನಿ ಅವರು ಈ ಧಾರಾವಾಹಿಯ 25ನೇ ವರ್ಷವನ್ನು ಸಂಭ್ರಮಿಸಿ ಪೋಸ್ಟ್ ಹಂಚಿಕೊಂಡಿದ್ದರು. ಇದೀಗ ಅದೇ ಧಾರವಾಹಿ ಸೀಸನ್ 2 ಬರುತ್ತಿದ್ದು ಅದರಲ್ಲಿ ಪ್ರಬಲ ರಾಜಕಾರಣಿ, ನಟಿ ಸ್ಮೃತಿ ಇರಾನಿ ಕೂಡ ಅಭಿನಯಿಸುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನು ಓದಿ:Ghaati Movie: ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ನಿರಾಸೆ; ʼಘಾಟಿʼ ಚಿತ್ರದ ರಿಲೀಸ್ ಡೇಟ್ ಮತ್ತೆ ಮುಂದೂಡಿಕೆ
ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ನಿರ್ಮಿಸಿದ್ದ ಕ್ಯುಂಕಿ ಸಾಸ್ ಭಿ ಕಭಿ ಬಹೂ ಥಿ 2 ಧಾರವಾಹಿಯು ಜುಲೈ 29 ರಂದು ರಾತ್ರಿ 10.30 ಕ್ಕೆ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರ ಆಗಲಿದೆ. ತುಳಸಿ ಪಾತ್ರದಲ್ಲಿ ಸ್ಮೃತಿ ಅವರ ಅಭಿನಯ ಕಾಣಲು ಸದ್ಯ ಪ್ರೇಕ್ಷಕರು ಕಾತುರರಾಗಿದ್ದಾರೆ.