PM Narendra Modi: ವಿದೇಶಿ ನಾಯಕರಿಗೆ ಪ್ರಧಾನಿ ಮೋದಿಯಿಂದ ಸ್ಪೆಷಲ್ ಗಿಫ್ಟ್!
PM Modi: ಅರ್ಜೆಂಟೀನಾ , ಟ್ರಿನಿಡಾಡ್ ಮತ್ತು ಟೊಬ್ಯಾಗೊ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವಿಶ್ವ ನಾಯಕರಿಗೆ ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಕರಕುಶಲತೆಯನ್ನು ಪ್ರತಿಬಿಂಬಿಸುವ ವಿಶೇಷ ಉಡುಗೊರೆಗಳನ್ನು ನೀಡಿದ್ದು, ಅವುಗಳಲ್ಲಿ ರಾಜಸ್ಥಾನದ ಲೋಹಶಿಲ್ಪ, ಬಿಹಾರದ ಮಧುಬನಿ ವರ್ಣಚಿತ್ರ ಮತ್ತು ಅಯೋಧ್ಯೆಯಿಂದ ಪವಿತ್ರ ಸರಯೂ ನೀರು ತುಂಬಿದ ಕಲಶ ಮತ್ತು ರಾಮಮಂದಿರದ ಬೆಳ್ಳಿ ಪ್ರತಿಕೃತಿಗಳನ್ನು ಒಳಗೊಂಡಿದೆ.


ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi ) ಅವರು ತಮ್ಮ ಐದು ರಾಷ್ಟ್ರಗಳ ಅಧಿಕೃತ ಭೇಟಿಯ ಭಾಗವಾಗಿ ಅರ್ಜೆಂಟೀನಾ (Argentina) ಮತ್ತು ಟ್ರಿನಿಡಾಡ್ (Trinidad) ಮತ್ತು ಟೊಬಾಗೊಗೆ ತೆರಳಿದ್ದರು. ಈ ಸಂದರ್ಭದಲ್ಲಿ, ಅಯೋಧ್ಯೆಯ ರಾಮ ಮಂದಿರದ (Ayodhya Ram Temple) ಬೆಳ್ಳಿ ಪ್ರತಿರೂಪವನ್ನು ವಿಶೇಷ ಕಾಣಿಕೆಯಾಗಿ ನೀಡಿದ್ದಾರೆ. ಟ್ರಿನಿಡಾಡ್‌ನ ಪ್ರಧಾನಮಂತ್ರಿ ಕಮಲಾ ಪರ್ಸಾದ್-ಬಿಸ್ಸೇಸರ್‌ಗೆ ಅವರು ಸರಯೂ ನದಿಯ ಪವಿತ್ರ ನೀರಿನ ಕಲಶವನ್ನು ಹಾಗೂ ರಾಮ ಮಂದಿರದ ಬೆಳ್ಳಿ ಪ್ರತಿರೂಪವನ್ನು ಉಡುಗೊರೆಯಾಗಿ ನೀಡಿದರು.
ಸರಯೂ ನದಿಯ ನೀರು, ಶುದ್ಧತೆ, ಆಶೀರ್ವಾದ ಮತ್ತು ಆಧ್ಯಾತ್ಮಿಕ ಕೃಪೆಯ ಸಂಕೇತವಾಗಿದೆ. ಅಯೋಧ್ಯೆಯ ಮೂಲಕ ಹರಿಯುವ ಈ ನದಿಯು, ಭಗವಾನ್ ರಾಮನ ಜನ್ಮಸ್ಥಳ ಎಂದು ಪರಿಗಣಿತವಾದ ಸ್ಥಳವಾಗಿದ್ದು, ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದೆ. ಲೋಹದಿಂದ ರಚಿತವಾದ ಕಲಶವು ಸಮೃದ್ಧಿ ಮತ್ತು ಪಾವಿತ್ರ್ಯವನ್ನು ಸಂಕೇತಿಸಲಿದ್ದು,ಇದು ಅಯೋಧ್ಯೆಯ ಧರ್ಮ, ಭಕ್ತಿ ಮತ್ತು ಮೋಕ್ಷದ ಪರಂಪರೆಯನ್ನು ಎತ್ತಿ ಹಿಡಿಯಲಿದೆ.
ಈ ಸುದ್ದಿಯನ್ನು ಓದಿ; Lalit Modi-Vijay Mallya: ಲಂಡನ್‌ನಲ್ಲಿ ಅದ್ದೂರಿ ಪಾರ್ಟಿ; ಒಟ್ಟಿಗೆ ಹಾಡು ಹಾಡಿದ ವಿಜಯ್ ಮಲ್ಯ-ಲಲಿತ್ ಮೋದಿ; ವಿಡಿಯೊ ನೋಡಿ
ಉತ್ತರ ಪ್ರದೇಶದ ಕಲಾವಿದರು ಇದನ್ನು ರಚಿಸಿದ್ದು, ಈ ಪ್ರತಿಕೃತಿಯು ಅಯೋಧ್ಯೆಯ ಮಂದಿರದ ಭವ್ಯತೆ ಮತ್ತು ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಶುದ್ಧ ಬೆಳ್ಳಿಯಿಂದ ತಯಾರಾದ ಈ ಮಾದರಿಯು ಧರ್ಮ, ನೀತಿ ಮತ್ತು ದೈವಿಕ ಆಶೀರ್ವಾದವನ್ನು ಪ್ರತಿನಿಧಿಸಲಿದ್ದು, ಪೂಜನೀಯ ಸ್ಥಳಗಳಗೆ ಅಥವಾ ಸ್ಮರಣೀಯ ಉಡುಗೊರೆಯಾಗಿ ನೀಡಲು ಇದು ಸೂಕ್ತವಾಗಿದೆ. ಅಲ್ಲದೆ ಉತ್ತರ ಪ್ರದೇಶದ ಶ್ರೀಮಂತ ದೇವಾಲಯ ಇದಾಗಿದ್ದು, ಅದರ ಕಲೆ ಮತ್ತು ಲೋಹದ ಕಲೆಯನ್ನು ಸುಂದರವನ್ನು ಎತ್ತಿ ಹಿಡಿಯುವಂತಿದೆ .
ಅರ್ಜೆಂಟೀನಾ ಎರಡು ದಿನಗಳ ಭೇಟಿಯಲ್ಲಿ, ಮೋದಿ ಅಧ್ಯಕ್ಷ ಜೇವಿಯರ್ ಮಿಲೈಗೆ ರಾಜಸ್ಥಾನದ ಕಲಾವಿದರಿಂದ ಕೈಯಿಂದ ರಚಿತವಾದ ಫಕ್ಸೈಟ್ ಕಲ್ಲಿನ ಮೇಲಿನ ಬೆಳ್ಳಿ ಸಿಂಹವನ್ನು ಉಡುಗೊರೆಯಾಗಿ ನೀಡಿದ್ದು, ಈ ಫಕ್ಸೈಟ್ ಕಲ್ಲು ಭಾರತದ ಖನಿಜ ಸಂಪನ್ಮೂಲದಿಂದ ಪಡೆಯಲಾಗಿದೆ. ರಾಜಸ್ಥಾನದ ಲೋಹಕಲೆ ಮತ್ತು ರತ್ನಕಲೆಯನ್ನು ಪ್ರತಿನಿಧಿಸಲ್ಲಿದ್ದು, ಸಿಂಹವು ಧೈರ್ಯ ಮತ್ತು ನಾಯಕತ್ವವನ್ನು ಸಂಕೇತಿಸುತ್ತದೆ.
ಅರ್ಜೆಂಟೀನಾದ ಉಪಾಧ್ಯಕ್ಷೆ ವಿಕ್ಟೋರಿಯಾ ಯುಜೆನಿಯಾ ವಿಲಾರುವೆಲ್‌ಗೆ, ಮೋದಿ ಬಿಹಾರದ ಮಿಥಿಲಾ ಪ್ರದೇಶದ ಮಧುಬನಿ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದರು. ಸೂರ್ಯನನ್ನು ಚಿತ್ರಿಸುವ ಈ ಕಲಾಕೃತಿಯು, ಭಾರತದ ಪುರಾತನ ಜಾನಪದ ಕಲೆಯ ಶ್ರೀಮಂತಿಕೆಯನ್ನು ತೋರಿಸುತ್ತದೆ.