ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC Points Table: ವಿಶ್ವ ಟೆಸ್ಟ್‌ ಅಂಕಪಟ್ಟಿಯಲ್ಲಿ ಖಾತೆ ತೆರೆದ ಭಾರತ

ಮೂರನೇ ಟೆಸ್ಟ್‌ ಪಂದ್ಯ ಜುಲೈ 10ರಂದು ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್‌ ಗೆಲುವಿನ ಹೊರತಾಗಿಯೂ ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಟೀಮ್‌ ಇಂಡಿಯಾ ಮೂರನೇ ಟೆಸ್ಟ್‌ಗೆ ತನ್ನ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ವಿಶ್ವ ಟೆಸ್ಟ್‌ ಅಂಕಪಟ್ಟಿಯಲ್ಲಿ ಖಾತೆ ತೆರೆದ ಭಾರತ

Profile Abhilash BC Jul 8, 2025 10:42 AM

ದುಬೈ: ಇಂಗ್ಲೆಂಡ್‌(IND vs ENG) ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಐತಿಹಾಸಿಕ ಗೆಲುವು ತನ್ನದಾಗಿಸಿಕೊಂಡ ಭಾರತ 2025-2027ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ(WTC Points Table) ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಭಾರತ 2 ಪಂದ್ಯಗಳಲ್ಲಿ 1 ಜಯ, 1 ಸೋಲಿನೊಂದಿಗೆ ಶೇ.50 ಗೆಲುವಿನ ಪ್ರತಿಶತ ಹೊಂದಿದೆ. ಆಡಿರುವ 2 ಪಂದ್ಯಗಳಲ್ಲೂ ಗೆದ್ದಿರುವ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ಅಗ್ರಸ್ಥಾನ ಕಾಯ್ದುಕೊಂಡಿದೆ. ಶ್ರೀಲಂಕಾ ಎರಡನೇ ಸ್ಥಾನದಲ್ಲಿದೆ. ಲಂಕಾ 1 ಗೆಲುವು, 1 ಡ್ರಾದೊಂದಿಗೆ ಶೇ.66.67 ಗೆಲುವಿನ ಪ್ರತಿಶತ ಹೊಂದಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್‌ 4ನೇ ಮತ್ತು ಬಾಂಗ್ಲಾದೇಶ 5ನೇ ಸ್ಥಾನದಲ್ಲಿದೆ.

ಮೂರನೇ ಟೆಸ್ಟ್‌ ಪಂದ್ಯ ಜುಲೈ 10ರಂದು ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್‌ ಗೆಲುವಿನ ಹೊರತಾಗಿಯೂ ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಟೀಮ್‌ ಇಂಡಿಯಾ ಮೂರನೇ ಟೆಸ್ಟ್‌ಗೆ ತನ್ನ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಕಾರಣ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬೆಂಚ್‌ ಕಾದಿದ್ದ ಜಸ್‌ಪ್ರೀತ್‌ ಬುಮ್ರಾ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಅದರಂತೆ ನಾಯಕ ಶುಭಮನ್‌ ಗಿಲ್‌ ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸಿಧ್‌ ಕೃಷ್ಣ ತಮ್ಮ ಸ್ಥಾನವನ್ನು ಬುಮ್ರಾಗೆ ಬಿಟ್ಟುಕೊಡಲಿದ್ದಾರೆ. ಆ ಮೂಲಕ ಮೊಹಮ್ಮದ್‌ ಸಿರಾಜ್‌ ಹಾಗೂ ಆಕಾಶ ದೀಪ್‌ ಅವರ ಜೊತೆಗೆ ಬುಮ್ರಾ ಬಂದರೆ ಬಾರತ ತಂಡದ ವೇಗದ ಬೌಲಿಂಗ್‌ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ.

ಇದನ್ನೂ ಓದಿ IND vs ENG: 10 ವಿಕೆಟ್‌ ಕಿತ್ತು ವಿಶೇಷ ಸಂದೇಶ ಕಳುಹಿಸಿದ್ದ ಆಕಾಶ್‌ ದೀಪ್‌ಗೆ ಅಕ್ಕನ ಹೃದಯಸ್ಪರ್ಶಿ ಪ್ರತಿಕ್ರಿಯೆ!

ಮೂರನೇ ಟೆಸ್ಟ್‌ ಪಂದ್ಯದಲ್ಲಿ ಪೂರ್ಣ ಪ್ರಮಾಣದ ಸ್ಪಿನ್ನರ್‌ ಆಗಿ ಕುಲ್ದೀಪ್‌ ಯಾದವ್‌ ಅವರನ್ನು ಆಡಿಸುವ ಸಾಧ್ಯತೆ ಇದೆ. ಸುಂದರ್‌ ಎರಡನೇ ಟೆಸ್ಟ್‌ನಲ್ಲಿ ಯೋಗ್ಯ ಪ್ರದರ್ಶನವನ್ನು ತೋರಿದ್ದರು. ಆದರೂ ಅವರ ಬದಲು ಟೀಮ್‌ ಮ್ಯಾನೇಜ್‌ಮೆಂಟ್‌ ಕುಲ್ದೀಪ್‌ ಅವಕಾಶ ನೀಡಲು ಒಲವು ಹೊಂದಿದೆ.