ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

POCSO Case: ರಾಯಚೂರಿನಲ್ಲಿ ಮತ್ತೊಬ್ಬಳು ಶಾಲಾ ಬಾಲಕಿ ಮೇಲೆ ಅತ್ಯಾಚಾರ

ಶಾಲೆಯಲ್ಲಿ‌ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಚಾಕೊಲೇಟ್ ಕೊಡಿಸುವ ನೆವದಲ್ಲಿ ಬಾಲಕಿಯನ್ನು ಆರೋಪಿ ಚಂದ್ರಶೇಖರ್ ಕರೆದೊಯ್ದಿದ್ದಾನೆ. ತನ್ನ ಮನೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ರಾಯಚೂರು ಜಿಲ್ಲೆಯ ಹಟ್ಟಿ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.

ರಾಯಚೂರಿನಲ್ಲಿ ಮತ್ತೊಬ್ಬಳು ಶಾಲಾ ಬಾಲಕಿ ಮೇಲೆ ಅತ್ಯಾಚಾರ

ಆರೋಪಿ ಚಂದ್ರಶೇಖರ

ಹರೀಶ್‌ ಕೇರ ಹರೀಶ್‌ ಕೇರ Feb 11, 2025 8:02 AM

ರಾಯಚೂರು: ಜಿಲ್ಲೆಯಲ್ಲಿ ಒಂದೇ ವಾರದ ಅಂತರದಲ್ಲಿ ಮತ್ತೊಬ್ಬ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ನಡೆದಿದೆ. ಮಾನಸಿಕ ಅಸ್ವಸ್ಥೆಯಾಗಿರುವ ಆರನೇ ತರಗತಿ ವಿದ್ಯಾರ್ಥಿನಿ ಮೇಲೆ 43 ವರ್ಷದ ಚಂದ್ರಶೇಖರ್​ ಎಂಬಾತ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಜಿಲ್ಲೆಯ (Raichur news) ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿ‌ ಚಂದ್ರಶೇಖರ್​ನನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ (POCSO case) ಪ್ರಕರಣ ದಾಖಲಾಗಿದೆ.

ಹಟ್ಟಿ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಸಂತ್ರಸ್ತ ಬಾಲಕಿ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಶಾಲೆಯಲ್ಲಿ‌ ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಚಾಕೊಲೇಟ್ ಕೊಡಿಸುವ ನೆವದಲ್ಲಿ ಬಾಲಕಿಯನ್ನ ಚಂದ್ರಶೇಖರ್ ಕರೆದೊಯ್ದಿದ್ದಾನೆ. ತನ್ನ ಮನೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಸ್ಥಳೀಯರ ಮಾಹಿತಿ ಮೆರೆಗೆ ಹಟ್ಟಿ ಪೊಲೀಸ್ ಇನ್ಸ್ ಪೆಕ್ಟರ್ ಹೊಸಕೇರಪ್ಪರಿಂದ ಕಾರ್ಯಾಚರಣೆ ಮಾಡಿ, ಚಂದ್ರಶೇಖರ್ ಮನೆಗೆ ಬಂದ ಪೊಲೀಸರು​ ಬಾಗಿಲು ತಟ್ಟಿದರೂ ತೆಗೆದಿಲ್ಲ. ಬಳಿಕ ಬಾಗಿಲು ಮುರಿದು ಒಳನುಗ್ಗಿದ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ.

ಇದೇ ಫೆಬ್ರವರಿ 5 ರಂದು ಎರಡನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದ ಕೃತ್ಯ ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಆರೋಪಿ ಶಿವನಗೌಡ ಎಂಬಾತ ಸಂತ್ರಸ್ತೆ ಬಾಲಕಿಯನ್ನು ಶಾಲೆಯಿಂದ ಮನೆಗೆ ಕರೆದುಕೊಂಡಿ ಹೋಗುವುದಾಗಿ ನೆಪಮಾಡಿ ಕರೆದುಕೊಂಡು ಹೋಗಿದ್ದ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ.

ಪ್ರಕರಣದಲ್ಲಿ ಅತ್ಯಾಚಾರ ಆರೋಪಿ ಶಿವನಗೌಡ ಹಾಗೂ ಖಾಸಗಿ ಶಾಲೆಯ ವ್ಯವಸ್ಥಾಪಕ ರಾಜು ತಾಳಿಕೋಟೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಸಂತ್ರಸ್ತೆ ಬಾಲಕಿಯನ್ನು ಅಪರಿಚಿತರೊಂದಿಗೆ ಕಳುಹಿಸಿದ್ದಕ್ಕೆ ಶಾಲಾ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ‌Mysuru news: ಮೈಸೂರಿನ ಪೊಲೀಸ್‌ ಠಾಣೆ ಮೇಲೆ ಡಿಜೆ ಹಳ್ಳಿ ಮಾದರಿ ದಾಳಿ, ಲಾಠಿ ಚಾರ್ಜ್