Karnataka State Film Awards: 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಪ್ರಜ್ವಲ್ ಅತ್ಯುತ್ತಮ ನಟ, ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ
Karnataka State Film Awards: 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದೆ. ʼಜಂಟಲ್ಮ್ಯಾನ್’ ಸಿನಿಮಾದ ಅಭಿನಯಕ್ಕಾಗಿ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ‘ಪಿಂಕಿ ಎಲ್ಲಿ’ ಸಿನಿಮಾದ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ‘ಅತ್ಯುತ್ತಮ ನಟಿ’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ.

ಅಕ್ಷತಾ ಪಾಂಡವಪುರ, ಪ್ರಜ್ವಲ್ ದೇವರಾಜ್.

ಬೆಂಗಳೂರು: 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ (Karnataka State Film Awards) ಘೋಷಿಸಲಾಗಿದೆ. ‘ಜಂಟಲ್ಮ್ಯಾನ್’ ಸಿನಿಮಾದ ಅಭಿನಯಕ್ಕಾಗಿ ಪ್ರಜ್ವಲ್ ದೇವರಾಜ್ (Prajwal Devaraj) ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ‘ಪಿಂಕಿ ಎಲ್ಲಿ’ ಸಿನಿಮಾದ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ (Akshatha Pandavapura) ‘ಅತ್ಯುತ್ತಮ ನಟಿ’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಪೃಥ್ವಿ ಕೋಣನೂರು ನಿರ್ದೇಶನದ ‘ಪಿಂಕಿ’ ಎಲ್ಲಿ ಸಿನಿಮಾಕ್ಕೆ ಮೊದಲ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ‘ವರ್ಣಪಟಲ’ 2ನೇ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾದರೆ, ‘ಹರಿವ ನದಿಗೆ ಮೈಯೆಲ್ಲ ಕಾಲು’ ಸಿನಿಮಾಕ್ಕೆ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ. ಪ್ರಸಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.
ಸುಬ್ಬಯ್ಯ ನಾಯ್ಡು ಪ್ರಶಸ್ತಿ (ಅತ್ಯುತ್ತಮ ನಟ): ಪ್ರಜ್ವಲ್ ದೇವರಾಜ್ (ʼಜಂಟಲ್‌ಮನ್ʼ)
ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ʼಪಿಂಕಿ ಎಲ್ಲಿʼ)
ಮೊದಲ ಅತ್ಯುತ್ತಮ ಚಿತ್ರ: ʼಪಿಂಕಿ ಎಲ್ಲಿʼ (ನಿರ್ದೇಶನ: ಪೃಥ್ವಿ ಕೊಣನೂರು)
2ನೇ ಅತ್ಯುತ್ತಮ ಚಿತ್ರ: ʼವರ್ಣಪಟಲʼ (ನಿರ್ದೇಶನ: ಚೇತನ್ ಮುಂಡಾಡಿ)
3ನೇ ಅತ್ಯುತ್ತಮ ಚಿತ್ರ: ʼಹರಿವ ನದಿಗೆ ಮೈಯೆಲ್ಲಾ ಕಾಲುʼ (ನಿರ್ದೇಶನ: ಬಾಬು ಈಶ್ವರ್ ಪ್ರಸಾದ್)
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ʼಗಿಳಿಯು ಪಂಜರದೊಳಿಲ್ಲʼ ಮತ್ತು ʼಈ ಮಣ್ಣುʼ (ನಿರ್ದೇಶನ: ರಾಮದಾಸ ನಾಯ್ಡು & ಶಿವಧ್ವಜ್ ಶೆಟ್ಟಿ)
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ʼಫೋರ್ ವಾಲ್ಸ್ʼ (ನಿರ್ದೇಶನ: ಸಂಗಮೇಶ ಎಸ್. ಸಜ್ಜನರ್)
ಅತ್ಯುತ್ತಮ ಮಕ್ಕಳ ಚಿತ್ರ: ʼಪದಕʼ (ನಿರ್ದೇಶನ: ಆದಿತ್ಯ ಆರ್ ಚಿರಂಜೀವಿ)
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ʼನೀಲಿ ಹಕ್ಕಿʼ (ನಿರ್ದೇಶನ: ಗಣೇಶ್ ಹೆಗ್ಡೆ)
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ʼಜೀಟಿಗೆʼ (ತುಳು ಭಾಷೆ, ನಿರ್ದೇಶನ: ಸಂತೋಷ್ ಮಾಡ)
ಕೆ.ಎಸ್.ಅಶ್ವಥ್ ಪ್ರಶಸ್ತಿ (ಅತ್ಯುತ್ತಮ ಪೋಷಕ ನಟ): ರಮೇಶ್ ಪಂಡಿತ್ (ʼತಲೆದಂಡʼ)
ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ʼದಂತಪುರಾಣʼ)
ಅತ್ಯುತ್ತಮ ಕಥೆ: ಶಶಿಕಾಂತ್ ಗಟ್ಟಿ (ʼರಾಂಚಿʼ)
ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್ (ʼಚಾಂದಿನಿ ಬಾರ್ʼ)
ಅತ್ಯುತ್ತಮ ಸಂಭಾಷಣೆ: ವೀರಪ್ಪ ಮರಳವಾಡಿ (ʼಹೂವಿನ ಹಾರʼ)
ಅತ್ಯುತ್ತಮ ಛಾಯಾಗ್ರಹಣ: ಅಶೋಕ್ ಕಶ್ಯಪ್ (ʼತಲೆದಂಡʼ)
ಅತ್ಯುತ್ತಮ ಸಂಗೀತ ನಿರ್ದೇಶನ: ಗಗನ್ ಬಡೇರಿಯಾ (ʼಮಾಲ್ಗುಡಿ ಡೇಸ್ʼ)
ಅತ್ಯುತ್ತಮ ಸಂಕಲನ: ನಾಗೇಂದ್ರ ಕೆ. (ʼಆ್ಯಕ್ಟ್ 1978ʼ)
ಅತ್ಯುತ್ತಮ ಬಾಲನಟ: ಅಹಿಲ್ ಅನ್ಸಾರಿ (ʼದಂತ ಪುರಾಣʼ)
ಅತ್ಯುತ್ತಮ ಬಾಲನಟಿ: ಬೇಬಿ ಹಿತೈಷಿ ಪೂಜಾರ್ (ʼಪಾರುʼ)
ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ್ (ʼಬಿಚ್ಚುಗತ್ತಿʼ)
ಅತ್ಯುತ್ತಮ ಗೀತ ರಚನೆ: ಗಾರ್ಗಿ ಕಾರೆಹಕ್ಲು (‘ಪರ್ಜನ್ಯ’ ಚಿತ್ರದ ‘ಮೌನವು ಮಾತಾಗಿದೆ’) ಮತ್ತು ಸಚಿನ್ ಶೆಟ್ಟಿ ಕುಂಬ್ಳೆ (‘ಈ ಮಣ್ಣು’ ಚಿತ್ರದ ‘ದಾರಿಯೊಂದು ಹುಡುಕುತ್ತಿದೆ’)
ಅತ್ಯುತ್ತಮ ಹಿನ್ನೆಲೆ ಗಾಯಕ: ಅನಿರುದ್ಧ್ ಶಾಸ್ತ್ರಿ (ಆಚಾರ್ಯ ಶ್ರೀ ಶಂಕರ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಅರುಂಧತಿ ವಸಿಷ್ಠ (ದಂತ ಪುರಾಣ)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್
ಅತ್ಯುತ್ತಮ ವಸ್ತ್ರ ವಿನ್ಯಾಸ: ಶ್ರೀ ವಲ್ಲಿ (ʼಸಾರವಜ್ರʼ)
ಅತ್ಯುತ್ತಮ ಪ್ರಸಾಧನ: ರಮೇಶ್ ಬಾಬು (ʼತಲೆದಂಡʼ)
ಅತ್ಯುತ್ತಮ ಶಬ್ಧಗ್ರಹಣ: ವಿ.ಜಿ. ರಾಜನ್ (ʼಅಮೃತ್ ಅಪಾರ್ಟ್‍ಮೆಂಟ್ಸ್ʼ)
ತೀರ್ಪುಗಾರರ ವಿಶೇಷ ಪ್ರಶಸ್ತಿ (ಪ್ರಮಾಣ ಪತ್ರ): ವಿಶ್ವಾಸ್ ಕೆ.ಎಸ್. (ವಿಶೇಷ ಚೇತನ ನಟ – ʼಅರಬ್ಬೀʼ)
ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಚಂಪಕಧಾಮ ಬಾಬು (ʼಕನ್ನಡಿಗʼ)
ಈ ಸುದ್ದಿಯನ್ನೂ ಓದಿ: Karnataka State Film Awards: 2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆ; ಕಿಚ್ಚ ಸುದೀಪ್ ಅತ್ಯುತ್ತಮ ನಟ, ಅನುಪಮಾ ಗೌಡ ಅತ್ಯುತ್ತಮ ನಟಿ
ಇತ್ತೀಚೆಗೆ 2019ರ ಸಾಲಿನ ರಾಜ್ಯ ಪ್ರಶಸ್ತಿ ಘೋಷಿಸಲಾಗಿತ್ತು.