Bengaluru News: ಆಚಾರ್ಯ ಪದವಿ ಪೂರ್ವ ಕಾಲೇಜುನಲ್ಲಿ ರಥ ಸಪ್ತಮಿ ಯೋಗೋತ್ಸವ
ರಥಸಪ್ತಮಿಯ ಅಂಗವಾಗಿ ನರಸಿಂಹರಾಜ ಕಾಲೋನಿ,ಪದವಿ ಪೂರ್ವ ಕಾಲೇಜಿ ನಲ್ಲಿ ರಥಸಪ್ತಮಿ ಯೋಗೋತ್ಸವ-2025 ಅಂಗವಾಗಿ 108 ಬಾರಿ ಸೂರ್ಯ ನಮಸ್ಕಾರ ಆಸನ ಮಾಡುವ ಮೂಲಕ ವಿದ್ಯಾ ರ್ಥಿಗಳು ಪಥ ಬದಲಿಸಿದ ಸೂರ್ಯನಿಗೆ ನಮನ ಸಲ್ಲಿಸಿದರು.
ಬೆಂಗಳೂರು: ರಥಸಪ್ತಮಿಯ ಅಂಗವಾಗಿ ನರಸಿಂಹರಾಜ ಕಾಲೋನಿ,ಪದವಿ ಪೂರ್ವ ಕಾಲೇಜಿ ನಲ್ಲಿ ರಥಸಪ್ತಮಿ ಯೋಗೋತ್ಸವ-2025 ಅಂಗವಾಗಿ 108 ಬಾರಿ ಸೂರ್ಯ ನಮಸ್ಕಾರ ಆಸನ ಮಾಡುವ ಮೂಲಕ ವಿದ್ಯಾರ್ಥಿಗಳು ಪಥ ಬದಲಿಸಿದ ಸೂರ್ಯನಿಗೆ ನಮನ ಸಲ್ಲಿಸಿದರು
ಎಪಿಎಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ಸಿ.ಎ.ವಿಷ್ಣುಭರತ್ ಅಲಂಪಲ್ಲಿ ಅವರು ಮಾತನಾಡಿ ವಿದ್ಯಾ ರ್ಥಿಗಳಿಗೆ ಯೋಗಾಭ್ಯಾಸದ ಮಹತ್ವ, ಸೂರ್ಯನ ಕುರಿತ ಧಾರ್ಮಿಕ ಹಾಗೂ ಸಾಂಕೇತಿಕ ಶ್ರದ್ಧೆ, ಆಚರಣೆಗಳ ಕುರಿತು ರಥಸಪ್ತಮಿಯ ಮಹತ್ವ ಬಗ್ಗೆ ವಿವರಿಸಿದರು.
ಇದನ್ನೂ ಓದಿ: Bangalore University: ಬೆಂಗಳೂರು ವಿವಿಯಲ್ಲಿ ಫೆ. 3ರಿಂದ ಮೀಡಿಯಾ ಕ್ರಾಫ್ಟ್ ಕಾರ್ಯಾಗಾರ
ಈ ಸಮಾರಂಭದಲ್ಲಿ ಕಾಲೇಜಿನ ಗೌರ್ನಿಂಗ್ ಕೌನ್ಸಿಲ್ ಛೇರ್ಮನ್‌ರಾದ ಡಾ.ಟಿ.ವಿ,ಗುರುದೇವಯ್ಯ, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ.ಎಸ್, ಉಪಪ್ರಾಂಶುಪಾಲರಾದ ರಂಜನಿ.ಹೆಚ್.ಎಸ್. ಯೋಗ ಶಿಕ್ಷಕಿ ಧನಲಕ್ಷ್ಮೀ.ಸಿ.ಪಿ, ಕಾಲೇಜಿನ ಉಪನ್ಯಾಸಕರು ಹಾಗೂ ಬೋಧಕೇತರವರ್ಗದವರು ಹಾಗೂ ಮುಖ್ಯವಾಗಿ 100 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ ಗಳಿಗೂ ಪ್ರಮಾಣಪತ್ರ ವಿತರಿಸಲಾಯಿತು