IND vs ENG: ಆರಂಭಿಕ ಎರಡು ಪಂದ್ಯಗಳಿಗೆ ಜೇಮಿ ಸ್ಮಿತ್ ಔಟ್, ಇಂಗ್ಲೆಂಡ್‌ಗೆ ಆಘಾತ!
England wicketkeeper Jamie Smith Injured: ಭಾರತ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಪ್ರವಾಸಿ ತಂಡದ ವಿಕೆಟ್ ಕೀಪರ್ ಜೇಮಿ ಸ್ಮಿತ್ ಅವರು ಗಾಯಕ್ಕೆ ತುತ್ತಾಗಿದ್ದು, ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆಂದು ವರದಿಯಾಗಿದೆ.
ನಾಗ್ಪರ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ (IND vs ENG) ಮೊದಲ ಪಂದ್ಯ ಫೆಬ್ರವರಿ 6 ರಂದು ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಇಂಗ್ಲೆಂಡ್ ವಿಕೆಟ್ ಕೀಪರ್ ಜೇಮಿ ಸ್ಮಿತ್ ಗಾಯಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆಂದು ವರದಿಯಾಗಿದೆ.
ಇತ್ತೀಚೆಗೆ ಅಂತ್ಯವಾಗಿದ್ದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಜೆಮಿ ಸ್ಮಿತ್ ಆಡಿದ್ದರು. ಈ ಸರಣಿಯಲ್ಲಿ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ, ಅವರು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಆಡಲು ಅವಕಾಶ ಪಡೆದಿದ್ದರು. ಅವರು ಏಕದಿನ ಸರಣಿಯ ಇಂಗ್ಲೆಂಡ್ ತಂಡದಲ್ಲಿಯೂ ಇದ್ದಾರೆ.
IND vs ENG: ಇಂಗ್ಲೆಂಡ್ ಏಕದಿನ ಸರಣಿಯ ಭಾರತ ತಂಡದಲ್ಲಿ ವರುಣ್ ಚಕ್ರವರ್ತಿಗೆ ಸ್ಥಾನ!
ಇಂಗ್ಲೆಂಡ್‌ಗೆ ಎದುರಾದ ವಿಕೆಟ್ ಕೀಪಿಂಗ್ ಸಮಸ್ಯೆ
ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೇಮಿ ಸ್ಮಿತ್ ಕಾಲಿನ ಗಾಯವಾಗಿದೆ. ಇದರಿಂದಾಗಿ ಅವರು ಭಾರತ ವಿರುದ್ಧದ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಸ್ಮಿತ್ ಗಾಯದಿಂದಾಗಿ ಇಂಗ್ಲೆಂಡ್‌ಗೆ ಇದೀಗ ದೊಡ್ಡ ಸಮಸ್ಯೆ ಉಂಟಾಗಿದೆ. ವಿಕೆಟ್ ಕೀಪಿಂಗ್‌ಗೆ ಈಗ ಒಂದೇ ಒಂದು ಆಯ್ಕೆ ಉಳಿದಿದೆ. ಭಾರತ ಪ್ರವಾಸದಲ್ಲಿ ಜೋಸ್ ಬಟ್ಲರ್ ಕೇವಲ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದಾರೆ. ಟಿ20ಐ ಸರಣಿಯಲ್ಲಿ ಫಿಲ್ ಸಾಲ್ಟ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಜೇಮೀ ಗಾಯವು ಇಂಗ್ಲೆಂಡ್‌ಗೆ ಸಮಸ್ಯೆಗಳನ್ನು ಹೆಚ್ಚಿಸಿದೆ.
ಜೇಮಿ ಸ್ಮಿತ್ ಗಾಯಗೊಂಡ ನಂತರ ಇಂಗ್ಲೆಂಡ್ ತಂಡವು ಇದೀಗ ಹೆಚ್ಚುವರಿ ಬೌಲರ್‌ನೊಂದಿಗೆ ಮೈದಾನಕ್ಕಿಳಿಯಲು ತಯಾರಿ ನಡೆಸುತ್ತಿದೆ. ಸ್ಮಿತ್ ಬದಲಿಗೆ ಟಿ20ಐ ತಂಡದಲ್ಲಿ ಸೇರ್ಪಡೆಗೊಂಡಿರುವ ಸ್ಪಿನ್ನರ್ ರೆಹಾನ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಅವರು ಸ್ಪಿನ್ ವಿಭಾಗದಲ್ಲಿ ಆದಿಲ್ ರಶೀದ್‌ಗೆ ಬೆಂಬಲ ನೀಡುವ ನಿರೀಕ್ಷೆಯಿದೆ. ಇದಕ್ಕೂ ಮೊದಲು, ರೆಹಾನ್ ಅಹ್ಮದ್ ಅವರನ್ನು ಟಿ20 ಸರಣಿಗೆ ಮಾತ್ರ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು.
IND vs ENG: ರಾಹುಲ್ ಇನ್, ಪಂತ ಔಟ್! ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಭಾರತ ತಂಡದ ಬಗ್ಗೆ ಹೇಳುವುದಾದರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಅವರಂತಹ ದಿಗ್ಗಜರು ತಂಡಕ್ಕೆ ಮರಳಿದ್ದಾರೆ. ಈ ಎಲ್ಲಾ ಆಟಗಾರರು ಏಕದಿನ ಸರಣಿಯ ನಂತರ ಚಾಂಪಿಯನ್ಸ್ ಟ್ರೋಫಿಗೆ ತೆರಳಲಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಈ ಸರಣಿ ಭಾರತ ಮತ್ತು ಇಂಗ್ಲೆಂಡ್ ಎರಡಕ್ಕೂ ಬಹಳ ಮುಖ್ಯವಾಗಲಿದೆ.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೋ ರೂಟ್, ಫಿಲಿಪ್ ಸಾಲ್ಟ್, ಜೇಮಿ ಸ್ಮಿತ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಮಿ ಓವರ್ಟನ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಸಾಕಿಬ್ ಮಹಮೂದ್, ಆದಿಲ್ ರಶೀದ್, ಮಾರ್ಕ್ ವುಡ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ರಿಷಭ್ ಪಂತ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ