Bhavana Belagere Interview:'ರಾಜ್ ಲೀಲಾ ವಿನೋದ' ಬುಕ್ ಬಗ್ಗೆ ಶಿವಣ್ಣ ಏನಂದಿದ್ರು ಗೊತ್ತಾ...?
Bhavana Belagere Interview: ವಿಶ್ವವಾಣಿ ಯೂಟ್ಯೂಬ್ ತಂಡ ನಡೆಸಿದ ಸಂದರ್ಶನದಲ್ಲಿ ರವಿ ಬೆಳೆಗೆರೆ ಜೀವನ - ಬರಹ ಇತ್ಯಾದಿ ಕುರಿತು ಮಾತಾನಾಡಿದ್ದ ಭಾವನಾ ತಂದೆ ಬರೆದಿದ್ದ ರಾಜ್ ಲೀಲಾ ವಿನೋದ ಪುಸ್ತಕದ ಬಗ್ಗೆಯೂ ಮಾತಾನಾಡಿದ್ದು, ಪುಸ್ತಕ ಬಿಡುಗಡೆಗೊಂಡಾಗ ಶಿವಣ್ಣ ಪ್ರತಿಕ್ರಿಯೆ ಹೇಗಿತ್ತು ಎಂಬ ವಿಷಯವನ್ನು ಹೇಳಿದ್ದಾರೆ.


ಬೆಂಗಳೂರು: ಒಂದು ಆರೇಳು ವರ್ಷಗಳ ಹಿಂದೆ ಗಾಂಧಿನಗರದಲ್ಲಿ ಪತ್ರಕರ್ತ ರವಿ ಬೆಳಗೆರೆ (Ravi Belagere) ಬರೆದಿರುವ 'ರಾಜ್ ಲೀಲಾ ವಿನೋದ' (Raj Leela Vinoda Book) ಪುಸ್ತಕ ಭಾರೀ ಸದ್ದು ಮಾಡಿತ್ತು. ಹಲವಾರು ವಿವಾದಗಳನ್ನು ಈ ಪುಸ್ತಕ ಹುಟ್ಟು ಹಾಕಿದ್ದಲ್ಲದೇ ಆ ಬಗ್ಗೆ ಪರ-ವಿರೋಧದ ಧ್ವನಿ ಹೊರಟು ಇಡೀ ಕರ್ನಾಟಕವೇ ಆ ಬಗ್ಗೆ ಮಾತನ್ನಾಡುವಂತೆ ಆಗಿತ್ತು. ಡಾ. ರಾಜ್‌ಕುಮಾರ್ (Dr Rajkumar) ಹಾಗೂ ನಟಿ ಲೀಲಾವತಿ (Leelavathi) ಅವರಿಬ್ಬರ ಸಂಬಂಧದ ಗೊತ್ತಿದ್ದಿದ್ದು ಗೊತ್ತಿಲ್ಲದ್ದು ಎಲ್ಲವನ್ನೂ ಹೇಳಿ ಗೊಂದಲ ಸೃಷ್ಟಿಸಿದರು. ಕೆಲವರು ಬಹಿರಂಗವಾಗಿ ಮಾತನಾಡಿದರೆ ಮತ್ತೂ ಹಲವರು ಪಿಸುಗುಟ್ಟುಗೊಳ್ಳುತ್ತಿದ್ದರು. ಸಾರ್ವಜನಿಕರಲ್ಲೂ ಈ ಪುಸ್ತಕದ ಬಗ್ಗೆ ವಿರೋಧ ಹಾಗೂ ಚರ್ಚೆಗಳು ನಡೆದಿದ್ದವು.
ರಾಜ್ ಅಭಿಮಾನಿಗಳು ಇವರ ಲೀಲಾವತಿ ಅಂತ ಅವರಿವರು ಮಾತನ್ನಾಡಿ ಅನಾವಶ್ಯಕ ಗೊಂದಲ ಸೃಷ್ಟಿಸಿದ್ದರು. ಆದ್ರೆ ಈ ಪುಸ್ತಕದ ಬಗ್ಗೆ ರಾಜ್ ಫ್ಯಾಮಿಲಿ ಆಗಲಿ ಲೀಲಾವತಿ ವಿನೋದ್ ರಾಜ್ ಆಗಲಿ ಯಾವ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಕನ್ನಡದ ನಟ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಈ ಪುಸ್ತಕದ ಬಗ್ಗೆ ಕೊಟ್ಟ ಪ್ರತಿಕ್ರಿಯೆ ಬಗ್ಗೆ ಇದೀಗ ಎಲ್ಲೆಡೆ ಭಾರೀ ಸದ್ದು ಆಗುತ್ತಿದ್ದು, ಸ್ವತ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ (Bhavana Belagere Interview)ಈ ಕುರಿತು ಮಾತಾನಾಡಿದ್ದಾರೆ.
ನಮ್ಮದೇ ವಿಶ್ವವಾಣಿ ಯೂಟ್ಯೂಬ್ ತಂಡ ನಡೆಸಿದ ಸಂದರ್ಶನದಲ್ಲಿ ರವಿ ಬೆಳೆಗೆರೆ ಜೀವನ - ಬರಹ ಇತ್ಯಾದಿ ಕುರಿತು ಮಾತಾನಾಡಿದ್ದ ಭಾವನಾ ತಂದೆ ಬರೆದಿದ್ದ ರಾಜ್ ಲೀಲಾ ವಿನೋದ ಪುಸ್ತಕದ ಬಗ್ಗೆಯೂ ಮಾತಾನಾಡಿದ್ದು, ಪುಸ್ತಕ ಬಿಡುಗಡೆಗೊಂಡಾಗ ಶಿವಣ್ಣ ಪ್ರತಿಕ್ರಿಯೆ ಹೇಗಿತ್ತು ಎಂಬ ವಿಷಯವನ್ನು ಹೇಳಿದ್ದಾರೆ. ಹಾಗಿದ್ರೆ ಶಿವಣ್ಣ ಅವರು ಆ ಪುಸ್ತಕದ ಬಿಡುಗಡೆ ಬಗ್ಗೆ ಏನಂದ್ರು? ಅವರ ರಿಯಾಕ್ಷನ್ ಹೇಗಿತ್ತು..? ಎಂಬುದಕ್ಕೆ ಇಲ್ಲಿದೆ ಉತ್ತರ..
ರಾಜ್ ಲೀಲಾ ವಿನೋದಪುಸ್ತಕ ಬಿಡುಗಡೆ ಸಮಯದಲ್ಲಿ ಶಿವಣ್ಣ 'ಮಾಸ್ ಲೀಡರ್' ಚಿತ್ರದಲ್ಲಿ ನಟಿಸುತ್ತಿದ್ದರು. ಆ ಚಿತ್ರದಲ್ಲಿ ನನ್ನ ಮಗಳು ಮಗಳು ಬಣ್ಣ ಹಚ್ಚಿದ್ದಳು. ಹಾಗಾಗಿ ನಾನು ಹಾಗೂ ಶಿವಣ್ಣ ಡೈಲಿ ಭೇಟಿಯಾಗುತ್ತಿದ್ದೆವು. ಒಟ್ಟಿಗೆ ಊಟ ಮಾಡುವುದು, ಶೂಟಿಂಗ್‌ಗೆ ತೆರಳುವುದು, ನನ್ನ ಮಗಳು ಪರಿಣಿತಾಳನ್ನು ಸ್ವತ: ಅವರ ಮಗಳಂತೆ ಶಿವಣ್ಣ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ "ಕೆಲ ದಿನಗಳ ಕಾಲ ಚಿತ್ರೀಕರಣಕ್ಕೆ ಬ್ರೇಕ್ ಇತ್ತು... ನಾವು ಶಿವಣ್ಣ ಭೇಟಿಯಾಗಿರಲಿಲ್ಲ... ಆದ್ರೆ ಈ ಮಧ್ಯೆಯೇ 'ರಾಜ್ ಲೀಲಾ ವಿನೋದ' ಪುಸ್ತಕ ಬಿಡುಗಡೆ ಆಗಿತ್ತು. ಅವತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದರು. ಆದರೆ ಏನು ಆಗಲಿಲ್ಲ.
ಈ ಸುದ್ದಿಯನ್ನು ಓದಿ: Bhavana Belagere Interview: ಅಮ್ಮನ ಜೊತೆಯೇ ಎಕ್ಸಾಂ ಬರೆದಿದ್ದ ರವಿ ಬೆಳಗೆರೆ; SSLC ಫೇಲ್ ಆಗಿದ್ದೇ ಬದುಕಿನ ಟರ್ನಿಂಗ್ ಪಾಯಿಂಟ್!
ಆದ್ರೆ ಪುಸ್ತಕ ಬಿಡುಗಡೆಗೆ ಎರಡು ದಿನ ಇರುವಾಗಲೇ ನಾವು ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ಹೋಗಬೇಕಿತ್ತು. ಅದು ಶಿವಣ್ಣ ಅವರ ಜೊತೆಯೇ ಜರ್ನಿ ಮಾಡಬೇಕಿತ್ತು.. ಆ ಸಮಯದಲ್ಲಿ ನಾನು ಹೇಗೆ ಅವರನ್ನು ಭೇಟಿ ಮಾಡುವುದು? ಎಂದು ಬಹಳ ಚಿಂತಿಸಿದ್ದೆ. ಒಂಥಾರಾ ಸಂದಿಗ್ಧ ಪರಿಸ್ಥಿತಿ ನನ್ನದಾಗಿತ್ತು.. ಅಪ್ಪನಿಗೆ ಪುಸ್ತಕ ಬಿಡುಗಡೆ ಮಾಡಬೇಡಿ ಎಂದು ಹೇಳವುದಕ್ಕೂ ಆಗಲ್ಲ, ಶಿವಣ್ಣನ್ನು ಫೇಸ್ ಮಾಡಲೂ ಆಗದೇ ಶೂಟಿಂಗ್ ಗೆ ಹೋಗದೇ ಇರುವುದಕ್ಕೂ ಆಗಲ್ಲ? ಅರ್ಧ ಚಿತ್ರೀಕರಣ ಆಗಿದ್ದರಿಂದ ಹೋಗಲೇಬೇಕಿತ್ತು. ಆದ್ರೆ ನನಗೆ ಶಿವಣ್ಣನ್ನು ಭೇಟಿಯಾಗಲು ಮುಜಗರ ಆಗುತ್ತಿತ್ತು. ಅವರ ತಂದೆಯೇ ಬಗ್ಗೆ ಬರೆದಿರುವ ಪುಸ್ತಕ. 'ರಾಜ್ ಲೀಲಾ ವಿನೋದ' ಎನ್ನುವ ಹೆಸರಿನಲ್ಲೇ ಗೊತ್ತಾಗುತ್ತದೆ. ಮೂವರ ಫೋಟೊ ಕೂಡ ಹಾಕಿದ್ದರು. ಈ ಹಿಂದೆ ಚಿತ್ರೀಕರಣದಲ್ಲಿ ಶಿವಣ್ಣನ ಜೊತೆ ಚೆನ್ನಾಗಿ ಮಾತನಾಡಿದ್ದೆ, ಒಳ್ಳೆ ಒಡನಾಟ ಇತ್ತು. ಆದ್ರೆ ಹೀಗೆನಾಪ್ಪ ಮಾಡಲಿ ಎಂದು ಯೋಚಿಸುತ್ತಿದೆ.
ಅಲ್ಲದೇ ಕಾಶ್ಮೀರಕ್ಕೆ ಹೋದ ಬಳಿಕ ನಿರ್ಮಾಪಕರ ಮೂಲಕ ನನ್ನ ಮನಸ್ಸಿನಲ್ಲಿದ್ದ ವಿಚಾರವನ್ನು ಶಿವಣ್ಣನಿಗೆ ತಿಳಿಸಲು ಹೇಳಿದ್ದೆ. ಅವರು ಹೋಗಿ ತಿಳಿಸಿದ್ದರು. ಆದ್ರೆ ನಾರ್ಮಲ್ ಆಗಿಯೇ ಇದ್ದ ಶಿವಣ್ಣ ಮರುದಿನ ಮಾತನಾಡಿ.. "ನೋಡಿ ಭಾವನಾ ಅವರೇ ನೀವು ಶ್ರೀನಗರ ಕಿಟ್ಟಿ, ಮಡದಿ. ಇವಳು ನಿಮ್ಮ ಮಗಳು. ನನಗೆ ರವಿ ಬೆಳಗೆರೆ ಮಗಳು, ಮೊಮ್ಮಗಳು ಎನ್ನುವುದು ಮ್ಯಾಟರ್ ಆಗಲ್ಲ. ನೀವು ಹೇಗೆ ನಿಮ್ಮ ಗಂಡನ ವೃತ್ತಿ ಬೇರೆ, ತಂದೆಯವರ ವೃತ್ತಿ ಬೇರೆ ಎನ್ನುತ್ತೀರಾ, ಅದೇ ರೀತಿ ನಾನು ಇದನ್ನು ಪರಿಗಣಿಸುತ್ತೇನೆ. ಆರಾಮಾಗಿರಿ. ನಮ್ಮ ಬಾಂಧವ್ಯ ಹೀಗೆ ಇರುತ್ತದೆ ಎಂದರು, ಆಗ ನನಗೆ ಅನ್ನಿಸಿತು, ಅವರು ಎಷ್ಟು ದೊಡ್ಡವರು, ನಾನು ಅವರ ಮುಂದೆ ಸಣ್ಣವಳು ಅನ್ನಿಸಿಬಿಡ್ತು" ಎಂದು ಭಾವನಾ ಬೆಳಗೆರೆ ವಿವರಿಸಿದ್ದಾರೆ.