Shane Warne Death: ಶೇನ್ ವಾರ್ನ್ ಸಾವಿಗೆ ಸೆಕ್ಸ್ ಡ್ರಗ್ಸ್ ಕಾರಣ!
ಈ ಬಗ್ಗೆ ಡೈಲಿ ಮೇಲ್ ವರದಿ ಮಾಡಿದ್ದು, ಶೇನ್ ವಾರ್ನ್ ನಿಗೂಢ ಸಾವಿನ ತನಿಖೆಯಲ್ಲಿ ಭಾಗಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ವಾರ್ನ್ ಸಾವಿಗೀಡಾಗಿದ್ದ ಕೋಣೆಯಲ್ಲಿ ಸಿಕ್ಕ ಮಾತ್ರೆಗಳ ಬಾಟಲಿಯನ್ನು ಯಾರಿಗೂ ತಿಳಿಯದಂತೆ ಎತ್ತಿಡಲು ಮತ್ತು ಸಾಕ್ಷ್ಯ ನಾಶಪಡಿಸಲು ಆದೇಶಿಸಲಾಗಿತ್ತು ಎಂದು ತಿಳಿಸಿರುವುದಾಗಿ ವರದಿ ಮಾಡಿದೆ.


ನವದೆಹಲಿ: ಆಸ್ಟ್ರೇಲಿಯದ ಮಾಜಿ ಆಟಗಾರ ಶೇನ್ ವಾರ್ನ್(Shane Warne Death) ಸಾವನ್ನಪ್ಪಿ ಮೂರು ವರ್ಷ ಕಳೆದಿದೆ. ಹೃದಯಾಘಾತದಿಂದ ಅವರು ಸಾವನ್ನಪಿದ್ದಾರೆ ಎಂದು ಹೇಳಲಾಗಿದ್ದರೂ ಕೂಡ ನಿಖರ ಕಾರಣ ಏನೆಂಬುದು ಇಂದಿಗೂ ನಿಗೂಡ. ಈ ಹಿಂದೆ ಡ್ರಗ್ಸ್ ಸೇವನೆಯಿಂದ ಅವರು ಸಾವನ್ನಪಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರ ಸಾವಿನ ಕುರಿತಾಗಿ ಮತ್ತೊಂದು ಸುದ್ದಿ ಹೊರಬಿದ್ದಿದೆ. ವಾರ್ನ್ ಮೃತಪಟ್ಟ ವಿಲ್ಲಾದಲ್ಲಿದ್ದ ಸೂಪರ್ ಸ್ಟ್ರಾಂಗ್ ಸೆಕ್ಸ್ ಡ್ರಗ್(Kamagra drug) ಅನ್ನು ತನಿಖಾಧಿಕಾರಿಗಳು ಸದ್ದಿಲ್ಲದೆ ತೆಗೆದುಹಾಕಿದ್ದಾರೆ ಎಂಬ ಆಘಾತಕಾರಿ ವಿವರವೊಂದು ಹೊರಬಿದ್ದಿದೆ. ವಾರ್ನ್ ಸಾವಿನ ರಹಸ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದೆಯೇ ಎಂಬ ಬಗ್ಗೆ ಇದೀಗ ಅನುಮಾನಗಳು ಹುಟ್ಟಿಕೊಂಡಿವೆ.
2022ರಲ್ಲಿ ವಾರ್ನ್ ರಜಾದಿನಗಳನ್ನು ಕಳೆಯಲು ಥಾಯ್ಲೆಂಡ್‌ನ ಖಾಸಗಿ ವಿಲ್ಲಾಗೆ ಸ್ನೇಹಿತರೊಂದಿಗೆ ತೆರಳಿದ್ದರು. ಈ ವೇಳೆ ಅವರು ಸಾವನ್ನಪಿದ್ದರು. ಅಂದು ಶೇನ್ ವಾರ್ನ್ ಉಳಿದುಕೊಂಡಿದ್ದ ಖಾಸಗಿ ವಿಲ್ಲಾದ ಕೊಠಡಿಯ ನೆಲ ಮತ್ತು ಸ್ನಾನದ ಟವೆಲ್‌ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಥಾಯ್ಲೆಂಡ್ ಪೊಲೀಸರು ಮಾಹಿತಿ ನೀಡಿದ್ದರು. ಆದರೆ ವೈದ್ಯಕೀಯ ವರದಿ ಬಂದಾಗ ಪ್ರಜ್ಞಾಹೀನರಾಗಿದ್ದ ವಾರ್ನ್‌ಗೆ ಸಿಪಿಆರ್ ನೀಡುವ ವೇಳೆ ಕೆಮ್ಮು ಬಂದಾಗ ಬಾಯಿಯಿಂದ ರಕ್ತ ಸ್ರಾವ ಆಗಿರಬಹುದು ಎಂದು ಹೇಳಲಾಗಿತ್ತು. ಇದೀಗ ಅವರ ಸಾವಿಗೆ ಕಾಮಾಗ್ರ ಎಂಬ ಹೆಸರಿನ ಡ್ರಗ್ ಕಾರಣ ಎಂದು ವರದಿಯಾಗಿದೆ.
ಈ ಬಗ್ಗೆ ಡೈಲಿ ಮೇಲ್ ವರದಿ ಮಾಡಿದ್ದು, ಶೇನ್ ವಾರ್ನ್ ನಿಗೂಢ ಸಾವಿನ ತನಿಖೆಯಲ್ಲಿ ಭಾಗಿಯಾಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ವಾರ್ನ್ ಸಾವಿಗೀಡಾಗಿದ್ದ ಕೋಣೆಯಲ್ಲಿ ಸಿಕ್ಕ ಮಾತ್ರೆಗಳ ಬಾಟಲಿಯನ್ನು ಯಾರಿಗೂ ತಿಳಿಯದಂತೆ ಎತ್ತಿಡಲು ಮತ್ತು ಸಾಕ್ಷ್ಯ ನಾಶಪಡಿಸಲು ಆದೇಶಿಸಲಾಗಿತ್ತು ಎಂದು ತಿಳಿಸಿರುವುದಾಗಿ ವರದಿ ಮಾಡಿದೆ.
ಇದನ್ನೂ ಓದಿ IPL 2025: ಐಪಿಎಲ್ ಆಫರ್ ತಿರಸ್ಕರಿಸಿದ ಇಂಗ್ಲೆಂಡ್ ಬ್ಯಾಟರ್
'ವಾರ್ನ್ ಮೃತಪಟ್ಟಿದ್ದ ಕೋಣೆಯಿಂದ ಕಾಮಾಗ್ರ ಎಂಬ ಹೆಸರಿನ ಮಾತ್ರೆಯ ಬಾಟಲಿಯನ್ನು ವಿಲೇವಾರಿ ಮಾಡಲು ನಮಗೆ ಉನ್ನತ ಅಧಿಕಾರಿಗಳು ಆದೇಶಿಸಿದರು. ಈ ಮಾತ್ರೆಯನ್ನು ನಿಮಿರುವಿಕೆಯ ದೌರ್ಬಲ್ಯಕ್ಕೆ ಬಳಸುತ್ತಾರೆ. ಒಂದು ವೇಳೆ ಹೃದಯ ದೌರ್ಬಲ್ಯ ಹೊಂದಿರುವವರು ಇದನ್ನು ಬಳಸಿದರೆ ಕಂಟಕವಾಗುವ ಸಾಧ್ಯತೆಯೂ ಇರುತ್ತದೆ. ಈ ಔಷಧವು ವಯಾಗ್ರದಲ್ಲಿ ಕಂಡುಬರುವ ಸಿಲ್ಡೆನಾಫಿಲ್ ಸಿಟ್ರೇಟ್ ಅನ್ನು ಒಳಗೊಂಡಿದೆ. ಇದನ್ನು ನಾನು ಕೋಣೆಯಿಂದ ಸಂಗ್ರಹಿಸಿದಾಗ ಹಿರಿಯ ಅಧಿಕಾರಿಗಳು ಮಾತ್ರೆಗಳ ಬಾಟಲಿಯನ್ನು ಬಹಿರಂಗಪಡಿಸದಂತೆ ಆದೇಶಿಸಿದರು. ಇದರಲ್ಲಿ ಆಸ್ಟ್ರೇಲಿಯಾದ ಅಧಿಕಾರಿಗಳು ಭಾಗಿಯಾಗಿರಬಹುದು' ಎಂದು ಹೆಸರು ಹೆಸರು ಹೇಳಲಿಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಘಟನಾ ಸ್ಥಳದಲ್ಲಿ ವಾಂತಿ ಮತ್ತು ರಕ್ತವೂ ಬಿದ್ದಿತ್ತು. ಆದರೆ ನಮಗೆ ಬಂದ ಆದೇಶದಂತೆ ನಾವು ಕಾಮಗ್ರಾವನ್ನು ತೆರವುಗೊಳಿಸಿದೆವು' ಥೈಲ್ಯಾಂಡ್‌ನಲ್ಲಿ ಕಾಮಾಗ್ರ ನಿಷೇಧಿತ ವಸ್ತುವಾಗಿದೆ' ಎಂದು ಈ ಅಧಿಕಾರಿ ತಿಳಿಸಿದರು.