Yashvant Varma: ಭಾರತದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ಪ್ರಕ್ರಿಯೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನ್ಯಾಯಾಧೀಶರ ಮನೆಗೆ ಮನೆಗೆ ಬೆಂಕಿ ಬಿದ್ದಿದ್ದರಿಂದ ಅವರ ಮನೆಯಲ್ಲಿದ್ದ ರಾಶಿ ರಾಶಿ ಹಣದ ಕಂತೆಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಬೆನ್ನಲ್ಲೇ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.


ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ (Yashvant Varma) ಅವರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನ್ಯಾಯಾಧೀಶರ ಮನೆಗೆ ಮನೆಗೆ ಬೆಂಕಿ ಬಿದ್ದಿದ್ದರಿಂದ ಅವರ ಮನೆಯಲ್ಲಿದ್ದ ರಾಶಿ ರಾಶಿ ಹಣದ ಕಂತೆಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಬೆನ್ನಲ್ಲೇ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಈ ವಿಷಯದ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಆದೇಶಿಸಿದ ನಂತರ ಯಶವಂತ ವರ್ಮಾ ಅವರನ್ನು ವರ್ಗಾವಣೆ ನಡೆದಿದೆ. ನ್ಯಾಯಮೂರ್ತಿ ವರ್ಮಾ ಅವರು ಮಾತ್ರ ತಾನು ನಿರಪರಾಧಿ ತಮಗೂ ಇದಕ್ಕೂ ಸಂಬಂಧವೇ ಇಲ್ಲ , ಪಿತೂರಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಅದೇನೆ ಇರಲಿ ಭಾರತದಲ್ಲಿ ನ್ಯಾಯಾಧೀಶರ ವರ್ಗಾವಣೆ ಪ್ರಕ್ರಿಯೇ ಹೇಗಿರುತ್ತದೆ? ಯಾವ ಸಂದರ್ಭದಲ್ಲಿ ತಕ್ಷಣವೇ ಅವರನ್ನು ವರ್ಗಾವಣೆ ಮಾಡಲು ಆದೇಶ ನೀಡಲಾಗುತ್ತದೆ. ವರ್ಗಾವಣೆಗೆ ಎಷ್ಟು ದಿನಗಳು ಬೇಕು ಇವುಗಳೆಲ್ಲವನ್ನು ನೋಡೋಣ.
ಭಾರತದಲ್ಲಿ, ನ್ಯಾಯಮೂರ್ತಿಗಳ ವರ್ಗಾವಣೆಯು ದೀರ್ಘ ಪ್ರಕ್ರಿಯೆಗೆ ಒಳಗಾಗುತ್ತದೆ, ಅಲ್ಲಿ "ಮುಖ್ಯ ನ್ಯಾಯಮೂರ್ತಿಗಳು" ನಿರ್ದಿಷ್ಟ ನ್ಯಾಯಮೂರ್ತಿಯನ್ನು ಯಾವ ರಾಜ್ಯದಲ್ಲಿ ಮತ್ತು ಯಾವ "ಹೈಕೋರ್ಟ್" ನಲ್ಲಿ ವರ್ಗಾಯಿಸಬೇಕೆಂದು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮುಖ್ಯ ನ್ಯಾಯಮೂರ್ತಿ ಜೊತೆ ಪೂರ್ವ ಸಮಾಲೋಚನೆ ನಡೆಸಿದ ನಂತರ ರಾಷ್ಟ್ರಪತಿಗಳು ನ್ಯಾಯಮೂರ್ತಿ ಒಂದು ನ್ಯಾಯಾಲಯದಿಂದ ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸುತ್ತಾರೆ. 222 ನೇ ವಿಧಿಯು ನ್ಯಾಯಾಧೀಶರನ್ನು ಒಂದು ಹೈಕೋರ್ಟ್‌ನಿಂದ ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಲು ಅವಕಾಶವನ್ನು ಒದಗಿಸುತ್ತದೆ. ಮೊದಲ ನ್ಯಾಯಮೂರ್ತಿ ಪ್ರಕರಣ" ಎಂದೂ ಕರೆಯಲ್ಪಡುವ ಎಸ್‌ಪಿ ಗುಪ್ತಾ ವರ್ಸಸ್ ಭಾರತದ ರಾಷ್ಟ್ರಪತಿ (1981) ಪ್ರಕರಣದಲ್ಲಿ, ನ್ಯಾಯಾಂಗ ನೇಮಕಾತಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳ ಅಧಿಕಾರಗಳನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ, ಅಂತಿಮವಾಗಿ ರಾಷ್ಟ್ರಪತಿಗಳು ನ್ಯಾಯಾಂಗವನ್ನು ಸಂಪರ್ಕಿಸಬೇಕು, ಆದರೆ ನ್ಯಾಯಾಧೀಶರನ್ನು ವಜಾ ಗೊಳಿಸುವ ಇಲ್ಲವೇ ನೇಮಕ ಮಾಡುವಾಗ ಅಂತಿಮ ಅಧಿಕಾರವು ಮಂತ್ರಿ ಮಂಡಳಿಯ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುವ ಕಾರ್ಯಾಂಗದ ಮೇಲಿದೆ ಎಂದು ತೀರ್ಪು ನೀಡಿತ್ತು. "ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ v. ಯೂನಿಯನ್ ಆಫ್ ಇಂಡಿಯಾ (1993)" ಎಂದು ಕರೆಯಲ್ಪಡುವ ಎರಡನೇ ನ್ಯಾಯಮೂರ್ತಿ ಪ್ರಕರಣ"ವು ನ್ಯಾಯಾಂಗ ನೇಮಕಾತಿಗಳಿಗಾಗಿ ಕೊಲಿಜಿಯಂ ವ್ಯವಸ್ಥೆಯನ್ನು ಸ್ಥಾಪಿಸಿತು, ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಹಿರಿಯ ನ್ಯಾಯಮೂರ್ತಿಗಳ ಸಮಿತಿಗೆ ಪ್ರಾಮುಖ್ಯತೆಯನ್ನು ನೀಡಿತು.
1998 ರ ಸುಪ್ರೀಂ ಕೋರ್ಟ್ ಅಭಿಪ್ರಾಯವಾದ ಮೂರನೇ ನ್ಯಾಯಮೂರ್ತಿಗಳ ಪ್ರಕರಣವು ನ್ಯಾಯಾಂಗ ನೇಮಕಾತಿಗಳಲ್ಲಿ "ಸಮಾಲೋಚನೆ"ಯ ಅರ್ಥವನ್ನು ಸ್ಪಷ್ಟಪಡಿಸಿತು. ಕೊಲಿಜಿಯಂ ವ್ಯವಸ್ಥೆಯನ್ನು ಕೇವಲ ಮುಖ್ಯ ನ್ಯಾಯಮೂರ್ತಿ ಮತ್ತು ಇಬ್ಬರು ಹಿರಿಯ ನ್ಯಾಯಮೂರ್ತಿ ಬದಲಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು ಸೇರಿಸಲು ವಿಸ್ತರಿಸಿತು. 1998 ರಲ್ಲಿ, ಆಗಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿಈ ಆದೇಶವನ್ನು ಹೊರಡಿಸಲಾಗಿತ್ತು. ಆದರೆ 2015 ರಲ್ಲಿ ಇದನ್ನು ರದ್ದುಗೊಳಿಸಲಾಗಿತ್ತು.
ಟೀಕೆಗಳೇನು?
ಅಂತರರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗದ (ICJ) ಇತ್ತೀಚಿನ ವರದಿಯು ಭಾರತದಲ್ಲಿ ನ್ಯಾಯಾಂಗ ಸ್ವಾತಂತ್ರ್ಯದ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಹೆಚ್ಚುತ್ತಿರುವ ಕಾರ್ಯಾಂಗ ಹಸ್ತಕ್ಷೇಪ, ಆಡಳಿತದಲ್ಲಿ ಪಾರದರ್ಶಕತೆಯನ್ನು ಮರೆಮಾಚುತ್ತದೆ ಎಂದು ವರದಿ ಹೇಳಿದೆ. ನ್ಯಾಯಾಧೀಶರ ಒಪ್ಪಿಗೆ ಇಲ್ಲದೆ ಮಾಡುವ ವರ್ಗಾವಣೆ ಅಸಂಬದ್ಧ ಎಂದು ಅದು ಹೇಳಿದೆ.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆ ಏನು ಹೇಳುತ್ತದೆ?
ಕೊಲಿಜಿಯಂ ವ್ಯವಸ್ಥೆಯ ಅಪಾರದರ್ಶಕತೆಯ ಬಗ್ಗೆ ಇರುವ ಕಳವಳಗಳನ್ನು ಪರಿಹರಿಸಲು, ನರೇಂದ್ರ ಮೋದಿ ಸರ್ಕಾರ 2014 ರಲ್ಲಿ ನ್ಯಾಯಾಂಗ ನೇಮಕಾತಿಗಳಲ್ಲಿ ವ್ಯಾಪಕ ಸುಧಾರಣೆಗಳನ್ನು ಪ್ರಸ್ತಾಪಿಸಿತು. ಆಗಸ್ಟ್‌ನಲ್ಲಿ, ಸಂಸತ್ತು 2014 ರ ಸಂವಿಧಾನ (99 ನೇ ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿಗಳನ್ನು ಜಾರಿಗೆ ತಂದಿತು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯನ್ನು ಬದಲಿಸಲು ಸ್ವತಂತ್ರ ಸಂಸ್ಥೆಯನ್ನು ಸ್ಥಾಪಿಸುವ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ಪರಿಚಯ ಮಾಡಿದೆ. ಆ ಸಮಿತಿ ಒಳಗೆ ಸುಪ್ರೀಂ ಕೋರ್ಟ್‌ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಕೇಂದ್ರ ಕಾನೂನು ಸಚಿವರು ಮತ್ತು ಇಬ್ಬರು ಗಣ್ಯ ನಾಗರಿಕರನ್ನು ಒಳಗೊಂಡಿತ್ತು. ಸಂಸತ್ತಿನಲ್ಲಿ ಬಹುತೇಕ ಸಂಪೂರ್ಣ ಒಮ್ಮತದೊಂದಿಗೆ -ಹಿರಿಯ ನ್ಯಾಯಶಾಸ್ತ್ರಜ್ಞ ರಾಮ್ ಜೇಠ್ಮಲಾನಿಯವರ ಏಕೈಕ ಭಿನ್ನಾಭಿಪ್ರಾಯದೊಂದಿಗೆ ಇದು ಅಂಗೀಕರಿಸಲ್ಪಟ್ಟಿತು. ಬಳಿಕ 16 ರಾಜ್ಯ ಶಾಸಕಾಂಗಗಳು ಇದನ್ನು ಅನುಮೋದಿಸಿದವು.
ಈ ಸುದ್ದಿಯನ್ನೂ ಓದಿ: Justice Yashwant Varma: 15 ಕೋಟಿ ರೂ. ಪತ್ತೆ ಪ್ರಕರಣ; ಅಲಹಾಬಾದ್ ಹೈಕೋರ್ಟ್‌ಗೆ ಯಶವಂತ್ ವರ್ಮಾ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಶಿಫಾರಸು
ಇದು ಜಾರಿಗೆ ಬಂದ ಕೆಲವೇ ದಿನಗಳಲ್ಲಿ, ಕಾನೂನನ್ನು ಸುಪ್ರೀಂ ಕೋರ್ಟ್‌ನಲ್ಲಿ ಈ ಸಮಿತಿ ಕುರಿತು ಪ್ರಶ್ನಿಸಲಾಯಿತು. NJAC ಯಲ್ಲಿ ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಾಗಿತ್ತು. ಈ ಸಮಿತಿಯಲ್ಲಿದ್ದವರಿಗೆ ವಿಟೋ ಅಧಿಕಾರವನ್ನು ನೀಡಲಾಗಿತ್ತು. ಆದರೆ ಅಕ್ಟೋಬರ್ 16, 2015 ರಂದು, ಐದು ನ್ಯಾಯಾಧೀಶರ ಪೀಠವು 4:1 ಬಹುಮತದೊಂದಿಗೆ NJAC ಸಂವಿಧಾನಬಾಹಿರವಾಗಿದೆ ಎಂದು ತಿರಸ್ಕರಿಸಿದ್ದರು.
ಮತ್ತೆ ಸುದ್ದಿಯಲ್ಲಿ ಎನ್‌ಜೆಎಸಿ
ಇದೀಗ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು NJAC ಕುರಿತು ಮತ್ತೆ ಮಾತನಾಡಿದ್ದಾರೆ. ಎನ್‌ಜೆಎಸಿ ಇದ್ದಿದ್ದರೆ ಈ ವಿಷಯಗಳು ವಿಭಿನ್ನವಾಗಿರುತ್ತಿದ್ದವು ಎಂದು ಹೇಳಿದ್ದಾರೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾರ್ಯನಿರ್ವಹಿಸುತ್ತಿದ್ದರೆ, ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರ ಕೊಲಿಜಿಯಂ ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವಾಪಸ್ ಕಳುಹಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತಿರಲಿಲ್ಲ. ವರ್ಮಾ ಅವರನ್ನು ಅಲಹಾಬಾದ್‌ನಿಂದ ವರ್ಗಾವಣೆ ಮಾಡಲಾಗುತ್ತಿರಲಿಲ್ಲ. ನ್ಯಾ. ಯಶವಂತ್ ವರ್ಮಾ ವಿರುದ್ಧದ ಆರೋಪಗಳ ತನಿಖೆಗೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ಇದೀಗ ಯಶವಂತ್ ವರ್ಮಾ ಅವರನ್ನು ಅಲಹಾಬಾದ್‌ಗೆ ವರ್ಗಾವಣೆ ಮಾಡಲಾಗಿದೆ. ತನಿಖೆ ಮುಗಿಯುವ ಮೊದಲೇ ವರ್ಗಾವಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶವನ್ನು ಉಂಟು ಮಾಡಿದೆ.