ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narada Sanchara: ಇದು ಸ್ಫರ್ಧಾ ರಾಜಕೀಯ!

ರಾಜಕೀಯದಲ್ಲಿ ‘ಸ್ಪರ್ಧೆ’ ಇರೋದೇನೋ ನಿಮಗೆ ಗೊತ್ತುಂಟು, ಆದರೆ ‘ಸ್ಪರ್ಧೆ’ಯೊಂದರ ವಿಷಯದಲ್ಲೂ ರಾಜಕೀಯದ ಗಿರಗಿಟ್ಲೆ ಆಡ್ತಾ ಇರೋದನ್ನ ನೀವು ಬಲ್ಲಿರೋ? ಪೇಳು ವಂಥವ ರಾಗಿ ಸ್ವಾಮೀ! ಅಂಥದೊಂದು ಸುದ್ದಿ ‘ಸುಂಯ್’ ಅಂತ ಸುತ್ತಾಡಿಕೊಂಡು ಬಂದಿದೆ ಪಕ್ಕದ ತೆಲಂಗಾಣ ರಾಜ್ಯದಿಂದ. ಬಹುತೇಕರಿಗೆ ಈಗಾಗಲೇ ಗೊತ್ತಿರುವಂತೆ, ಮುಂಬರುವ ಮೇ ತಿಂಗ ಳಲ್ಲಿ ‘ಮಿಸ್ ವರ್ಲ್ಡ್’ ಸೌಂದರ್ಯ ಸ್ಪರ್ಧೆಯನ್ನು ನಡೆಸಲು ಹೈದರಾಬಾದ್ ನಗರಿ ಸಜ್ಜಾಗುತ್ತಿದೆ.

ಇದು ಸ್ಫರ್ಧಾ ರಾಜಕೀಯ!

Profile Ashok Nayak Apr 7, 2025 3:14 PM

ನಾರದ ಸಂಚಾರ

ಕಲಹ ಪ್ರಿಯ

ರಾಜಕೀಯದಲ್ಲಿ ‘ಸ್ಪರ್ಧೆ’ ಇರೋದೇನೋ ನಿಮಗೆ ಗೊತ್ತುಂಟು, ಆದರೆ ‘ಸ್ಪರ್ಧೆ’ಯೊಂದರ ವಿಷಯದಲ್ಲೂ ರಾಜಕೀಯದ ಗಿರಗಿಟ್ಲೆ ಆಡ್ತಾ ಇರೋದನ್ನ ನೀವು ಬಲ್ಲಿರೋ? ಪೇಳು ವಂಥವರಾಗಿ ಸ್ವಾಮೀ! ಅಂಥದೊಂದು ಸುದ್ದಿ ‘ಸುಂಯ್’ ಅಂತ ಸುತ್ತಾಡಿಕೊಂಡು ಬಂದಿದೆ ಪಕ್ಕದ ತೆಲಂಗಾಣ ರಾಜ್ಯದಿಂದ. ಬಹುತೇಕರಿಗೆ ಈಗಾಗಲೇ ಗೊತ್ತಿರುವಂತೆ, ಮುಂಬರುವ ಮೇ ತಿಂಗಳಲ್ಲಿ ‘ಮಿಸ್ ವರ್ಲ್ಡ್’ ಸೌಂದರ್ಯ ಸ್ಪರ್ಧೆಯನ್ನು ನಡೆಸಲು ಹೈದರಾಬಾದ್ ನಗರಿ ಸಜ್ಜಾಗುತ್ತಿದೆ. ಆದರೆ, ಇದರಲ್ಲಿ ಸ್ಪರ್ಧಿಗಳು ತಮ್ಮ ‘ಮಾರ್ಜಾಲ ನಡಿಗೆ’ಯನ್ನು (ಆಂದ್ರೆ ‘ಕ್ಯಾಟ್ ವಾಕ್’ ಕಣ್ರೀ!) ಪ್ರದರ್ಶಿಸುವ ಮೊದಲೇ ಅಲ್ಲಿನ ಎರಡು ಪ್ರಮುಖ ರಾಜಕೀಯ ಪಕ್ಷಗಳು ‘ಮಾರ್ಜಾಲ ಮುಷ್ಟಿಯುದ್ಧ’ಕ್ಕೆ ಇಳಿದುಬಿಟ್ಟಿವೆ.

ಅವು ಅಧಿಕಾರಾರೂಢ ‘ಕಾಂಗ್ರೆಸ್ಸು’ ಮತ್ತು ಅಧಿಕಾರ ವಂಚಿತ ‘ಬಿಆರೆಸ್ಸು’ (ಭಾರತ ರಾಷ್ಟ್ರ ಸಮಿತಿ) ಎಂಬುದು ನಿಮ್ಮ ಗಮನಕ್ಕೆ. ಈ ಪೈಕಿ ಬಿಆರ್‌ಎಸ್ ಪಕ್ಷದವರು ಮೊದಲಿಗೆ ಗಂಟಲು ಸರಿಮಾಡಿಕೊಂಡು, “ಇಪ್ಪುಡು ಚೂಡಂಡೀ, ನಮ್ ರಾಜ್ಯ ಈಗಾಗಲೇ ಸಿಕ್ಕಾಪಟ್ಟೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ; ಹಿಂಗಿರೋವಾಗ ಆಡಳಿತಾರೂಢ ಕಾಂಗ್ರೆಸ್ಸಿಗರಾದ ನೀವು ಈ ಕಾರ್ಯಕ್ರಮಕ್ಕಾಗಿ ಬರೋಬ್ಬರಿ 200 ಕೋಟಿ ರುಪಾಯಿಯಷ್ಟು ಸಾರ್ವಜನಿಕರ ಹಣವನ್ನು ವ್ಯರ್ಥಮಾಡೋದು ತಪ್ಪಲ್ವಾ? ಇದು ಯಾವ ಪುರುಷಾರ್ಥಕ್ಕಾಗಿ ಸ್ವಾಮೀ? ಈಗಾಗಲೇ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಒತ್ತಾಸೆಯಾಗಿ ನಿಲ್ಲಬಲ್ಲ ಒಂದಿಷ್ಟು ಕಲ್ಯಾಣ ಕಾರ್ಯಕ್ರಮಗಳಿಗೆ ಸದರಿ ಹಣವನ್ನು ತಿರುಗಿಸಿದ್ದರೆ ಅವರ ಹೊಟ್ಟೆಯೂ ತಂಪಾಗುತ್ತಿತ್ತಲ್ಲವೇ?" ಎಂದು ಪ್ರಶ್ನಿಸುವ ಮೂಲಕ ಅಪಸ್ವರದ ಆಲಾಪನೆಯನ್ನು ಮಾಡಿಬಿಟ್ಟರಂತೆ.

ಇದನ್ನೂ ಓದಿ: Yagati Raghu Nadig Column: ʼಹಿಮʼದ ಮಡಿಲು ಈಗ ಅಗ್ನಿʼಕುಂಡʼ

ಕಲಹಪ್ರಿಯ ನಾರದರಿಗೆ ಬಂದಿರುವ ಮಾಹಿತಿಯ ಪ್ರಕಾರ, ತೆಲಂಗಾಣ ರಾಜ್ಯವನ್ನು ಬ್ರ್ಯಾಂಡ್ ಮಾಡುವಲ್ಲಿನ ಒಂದು ಸದವಕಾಶವಾಗಿ ಸದರಿ ‘ಮಿಸ್ ವರ್ಲ್ಡ್’ ನಂಥ ಪ್ರತಿಷ್ಠಿತ ಕಾರ್ಯಕ್ರಮವನ್ನು ಕಾಂಗ್ರೆಸ್ ಸರಕಾರ ಪರಿಗಣಿಸುತ್ತಿದೆಯಂತೆ. ಇದರ ಭಾಗವಾಗಿ ಸಮರ್ಥನೆಗಿಳಿದ ಸರಕಾರದ ಪ್ರತಿನಿಧಿಗಳು ಬಿಆರ್‌ಎಸ್‌ನವರನ್ನು ಉದ್ದೇಶಿಸಿ, “ಮೀರು ಏಂ ಮಾಡ್ಲಾಡು ತುನ್ನಾರು? ಈ ಕಾರ್ಯಕ್ರಮಕ್ಕೆ ಒಟ್ಟು ವೆಚ್ಚವಾಗ್ತಾ ಇರೋ ಹಣ 54 ಕೋಟಿ ರುಪಾಯಿಗಳಷ್ಟೇ, ಇದರಲ್ಲಿ ರಾಜ್ಯದ ಕೊಡುಗೆ ಇರೋದು ಅರ್ಧದಷ್ಟು ಮಾತ್ರ" ಎಂದು ಹರಸಾಹಸ ಪಟ್ಟು ಸ್ಪಷ್ಟಪಡಿಸಿದರಂತೆ.

ಇದು ಸಾಲದೆಂಬಂತೆ, “10 ವರ್ಷಗಳ ಅಧಿಕಾರಾವಧಿಯಲ್ಲಿ ನಿಮ್ಮ ಬಿಆರ್‌ಎಸ್ ಪಕ್ಷವು ರಾಜ್ಯಕ್ಕೆ ಇಂಥ ದೊಂದು ಕಾರ್ಯಕ್ರಮವನ್ನು ತರಲು ವಿಫಲವಾಯ್ತಲ್ರೀ..!!" ಎಂದೂ ಕಾಂಗ್ರೆಸ್ಸಿಗರು ತಮ್ಮ ರಾಜಕೀಯ ಎದುರಾಳಿಗಳನ್ನು ಟೀಕಿಸಿದ್ದೂ ಆಯ್ತಂತೆ!

ಒಟ್ನಲ್ಲಿ, ಸಮಯ-ಸಂದರ್ಭ ಎಂಥದೇ ಇರಲಿ, ಸಮಾವೇಶ ಯಾವುದೇ ಇರಲಿ, ನಮ್ ರಾಜಕೀಯ ಪಕ್ಷಗಳು ಪರಸ್ಪರರ ಕಾಲೆಳೆಯೋಕೆ ಚಾತಕ ಪಕ್ಷಿಗಳಂತೆ ಕಾಯ್ತಾ ಇರ‍್ತವೆ ಅನ್ನೋದು ಮಾತ್ರ ನಿಜ ಕಣ್ರೀ!

ನಾರಾಯಣ ನಾರಾಯಣ!

ಹಾಲು-ಹಣ್ಣು-ತರಕಾರಿ ಹೀಗೆ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಈಗಾಗಲೇ ಏದುಸಿರು ಬಿಡುತ್ತಿರುವ ಶ್ರೀಸಾಮಾನ್ಯರು, ಸದ್ಯದಲ್ಲೇ ಇನ್ನೊಂದು ಸುತ್ತಿನ ಬರೆ ಹಾಕಿಸಿ ಕೊಳ್ಳಲು ತಮ್ಮ ಅಂಗಾಂಗಗಳನ್ನು ಮುಂದುಮಾಡಿಕೊಳ್ಳಬೇಕಾಗಿ ಬಂದಿದೆ. ಕಾಫಿ, ಚಹಾ ಮತ್ತು ತಿಂಡಿಗಳ ಬೆಲೆಯೇರಿಕೆ ಮಾಡಲು ಹೋಟೆಲ್ ಮಾಲೀಕರು ಈಗಾಗಲೇ ನಿರ್ಧರಿಸಿರುವುದು ಇದಕ್ಕೆ ಕಾರಣ. ಹೀಗಾಗಿ, ಇನ್ನು ಮುಂದೆ ಕಾಫಿ, ಚಹಾ, ತಿಂಡಿಗಳು ಬಾಯಿಗೆ ಮಾತ್ರ ಬಿಸಿಯಾಗಿರೋಲ್ಲ, ಅವುಗಳ ದರಗಳು ಜೇಬನ್ನೂ ಸುಡೋದು ಖಾತ್ರಿ ಅಂತಾಯ್ತು! ಏನು ಮಾಡೋದು.... ಕಾಲಾಯ ತಸ್ಮೈ ನಮಃ