Virat Kohli: ಮುಂಬೈ ವಿರುದ್ಧ ನೂತನ ದಾಖಲೆ ಬರೆಯಲು ಕೊಹ್ಲಿ ಸಜ್ಜು
IPL 2025: ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಹೊರತುಪಡಿಸಿ ಬೇರೆ ಯಾವ ಆಟಗಾರನೂ ಎರಡು ಅಥವಾ ಅದಕ್ಕಿಂತ ಹೆಚ್ಚು ಎದುರಾಳಿಗಳ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿಲ್ಲ. ಕೊಹ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಕೊಹ್ಲಿ ಐದನೇ ತಂಡದ ವಿರುದ್ಧ ಈ ಸಾಧನೆ ಮಾಡುವ ಸನಿಹದಲ್ಲಿದ್ದಾರೆ.


ಮುಂಬಯಿ: ಆರ್‌ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಅವರು ಇಂದು(ಸೋಮವಾರ) ನಡೆಯುವ ಮುಂಬೈ ಇಂಡಿಯನ್ಸ್(MI vs RCB) ವಿರುದ್ಧದ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆಯುವ ಸನಿಹದಲ್ಲಿದ್ದಾರೆ. ಕೊಹ್ಲಿ ಪಂದ್ಯದಲ್ಲಿ 87 ರನ್ ಬಾರಿಸಿದರೆ ಮುಂಬೈ(Mumbai Indians) ವಿರುದ್ಧ ಒಂದು ಸಾವಿರ ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಹೊರತುಪಡಿಸಿ ಬೇರೆ ಯಾವ ಆಟಗಾರನೂ ಎರಡು ಅಥವಾ ಅದಕ್ಕಿಂತ ಹೆಚ್ಚು ಎದುರಾಳಿಗಳ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿಲ್ಲ. ಕೊಹ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಕೊಹ್ಲಿ ಐದನೇ ತಂಡದ ವಿರುದ್ಧ ಈ ಸಾಧನೆ ಮಾಡುವ ಸನಿಹದಲ್ಲಿದ್ದಾರೆ.
ಇದು ಮಾತ್ರವಲ್ಲದೆ ಕೊಹ್ಲಿಗೆ ಇನ್ನೊಂದು ಮೈಲುಗಲ್ಲೊಂದನ್ನು ನಿರ್ಮಿಸುವ ಅವಕಾಶವಿದೆ. ಕೊಹ್ಲಿ 17 ರನ್ ಬಾರಿಸಿದರೆ ಟಿ20 ಕ್ರಿಕೆಟ್‌ನಲ್ಲಿ13 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಮತ್ತು ವಿಶ್ವದ ಐದನೇ ಬ್ಯಾಟರ್ ಆಗಲಿದ್ದಾರೆ. ಕೊಹ್ಲಿಗೆ ಕಳೆದ ಗುಜರಾತ್ ವಿರುದ್ಧದ ಪಂದ್ಯದಲ್ಲೇ ಈ ದಾಖಲೆ ನಿರ್ಮಿಸುವ ಅವಕಾಶವಿತ್ತು. ಆದರೆ ಕೊಹ್ಲಿ 7 ರನ್‌ಗೆ ಔಟ್ ಆಗಿದ್ದರು.
ಇದನ್ನೂ ಓದಿ IPL 2025: ಆಟಗಾರರ ಕಳಪೆ ಪ್ರದರ್ಶನದಿಂದ ಬೇಸತ್ತು ಗರಂ ಆದ ಕಾವ್ಯಾ ಮಾರನ್
ಕೊಹ್ಲಿಯ ನೆಚ್ಚಿನ ಮೈದಾನ ಎನಿಸಿಕೊಂಡಿರುವ ವಾಂಖೇಡೆ ಸ್ಟೇಡಿಯಂನಲ್ಲಿ ಈಗಾಗಲೇ ಕೊಹ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನ 50ನೇ ಶತಕ ಪೂರೈಸಿದ್ದು ಕೂಡ ಇದೇ ಮೈದಾನದಲ್ಲಿ. ಹೀಗಾಗಿ ಕೊಹ್ಲಿಗೆ ವಾಂಖೇಡೆ ಲಕ್ಕಿ ಎನಿಸಿಕೊಂಡಿದೆ. ಸೋಮವಾರ ಮುಂಬೈ ವಿರುದ್ಧವೂ ಕೊಹ್ಲಿ ಉತ್ತಮ ಬ್ಯಾಟ್ ಬೀಸಿ 13 ಸಾವಿರ ರನ್ ಪೂರೈಸಲಿದ್ದಾರೆ ಎನ್ನುವುದು ಅಭಿಮಾನಿಗಳ ನಂಬಿಕೆ.
ಟಿ20ಯಲ್ಲಿ 13 ಸಾವಿರ ರನ್ ಗಳಿಸಿದ ಆಟಗಾರರು
ಕ್ರಿಸ್ ಗೇಲ್- 14,562 ರನ್
ಅಲೆಕ್ಸ್ ಹೇಲ್ಸ್- 13,610 ರನ್
ಶೋಯಿಬ್ ಮಲಿಕ್- 13,557 ರನ್
ಕೈರಾನ್ ಪೊಲಾರ್ಡ್- 13,537 ರನ್
ವಿರಾಟ್ ಕೊಹ್ಲಿ- 12,983* ರನ್