Youtuber Mahabala Ram: ಗ್ಲೋಬಲ್ ಮಟ್ಟದಲ್ಲಿ ಕನ್ನಡಿಗ ಮಹಾಬಲ ರಾಮ್ ಹವಾ; ಪಾಕ್‌ನಲ್ಲಿ ಯುಟ್ಯೂಬರ್‌ನ ರೋಮಾಂಚನಕಾರಿ ಪ್ರವಾಸ
ಗ್ಲೋಬಲ್ ಕನ್ನಡಿಗ ಯುಟ್ಯೂಬ್ ಮೂಲಕ ಹೊಸ ಬಗೆಯ ಕಂಟೆಂಟ್ ಕೊಡುತ್ತಿರುವ ಮಹಾಬಲ ರಾಮ್ ಮೊದಲ ಬಾರಿಗೆ ಪಾಕಿಸ್ತಾನ ಸುತ್ತಿ ಬಂದಿದ್ದಾರೆ. ಅದು ಕೇವಲ ಒಂದೆರೆಡು ದಿನವಲ್ಲ. ಬರೋಬ್ಬರಿ 7 ದಿನದ ಪ್ರವಾಸ. ಏಳು ದಿನ ಪಾಕಿಸ್ತಾನ ಸುತ್ತಿ ಬಂದಿದ್ದು, ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಇಂಡಿಯಾ ಪಾಕ್ ಪಂದ್ಯ ನೋಡಿ ಖುಷಿಪಟ್ಟ ಕ್ಷಣಗಳನ್ನು ಸೆರೆ ಹಿಡಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.

Mahabala Ram

ಬೆಂಗಳೂರು: ಇದು ಸೋಶಿಯಲ್ ಮೀಡಿಯಾ ಜಮಾನ. ಮನೆ ಮನೆಯಲ್ಲಿಯೂ ಯುಟ್ಯೂಬ್‌ಗಳ ಹಂಗಾಮ. ಇಂತಹ ಕಾಲಘಟ್ಟದಲ್ಲಿ ಯುಟ್ಯೂಬರ್‌ಗಳು ಹೊಸ ಸಾಹಸಗಳನ್ನು ಮಾಡಲೇಬೇಕು. ಭಿನ್ನ-ವಿಭಿನ್ನ ಕಂಟೆಂಟ್ ಗಳನ್ನು ವೀಕ್ಷಕರಿಗೆ ಕೊಡಬೇಕು. ಅಂತಹ ಸಾಹಸವನ್ನು ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಖ್ಯಾತಿಯ ಮಹಾಬಲ ರಾಮ್ (Youtuber Mahabala Ram) ಮಾಡಿದ್ದಾರೆ. ಗ್ಲೋಬಲ್ ಕನ್ನಡಿಗ (Global Kannadiga) ಯುಟ್ಯೂಬ್ ಮೂಲಕ ಹೊಸ ಬಗೆಯ ಕಂಟೆಂಟ್ ಕೊಡುತ್ತಿರುವ ಮಹಾಬಲ ರಾಮ್ ಮೊದಲ ಬಾರಿಗೆ ಪಾಕಿಸ್ತಾನ ಸುತ್ತಿ ಬಂದಿದ್ದಾರೆ. ಅದು ಕೇವಲ ಒಂದೆರೆಡು ದಿನವಲ್ಲ. ಬರೋಬ್ಬರಿ 7 ದಿನದ ಪ್ರವಾಸ. ಏಳು ದಿನ ಪಾಕಿ ಸ್ತಾನ ಸುತ್ತಿ ಬಂದಿದ್ದು, ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದು, ಇಂಡಿಯಾ-ಪಾಕ್ ಪಂದ್ಯ ನೋಡಿ ಖುಷಿಪಟ್ಟ ಕ್ಷಣಗಳನ್ನು ಸೆರೆ ಹಿಡಿದ್ದಾರೆ. ಇನ್ನೂ ಅವರ ಏಳು ದಿನದ ಪಾಕಿಸ್ತಾನದ ಪ್ರವಾಸ ಹೇಗಿತ್ತು ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ.
2025ರ ಫೆಬ್ರವರಿಯಂದು ಭಾರತದ ಅಟ್ಟಾರಿ ಗಡಿಯಿಂದ ಪಾಕಿಸ್ತಾನದ ಅಫೀಷಿಯಲ್ ವೀಸಾದೊಂದಿಗೆ ಪಾಕಿಸ್ತಾನದ ವಾಗಾ ಗಡಿಯ ಕಡೆಗೆ ಕಾಲಿಟ್ಟು ಅಲ್ಲಿಂದ 22 ಕಿ.ಮೀ. ದೂರದಲ್ಲಿ ಇರುವ ಲಾಹೊರ್ ನಗರಕ್ಕೆ ತಲುಪಿದೆ. ಅಂದಿನ ಸಂಜೆ ಸಿಖ್ ಸಮುದಾಯದ ದೇರಾ ಸಹಿಬ್ ಗುರುದ್ವಾರವನ್ನು ನೋಡಿ ನಂತರ ಲಾಹೋರ್ ನಗರದ ಸುಪ್ರಸಿದ್ಧ ಫುಡ್ ಸ್ಟ್ರೀಟ್ ಸುತ್ತಾಡಿ, ಅಲ್ಲಿಂದ ವಿಶೇಷವಾದ ಹವೇಲಿ ರೆಸ್ಟೋರೆಂಟ್‌ನಲ್ಲಿ ಬಾದ್ಶಾಹಿ ಮಸೀದಿಯ ವ್ಯೂನಲ್ಲಿ ಕುಳಿತು ರಾತ್ರಿಯ ಉಪಹಾರ ಮಾಡಿದೆ.

ಎರಡೇನೆಯ ದಿನ ಲಾಹೋರ್‌ನ ಗಲ್ಲಿಗಳನ್ನು ಸುತ್ತಿ ಅಲ್ಲಿನ ಸ್ಥಳೀಯ ಜೀವನವನ್ನು ಗಮನಿಸಿದೆ. ಅಂದು ಚಾಂಪಿಯನ್ಸ್ ಟ್ರೋಫಿ ಭಾರತದ ಹಾಗೂ ಪಾಕಿಸ್ತಾನದ ಪಂದ್ಯ ಎಂಜಾಯ್ ಮಾಡಿದೆ. ಅಲ್ಲಿನ ಲೋಕಲ್ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಅವರ ಜತೆ ಮಾತಾಡಿದೆ. ನಮ್ಮ ಜತೆಯಲ್ಲಿ ಲಾಹೋರ್ ಪೊಲೀಸ್‌ನ 24X7 ಬಂದೋಬಸ್ತ್ ಇರುತಿತ್ತು. ಪೊಲೀಸ್ ಕೈಯಲ್ಲಿ ಎಕೆ 47 ಬಂದೂಕು ಇತ್ತು. ಪ್ರತಿ ಊರಿನ ಬದಲಾವಣೆಯ ದಿನ ಅಲ್ಲಿನ ಲೋಕಲ್ ಪೊಲೀಸ್ ಸ್ಟೇಷನ್ ಹೋಗಿ ನಾನು ರಿಜಿಸ್ಟರ್ ಮಾಡಬೇಕಾದದ್ದು ಕಡ್ಡಾಯವಾಗಿತ್ತು. ಲಾಹೋರ್‌ನ ರಂಗಲೀಲಾ ಆಟೋದಲ್ಲಿ ಓಡಾಡಿದ್ದು ಮರೆಯಲಾರದ ಅನುಭವ. ಪಾಕಿಸ್ತಾನದ ಸರ್ವೇ ಸಾಮಾನ್ಯ ಜನರು ತುಂಬಾ ಖುಷಿಯಾಗಿದ್ದರು. ನಾನು ಭಾರತೀಯ ಅಂತ ತಿಳಿದ ಮೇಲೂ ಒಬ್ಬರು ಕೂಡ ಕೋಪ ಆವೇಶ ತೋರಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಪಾಕಿಸ್ತಾನದ Katasraj ದೇವಸ್ಥಾನದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿದ್ದು ನೆನಪಿನಲ್ಲಿ ಉಳಿಯುವಂತಹದ್ದು ಎಂದಿದ್ದಾರೆ. ಅಲ್ಲಿ ಭಗವಾನ್ ಕೃಷ್ಣ ಸ್ಥಾಪಿಸಿರುವ ಶಿವಲಿಂಗಕ್ಕೆ ಕರ್ನಾಟಕದ ಪಂಚೆ ಸಿಲ್ಕ್ ಶರ್ಟ್ ಹಾಕಿ ಗ್ಲೋಬಲ್ ಕನ್ನಡಿಗ ಪೂಜೆ ಮಾಡಿದ್ದು ಬಹಳ ವಿಶೇಷ. ಅಲ್ಲಿ ಶ್ರೀ ರಾಮನ ದೇವಸ್ಥಾನ, ಹನುಮಂತನ ದೇವಸ್ಥಾನ ಕೂಡಾ ಭೇಟಿ ನೀಡಿ ಆಶೀರ್ವಾದ ಪಡೆದಿದಿದ್ದಾರೆ.

ನಂತರ ಹೋಗಿದ್ದು ಒಂದು ಪಾಕಿಸ್ತಾನಿ ಹಳ್ಳಿಗೆ. ಅಲ್ಲಿನ ಜನರ ನಿತ್ಯ ಜೀವನ, ವ್ಯಾಪಾರ ವಹಿವಾಟು ತಿಳಿದು ಅವರ ಜೀವನ ಶೈಲಿ ಅರಿತಿದ್ದೇನೆ. ನಂತರ ಹೋಗಿದ್ದು ಪಾಕಿಸ್ತಾನದ ರಾಜಧಾನಿಯಾದ ಇಸ್ಲಾಮಾಬಾದ್‌ಗೆ, ಅಲ್ಲಿಯ ಮೆಲೋಡಿ ಮಾರುಕಟ್ಟೆ, ಲೋಕಲ್ ಸ್ಟ್ರೀಟ್ ಫುಡ್, ಅಲ್ಲಿನ ಉಡುಪುಗಳ ಅಂಗಡಿ ಹಾಗೆ ಅಲ್ಲಿನ ಪ್ರಸಿದ್ಧವಾದ ಹಿಲ್ ಸ್ಟೇಷನ್‌ಗೆ ಮಳೆಯಲ್ಲಿ ಛತ್ರಿ ಹಿಡಿದು ಭೇಟಿ ನೀಡಿ ಅಲ್ಲಿ ಬಂದ ಲೋಕಲ್ ಜನರ ಜತೆ ಮಾತಾಡಿ ಅವರ ಅಭಿಪ್ರಾಯ ಅರಿತಿದ್ದು ಚೆನ್ನಾಗಿ ಇತ್ತು ಎಂದಿದ್ದಾರೆ.
ಇದನ್ನು ಓದಿ: Best Trip plan: ಗೋವಾ ಟು ಹಿಮಾಚಲ ಪ್ರದೇಶ ಟ್ರಿಪ್ ಮಾಡಿದ್ರೆ ಮಿಸ್ ಮಾಡ್ದೆ ಈ ಸ್ಥಳಗಳಿಗೆ ಭೇಟಿ ನೀಡಿ- ನಿಜವಾಗ್ಲೂ ಸ್ವರ್ಗ!
ಅಲ್ಲಿನವರು ನಮ್ಮ ಪ್ರಧಾನ ಮಂತ್ರಿ ಮೋದಿ ಅವರ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದು ಉಂಟು. ಇಸ್ಲಾಮಬಾದ್‌ನ ಹಣ್ಣು ತರಕಾರಿಗಳ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ದರಗಳನ್ನು ಅರಿತಿದ್ದು, ಲಾಹೋರ್‌ನ ಐತಿ ಹಾಸಿಕ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದು, ಅಲ್ಲಿನ ರುಚಿಯಾದ ಲೋಕಲ್ ಚಿಕನ್ ಬಿರಿಯಾನಿಯನ್ನು ಸೇವಿಸಿದ್ದು ಅದ್ಭುತವಾಗಿತ್ತು ಎಂದಿದ್ದಾರೆ. ಒಟ್ಟು 7 ದಿನಗಳ ಪ್ರವಾಸ, ಯಾವುದೇ ರೀತಿ ಅಹಿತಕರ ಘಟನೆ ಜರುಗದೆ ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ.