Viral News: ಈ ದೇಶದಲ್ಲಿ ಮೃತದೇಹದ ಬೂದಿಯನ್ನು ಸೂಪ್‌ನಲ್ಲಿ ಬೆರೆಸಿ ಕುಡಿಯುತ್ತಾರೆ!
ದಕ್ಷಿಣ ಅಮೆರಿಕದ ಯಾನೊಮಾಮಿ ಎಂಬ ಬುಡಕಟ್ಟು ಜನಾಂಗವು ಸಂಬಂಧಿಕರ ಮೃತದೇಹದ ಬೂದಿಯನ್ನು ಸೂಪ್‌ನಲ್ಲಿ ಬೆರೆಸಿ ಕುಡಿಯುವ ವಿಚಿತ್ರ ಸಂಪ್ರದಾಯವೊಂದು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ. ಈ ಸಂಪ್ರದಾಯವು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದ್ದರೂ ಇಂದಿಗೂ ಆಚರಣೆಯಲ್ಲಿ ಇದೆ.

Yanomami Tribe

ದಕ್ಷಿಣ ಅಮೆರಿಕ: ಅನೇಕ ವರ್ಷದಿಂದಲೂ ನಾವು ಹಬ್ಬ, ಸಂಪ್ರದಾಯ, ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ಇದರಲ್ಲಿ ಕೆಲವು ಸಂಪ್ರದಾಯಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರೆ ಇನ್ನು ಕೆಲವೊಂದು ಅಚ್ಚರಿ ಉಂಟು ಮಾಡಬಹುದು. ದಕ್ಷಿಣ ಅಮೆರಿಕದ ಯಾನೊ ಮಾಮಿ ಎಂಬ ಬುಡಕಟ್ಟು ಜನಾಂಗವು ಮೃತದೇಹದ ಬೂದಿಯನ್ನು ಸೂಪ್‌ನಲ್ಲಿ ಬೆರೆಸಿ ಕುಡಿಯುವ ವಿಚಿತ್ರ ಸಂಪ್ರದಾಯವೊಂದನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ. ಈ ಸಂಪ್ರದಾಯವು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದ್ದರೂ ಇಂದಿಗೂ ಆಚರಣೆಯಲ್ಲಿ ಇದೆ. ಮೃತದೇಹದ ಬೂದಿಯನ್ನು ಬಳಸಿದ ಸೂಪ್ ನೆನೆಸಿಕೊಂಡರೆ ನಿಮಗೂ ಅಚ್ಚರಿ ಎನಿಸಬಹುದು. ಆದರೆ ಇದೊಂದು ಸಂಪ್ರದಾಯವಾಗಿದ್ದು ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral News) ಅಗುತ್ತಿದೆ.
ಬುಡಕಟ್ಟು ಜನಾಂಗದವರು ಅದೇ ಸಮುದಾಯದ ಸತ್ತ ವ್ಯಕ್ತಿಯ ಬೂದಿಯನ್ನು ಸೇವನೆ ಮಾಡುವ ಪದ್ದತಿ ಇದಾಗಿದ್ದು, ಯಾನಮ್ ಅಥವಾ ಸೆನೆ ಮಾ ಎಂದೂ ಕರೆಯಲ್ಪಡುವ ಯಾನೋಮಾಮಿ ಬುಡಕಟ್ಟು ಜನಾಂಗದವರು ಈ ಅಚರಣೆ ಮಾಡುತ್ತಾರೆ. ವೆನೆಜುವೆಲಾ ಮತ್ತು ಬ್ರೆಜಿಲ್‌ನ ಕೆಲವು ಭಾಗಗಳಲ್ಲಿ ಈ ದೃಶ್ಯ ಕಂಡು ಬರುತ್ತದೆ. ಮೃತದೇಹದ ಬೂದಿಯನ್ನು ಸಂಬಂಧಿಕರು ಸೇವಿಸಿದಾಗ ಮಾತ್ರ ಮೃತರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲಿದೆ. ಹಾಗಾಗಿ ಇಂದಿಗೂ ಈ ವಿಚಿತ್ರ ಸಂಪ್ರದಾಯ ಪಾಲಿಸಿಕೊಂಡು ಬರಲಾಗಿದೆ.
ಈ ಬುಡಕಟ್ಟು ಜನಾಂಗದ ಅಂತ್ಯಕ್ರಿಯೆಯು ಸಾಂಪ್ರದಾಯಿಕ ಅಂತ್ಯಕ್ರಿಯೆಗಿಂತ ಭಿನ್ನವಾಗಿರುತ್ತದೆ. ಯನೋಮಾಮಿ ಬುಡಕಟ್ಟು ಜನಾಂಗದವರು ದೇಹವನ್ನು ಪೂರ್ತಿಯಾಗಿ ಸುಡುವ ಮುನ್ನ ಚರ್ಮದ ಪದರವನ್ನು ಸಂಗ್ರಹ ಮಾಡಿ ಅದಕ್ಕೆ ಸ್ವಲ್ಪ ಬಣ್ಣ ಬೆರೆಸಿ ಅದನ್ನು ಮೃತ ವ್ಯಕ್ತಿಯ ಕುಟುಂಬಸ್ಥರು, ಇತರರು ಮೈಗೆಲ್ಲ ಹಚ್ಚಿಕೊಳ್ಳುತ್ತಾರೆ. ಆ ಬಳಿಕ ಮೃತ ಹೊಂದಿದ್ದ ವ್ಯಕ್ತಿಯ ಕುಟುಂಬದವರೆಲ್ಲ ಸೇರಿ ಆಕ್ರಂದಿಸುತ್ತಾರೆ. ಎರಡನೇ ಹಂತದಲ್ಲಿ ಪೂರ್ತಿ ದೇಹ ಸುಟ್ಟು ಬೂದಿಯ ಜತೆಗೆ ಬಾಳೆ ಹಣ್ಣಿನ ಸೂಪ್ ತಯಾರಿಸಿ ಹಂಚಲಾಗುತ್ತದೆ.
ಸೇಡು ತೀರಿಸಿಕೊಳ್ಳುವ ಸಂಪ್ರದಾಯ
ವಯೋ ಸಹಜ ಸಾವಿನ ಸಂದರ್ಭದಲ್ಲಿಈ ಸಂಪ್ರದಾಯ ಸಾಮಾನ್ಯ. ಆದರೆ ಕೊಲೆ, ಶತ್ರುಗಳ ದಾಳಿಯಿಂದ ಮೃತರಾದ ಪಕ್ಷದಲ್ಲಿ ಅಂತಹ ಮೃತದೇಹದ ಬೂದಿಯನ್ನು ಮಹಿಳೆಯರು ಮಾತ್ರವೇ ಸೇವನೆ ಮಾಡಬೇಕು ಎಂಬ ನಿಯಮ ಇದೆ. ಹತ್ಯೆ ನಡೆದ ಒಂದು ರಾತ್ರಿ ಒಳಗಾಗಿ ತಮ್ಮ ಜನಾಂಗದ ಮೇಲೆ ದಾಳಿ ಮಾಡಿದ ಶತ್ರುಗಳ ವಿರುದ್ಧ ಪ್ರತಿ ದಾಳಿ ಮಾಡಿ ಸೇಡು ತೀರಿಸಿಕೊಳ್ಳುವ ಸಂಪ್ರದಾಯ ಕೂಡ ಯಾನೋಮಾಮಿ ಬುಡಕಟ್ಟು ಜನಾಂಗದಲ್ಲಿ ಇದೆ.
ಇದನ್ನು ಓದಿ: Viral Video: ದರೋಡೆ ಮಾಡಲು ಬಂದ ಖದೀಮರನ್ನು ಅಟ್ಟಾಡಿಸಿ ಹಿಡಿದ ಪೆಟ್ರೋಲ್ ಬಂಕ್ ಸಿಬಂದಿ; ವಿಡಿಯೊ ವೈರಲ್
ಅಧ್ಯಯನವೊಂದರ ವರದಿ ಪ್ರಕಾರ ಯಾನೋಮಾಮಿ ಬುಡಕಟ್ಟು ಜನಾಂಗದವರು ಅತೀ ಬುದ್ಧಿವಂತರಾಗಿರುತ್ತಾರೆ ಎಂಬುದನ್ನು ತಿಳಿಸಿದೆ. 500ಕ್ಕೂ ಅಧಿಕ ಸಸ್ಯಶಾಸ್ತ್ರೀಯ ಜ್ಞಾನ, ಆಹಾರದಲ್ಲಿ ಪರಿಣಿತಿ, ಔಷಧ ಪರಿಣಿತಿ, ಇತ್ಯಾದಿಯಲ್ಲಿ ಹೆಚ್ಚು ಪರಿಣಿತರು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಈ ಮೂಲಕ ಚಿತಾ ಬೂದಿಯಿಂದ ಮಾಡಿದ್ದ ಬಾಳೆಹಣ್ಣಿನ ಸೂಪ್ ವಿಚಾರವಂತೂ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.