IPL 2025: ಆಟಗಾರರ ಕಳಪೆ ಪ್ರದರ್ಶನದಿಂದ ಬೇಸತ್ತು ಗರಂ ಆದ ಕಾವ್ಯಾ ಮಾರನ್
ಭಾನುವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ಬ್ಯಾಟಿಂಗ್ ಮರೆತವರಂತೆ ಆಡಿ 8 ವಿಕೆಟ್‌ಗೆ 152 ರನ್ ಬಾರಿಸಿತು. ಜಬಾಬಿತ್ತ ಗುಜರಾತ್ ಆರಂಭಿಕ ಆಘಾತ ಹೊರತಾಗಿಯೂ 16.4 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.


ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್(Kavya Maran) ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಕುರಿತ ಮೀಮ್ಸ್‌ಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಭಾನುವಾರದ ಐಪಿಎಲ್(IPL 2025) ಪಂದ್ಯದ ವೇಳೆ ಕಾವ್ಯಾ ಮಾರನ್(SRH vs GT) ಕೊಂಚ ಗರಂ ಆಗಿ ಕಂಡುಬಂದರು. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.
ಭಾನುವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ಬ್ಯಾಟಿಂಗ್ ಮರೆತವರಂತೆ ಆಡಿ 8 ವಿಕೆಟ್‌ಗೆ 152 ರನ್ ಬಾರಿಸಿತು. ಜಬಾಬಿತ್ತ ಗುಜರಾತ್ ಆರಂಭಿಕ ಆಘಾತ ಹೊರತಾಗಿಯೂ 16.4 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಸತತ ವಿಕೆಟ್ ಕಳೆದುಕೊಳ್ಳುತ್ತಿರುವುದನ್ನು ಕಂಡ ಕಾವ್ಯಾ ಮಾರನ್ ತಾಳ್ಮೆ ಕಳೆದುಕೊಂಡು ಗೊಣಗುತ್ತಾ ಆಟಗಾರರ ವಿರುದ್ಧ ಅಸಾಮಾಧಾನ ಹೊರಹಾಕಿದರು. ಈ ವಿಡಿಯೊ ಎಲ್ಲಡೆ ವೈರಲ್ ಆಗಿದೆ. ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೈದರಾಬಾದ್ ತಂಡ ಸೋತಾಗ ಕಾವ್ಯಾ ಮಾರನ್ ಅವರ ಮುಖ ನೋಡಲು ನಮಗೆ ಬೇಸರವಾಗುತ್ತದೆ ಎಂದು ಹೇಳಿದ್ದರು.
Ruk jao bhai kya kar rahe ho
— ••TAUKIR•• (@iitaukir) April 6, 2025
Normal cricket khel lo ab 🤣🤣
Kavya maran's reactions 🤌🏽🤣 pic.twitter.com/O39QTMNgPc
ಗುಜರಾತ್ ವಿರುದ್ಧದ ಪಂದ್ಯದಲ್ಲಿ 50 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರೆಡ್ಡಿ ಮತ್ತು ಹೆನ್ರಿಚ್ ಕ್ಲಾಸೆನ್ ಸಣ್ಣ ಜತೆಯಾಟವೊಂದನ್ನು ನಡೆಸಿ ತಂಡದ ಮೊತ್ತವನ್ನು ನೂರಕ್ಕೇರಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 50 ರನ್ ಜತೆಯಾಟ ನಡೆಸಿತು. ನಿತೀಶ್ ರೆಡ್ಡಿ(31) ರನ್ ಬಾರಿಸಿದರೆ, ಕ್ಲಾಸೆನ್ 19 ಎಸೆತಗಳಿಂದ 27 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ನಾಯಕ ಪ್ಯಾಟ್ ಕಮಿನ್ಸ್ 9 ಎಸೆತಗಳಿಂದ ಅಜೇಯ 22(3 ಬೌಂಡರಿ, 1 ಸಿಕ್ಸರ್) ರನ್ ಬಾರಿಸಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು.
ಹಾಲಿ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ 286 ರನ್ ಪೇರಿಸಿ ಭರ್ಜರಿ ಗೆಲುವು ಸಾಧಿಸಿದ್ದ ಹೈದರಾಬಾದ್ ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ಆ ಬಳಿಕ ಆಡಿದ 4 ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ತಂಡದಲ್ಲಿ ಸ್ಫೋಟಕ ಬ್ಯಾಟರ್‌ಗಳ ಪಡೆಯೇ ಇದ್ದರೂ ಯಾರೊಬ್ಬರು ಸಿಡಿಯುತ್ತಿಲ್ಲ. ತಂಡದ ಈ ಪ್ರದರ್ಶನ ಸಹಜವಾಗಿಯೇ ಮಾಲಕಿ ಕಾವ್ಯಾ ಮಾರನ್‌ಗೆ ಬೇಸರ ತರಿಸಿದೆ.