ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake Doctor: ಗ್ಯಾಸ್‌ ಟ್ರಬಲ್‌ ಎಂದವನಿಗೆ ಹಾರ್ಟ್‌ ಸರ್ಜರಿ; ನಕಲಿ ವೈದ್ಯನಿಂದ ಒಂದಲ್ಲ.. ಎರಡಲ್ಲ ಬರೋಬ್ಬರಿ 15 ಶಸ್ತ್ರಚಿಕಿತ್ಸೆ

Fake Doctor: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ನಕಲಿ ವೈದ್ಯರೊಬ್ಬರುಹೃದ್ರೋಗ ತಜ್ಞರಂತೆ ನಟಿಸಿ ಮಿಷನರಿ ಆಸ್ಪತ್ರೆಯಲ್ಲಿ ಹೃದಯದ ಸರ್ಜರಿ ಮಾಡಿದ್ದಾರೆ. ಹೊಟ್ಟೆ ಉರಿ - ಗ್ಯಾಸ್ಟ್ರಿಕ್ ಎಂದು ಬಂದವಸಿಗೆ ಹಾರ್ಟ್ ಆಪರೇಶ್ ಮಾಡಿದ್ದು, ಈ ನಕಕಿ ವೈದ್ಯ ಮಾಡಿದ ಎಡವಟ್ಟಿನಿಂದ ಚಿಕಿತ್ಸೆಗೆ ಎಂದು ಬಂದವನು ಸಾವನ್ನಪ್ಪಿದ್ದಾನೆ. ಈ ಹಿಂದೆಯೂ ಸಾಕಷ್ಟು ಜನರಿಗೆ ಈ ನಕಲಿ ವೈದ್ಯ ಚಿಕಿತ್ಸೆ ನೀಡಿದ್ದು, 15 ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾನೆ.

ನಕಲಿ ವೈದ್ಯನಿಂದ ಒಂದಲ್ಲ.. ಎರಡಲ್ಲ ಬರೋಬ್ಬರಿ 15 ಸರ್ಜರಿ

ನಕಲಿ ವೈದ್ಯ ನರೇಂದ್ರ ಯಾದವ್‌

Profile Sushmitha Jain Apr 7, 2025 1:54 PM

ಭೋಪಾಲ್‌: ಇತ್ತೀಚಿನ ದಿನಗಳಲ್ಲಿ ರೋಗಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಜನರ ಭಯವನ್ನೇ ಬಂಡವಾಳವಾಗಿಸಿ ಅವರನ್ನು ದೋಚುವ ನಕಲಿ ವೈದ್ಯರ ಹಾವಳಿಯೂ ವಿಪರೀತ ಹೆಚ್ಚಿದೆ. ಕರ್ನಾಟಕದಲ್ಲಿಯೂ 2023ರ ಸೆಪ್ಟೆಂಬರ್‌ನಿಂದ 2024ರ ಡಿಸೆಂಬರ್‌ ವರೆಗೆ ಸುಮಾರು 950ಕ್ಕೂ ಹೆಚ್ಚು ನಕಲಿ ವೈದ್ಯರ(Fake Doctor)ನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿತ್ತು. ಆದರೆ, ಇಲ್ಲೊಬ್ಬ ನಕಲಿ ವೈದ್ಯ ತಾನು ಲಂಡನ್‌ನ ಪ್ರತಿಷ್ಠಿತ(London-based cardiologist) ವೈದ್ಯ ಎಂದು ಜನರನ್ನು ಯಾಮಾರಿಸಿ ಹಲವರ ಸಾವಿಗೆ ಕಾರಣವಾಗಿದ್ದಾನೆ. ಈ ಸಾವುಗಳು ಸಂಭವಿಸಿದ್ದು ಮಧ್ಯಪ್ರದೇಶದ ಪ್ರತಿಷ್ಠಿತ ಮಿಷನ್‌ ಆಸ್ಪತ್ರೆಯಲ್ಲಿ.

ಇಲ್ಲಿ ಡಿಸೆಂಬರ್ 2024 ಮತ್ತು ಫೆಬ್ರವರಿ 2025ರ ನಡುವೆ ನರೇಂದ್ರ ಯಾದವ್‌ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ಲಂಡನ್‌ ಮೂಲದ ಹೃದ್ರೋಗ ತಜ್ಞ ಜಾನ್‌ ಕ್ಯಾಮ್‌ ಎಂದು ಹೇಳಿಕೊಂಡು ಕಳೆದ ಎರಡು ತಿಂಗಳ ಅವಧಿಯಲ್ಲಿ ವ್ಯಕ್ತಿಯೊಬ್ಬ 15 ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾನೆ. ತಪ್ಪು ಚಿಕಿತ್ಸೆಯಿಂದಾಗಿ ಹಲವು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಅವನ ವಿರುದ್ಧ ದೂರು ದಾಖಲಾದ ನಂತರ ನಕಲಿ ವೈದ್ಯ ಪರಾರಿಯಾಗಿದ್ದಾನೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ಫೆಬ್ರವರಿಯಲ್ಲಿ ಸಲ್ಲಿಸಲಾದ ದೂರಿನ ಪ್ರಕಾರ, ಆ ವ್ಯಕ್ತಿ ರೋಗಿಗಳ ಹಾಗೂ ಅವರ ಕುಟುಂಬಸ್ಥರ ದಾರಿ ತಪ್ಪಿಸಲು UK ಮೂಲದ ಪ್ರಸಿದ್ಧ ಹೃದ್ರೋಗ ತಜ್ಞ ಜಾನ್ ಕ್ಯಾಮ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಈತನ ನಿರ್ಲಕ್ಷ್ಯದಿಂದಾಗಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಮುಖೇಶ್ ಜೈನ್ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ವಿಕ್ರಮ್ ಚೌಹಾಣ್ ಅವರು ದೃಢಪಡಿಸಿದ್ದಾರೆ.

ಆಂಜಿಯೋಪ್ಲ್ಯಾಸ್ಟಿಗೆಂದು ಬಂದವನಿಗೆ ಹೃದಯಾಘಾತ:

63 ವರ್ಷದ ರಹೀಸಾ ಅವರನ್ನು ಜನವರಿ 16ರಂದು ಆಂಜಿಯೋಪ್ಲ್ಯಾಸ್ಟಿ ಮಾಡಲಾಗಿತ್ತು. ಈ ಸಮಯದಲ್ಲಿ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ವೆಂಟಿಲೇಟರ್ ಬೆಂಬಲದಲ್ಲಿ ಉಸಿರಾಡುತ್ತಿದ್ದ ರಹೀಸಾ ಕೆಲ ಸಮಯದ ನಂತರ ನಿಧನರಾದರು. "ಅವರು ಹೃದಯಾಘಾತದಿಂದ ನಿಧನರಾದರು ಎಂದು ನಮಗೆ ಹೇಳಿದ್ದರು, ಆದ್ದರಿಂದ ನಾವು ಮರಣೋತ್ತರ ಪರೀಕ್ಷೆ ನಡೆಸಲು ಹೋಗಲಿಲ್ಲ. ನ್ಯೂಸ್‌ ನೋಡಿದ ಬಳಿಕ ನಕಲಿ ವೈದ್ಯ ಶಸ್ತ್ರಚಿಕಿತ್ಸೆ ನಡೆಸಿರುವುದು ತಿಳಿದುಬಂತು" ಎಂದು ಆಕೆಯ ಪುತ್ರ ನಬಿ ಖುರೇಷಿ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ದರೋಡೆ ಮಾಡಲು ಬಂದ ಖದೀಮರನ್ನು ಅಟ್ಟಾಡಿಸಿ ಹಿಡಿದ ಪೆಟ್ರೋಲ್ ಬಂಕ್ ಸಿಬಂದಿ; ವಿಡಿಯೊ ವೈರಲ್

ಗ್ಯಾಸ್‌ ಟ್ರಬಲ್‌ ಎಂದವನಿಗೆ ಹೃದಯದ ಸರ್ಜರಿ:

ಮತ್ತೊಂದು ಪ್ರಕರಣದಲ್ಲಿ, ಮಂಗಲ್ ಸಿಂಗ್ ಎಂಬುವವರನ್ನು ಫೆಬ್ರವರಿ 4 ರಂದು ಗ್ಯಾಸ್‌ ಟ್ರಬಲ್‌ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಆಂಜಿಯೋಗ್ರಫಿ ಮಾಡಿದ್ದು, ಕೂಡಲೇ ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಶಿಫಾರಸು ಮಾಡಲಾಯಿತು. “ಶಸ್ತ್ರಚಿಕಿತ್ಸೆಗೂ ಮೊದಲು ಮತ್ತು ನಂತರ ವೈದ್ಯರು ಮಾತನಾಡಲು ಸಿಗಲೇ ಇಲ್ಲ. ಅವರು ನಮಗೆ ರೂ. 8,000 ಇಂಜೆಕ್ಷನ್ ಖರೀದಿಸಲು ಹೇಳಿದ್ದರು, ಆದರೆ ಅದನ್ನು ತಂದೆಗೆ ನೀಡಲೇ ಇಲ್ಲ. ಶಸ್ತ್ರಚಿಕಿತ್ಸೆಯಾದ ಕೆಲವೇ ಗಂಟೆಗಳ ನಂತರ ಅವರು ನಿಧನರಾದರು" ಎಂದು ಮಂಗಲ್ ಸಿಂಗ್‌ ಪುತ್ರ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ದಾಮೋಹ್‌ ಜಿಲ್ಲಾಧಿಕಾರಿ, “ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ತನಿಖೆ ಪೂರ್ಣಗೊಂಡ ನಂತರವೇ ಮಾಹಿತಿ ದೊರೆಯಲಿದೆ” ಎಂದಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು NHRC ತಂಡವು ಏಪ್ರಿಲ್ 7 ರಿಂದ 9 ರವರೆಗೆ ದಾಮೋಹ್‌ಗೆ ಭೇಟಿ ನೀಡಲಿದೆ.