ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Police Transfers: ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ; 55 ಪಿಎಸ್‌ಐಗಳ ವರ್ಗಾವಣೆ

Police Transfers: ಕಾನೂನು ಮತ್ತು ಸುವ್ಯವಸ್ಥೆ ಹಿತದೃಷ್ಟಿಯಿಂದ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಬೆಂಗಳೂರು ಕೇಂದ್ರವಲಯದ ಪೊಲೀಸ್‌ ಮಹಾ ನಿರೀಕ್ಷಕ ಲಾಭೂ ರಾಮ್‌ ಅವರು ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಪೊಲೀಸ್‌ ಇಲಾಖೆಗೆ ಮೇಜರ್‌ ಸರ್ಜರಿ; 55 ಪಿಎಸ್‌ಐಗಳ ವರ್ಗಾವಣೆ

Profile Prabhakara R Apr 5, 2025 9:42 PM

ಬೆಂಗಳೂರು: ಪೊಲೀಸ್‌ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್‌ ಸರ್ಜರಿ ಮಾಡಿದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ಬರೋಬ್ಬರಿ 55 ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳನ್ನು(ಸಿವಿಲ್) ವರ್ಗಾವಣೆ (Police Transfers) ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹಿತದೃಷ್ಟಿಯಿಂದ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಆನೇಕಲ್ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀಪ್‌ ಕುಮಾರ್ ಅವರನ್ನು ರಾಮನಗರ ಜಿಲ್ಲೆಯ ಕೋಡಿಹಳ್ಳಿ ಪೊಲೀಸ್ ಠಾಣೆಯ ಖಾಲಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಬನ್ನೇರುಘಟ್ಟ ಠಾಣೆಯ ಸಿದ್ದನಗೌಡ ಜಲಪೂರ ಅವರನ್ನು ಆನೇಕಲ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಜಿಗಣಿ ಠಾಣೆಯ ಶಭಾನಾ ಭಾನು ಯಾಸೀನ್ ಮಾಕಂದಾರ್ ಅವರನ್ನು ಸರ್ಜಾಪುರ ಠಾಣೆಗೆ, ಸರ್ಜಾಪುರ ಠಾಣೆಯ ದುಂಡಪ್ಪ ಬಾರ್ಕಿ ಅವರನ್ನು ಮಾದನಾಯಕನಹಳ್ಳಿ ಠಾಣೆಗೆ, ಸೂರ್ಯನಗರ ಠಾಣೆಯ ಬಸವರಾಜು ಸವಟಗಿ ಅವರನ್ನು ತುಮಕೂರಿನ ನೊಣವಿನಕೆರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.



ಹೊಸಕೋಟೆ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಎಂ.ಗಂಗಪ್ಪ ಅವರನ್ನು ಬೆಂಗಳೂರಿನ ನಂದಗುಡಿ ಠಾಣೆಗೆ, ನಂದಗುಡಿ ಠಾಣೆಯ ವಿ.ಸುಬ್ರಮಣಿ ಅವರನ್ನು ಹೊಸಕೋಟೆ ಸಂಚಾರ ಪೊಲೀಸ್ ಠಾಣೆಗೆ ವರ್ಗಾವರ್ಗಿ ಮಾಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಕೆ.ಜಿ ಪಂಕಜ ಅವರನ್ನು ಬೆಂಗಳೂರಿನ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

ಇನ್ನು ಬೆಂಗಳೂರು ಮಹಿಳಾ ಠಾಣೆಯ ಎಂ.ಚಂದ್ರಕಲಾ ಅವರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ತನಿಖಾಧಿಕಾರಿಯಾಗಿ ವರ್ಗಾವಣೆ ಆಗಿದ್ದು, ದೊಡ್ಡ ಬೆಳವಂಗಲ ಠಾಣೆಯ ವೈ,ಜಿ.ತೀರ್ಥೇಶ್‌ ಅವರು ಕೊರಟಗೆರೆ ಠಾಣೆಗೆ, ಚನ್ನರಾಯಪಟ್ಟಣ ಠಾಣೆಯ ರಾಜಶ್ರೀ ಜಲವಾಡಿ ಕಲ್ಲಪ್ಪ ಅವರು ದೊಡ್ಡ ಬೆಳವಂಗಲ ಠಾಣೆಗೆ ವರ್ಗಾವಣೆಯಾಗಿದ್ದಾರೆ.