ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಗತ್ಯ ವಸ್ತುಗಳ ಬೆಲೆ ಏರಿಕೆ ಬಡವರು ಆರ್ಥಿಕ ಸಂಕಷ್ಟಕ್ಕೆ; ಎಂ.ಪಿ ಮುನಿವೆಂಕಟಪ್ಪ ಆಕ್ರೋಶ

ಪಟ್ಟಣದಲ್ಲಿ ಹಾಲು, ಮೊಸರು, ವಿದ್ಯುತ್, ಟೋಲ್ ಗೇಟ್ ಶುಲ್ಕ, ಇಂಧನ ಸೇರಿದಂತೆ ಜನ ಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಸಿಪಿಎಂ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಭ್ರಷ್ಟರು, ಮತೀಯವಾದಿಗಳೆಂದು ರಾಜ್ಯದಲ್ಲಿ ಅವರಿಗೆ ಅಧಿಕಾರದಿಂದ ದೂರ ನೂಕಿ, ಕಾಂಗ್ರೆಸ್ ನವರ ಮೇಲೆ ವಿಶ್ವಾಸ ಇಟ್ಟು ಆಡಳಿತ ಚುಕ್ಕಾಣಿ ಕೊಟ್ಟರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಬಡವರು ಆರ್ಥಿಕ ಸಂಕಷ್ಟಕ್ಕೆ

Profile Ashok Nayak Apr 6, 2025 8:28 AM

ಬಾಗೇಪಲ್ಲಿ: ರಾಜ್ಯ ಕಾಂಗ್ರೆಸ್ ಸರಕಾರವು ಬಡವರನ್ನು ಉದ್ಧಾರ ಮಾಡುತ್ತೇವೆಂದು ಅಧಿಕಾರಿ ಪಡೆದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಬಡವರನ್ನು ವಂಚಿಸುವ ಕೆಲಸ ಮಾಡುತ್ತಿದೆ. ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ ಮುನಿವೆಂಕಟಪ್ಪ ಆಕ್ರೋಶ ವ್ಯಕ್ತ ಪಡಿಸಿದರು. ಪಟ್ಟಣದಲ್ಲಿ ಹಾಲು, ಮೊಸರು, ವಿದ್ಯುತ್, ಟೋಲ್ ಗೇಟ್ ಶುಲ್ಕ,ಇಂಧನ ಸೇರಿದಂತೆ ಜನ ಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶುಕ್ರವಾರ ಸಿಪಿಎಂ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಭ್ರಷ್ಟರು, ಮತೀಯವಾದಿಗಳೆಂದು ರಾಜ್ಯದಲ್ಲಿ ಅವರಿಗೆ ಅಧಿಕಾರದಿಂದ ದೂರ ನೂಕಿ, ಕಾಂಗ್ರೆಸ್ ನವರ ಮೇಲೆ ವಿಶ್ವಾಸ ಇಟ್ಟು ಆಡಳಿತ ಚುಕ್ಕಾಣಿ ಕೊಟ್ಟರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಮತ್ತು ಕೇಂದ್ರ ಬಿಜೆಪಿ ಸರಕಾರಗಳ ವಿರುದ್ಧ ಕಟುವಾಗಿ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: Chikkaballapur News: ಈಡಿಗ ಸಮುದಾಯದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ಬ್ಯಾಗ್ ವಿತರಣೆ ಕಾರ್ಯಕ್ರಮ

ಲೀಟರ್ ಹಾಲಿಗೆ 4 ರೂ. ಹೆಚ್ಚಳ
ರಾಜ್ಯ ಸರಕಾರವು ಏಪ್ರಿಲ್ ತಿಂಗಳಿನಿಂದ ಪ್ರತಿ ಲೀಟರ್ ಹಾಲಿಗೆ 4 ರೂ.ಗಳನ್ನು ಹೆಚ್ಚಿಸಿದೆ. ಇದರಿಂದಾಗಿ ಗ್ರಾಹಕ ಹಾಲನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಹೆಚ್ಚಳದ ದರದಲ್ಲಿ ರೈತನಿಗೆ ನೀಡುತ್ತಿಲ್ಲ. ಹಾಗಾಗಿ ಒಂದೆಡೆ ಹಾಲು ಉತ್ಪಾದಕನಿಗೂ, ಖರೀದಿ ಮಾಡುವವ ನಿಗೂ ಮೋಸ ಮಾಡುತ್ತಿರುವುದು ಖಂಡನೀಯ. ನಾವು ರೈತರ ಪರ ಎಂದ ಕಾಂಗ್ರೆಸ್ಸಿಗರು ರೈತರ ಕೊಳವೆ ಬಾವಿಗಳ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡುವ ಬದಲು ಸ್ಪಾಟ್ ಮೀಟರ್ ಗಳನ್ನು ಅಳವಡಿಸಿ ಪ್ರೀಪೈಡ್ ರೀತಿಯಲ್ಲಿ ದುಡ್ಡು ಕಟ್ಟಿದವನಿಗೆ ವಿದ್ಯುತ್ ಎಂದು ರೈತನಿಗೆ ಮೋಸ ಮಾಡಲು ಹೊರಟಿದ್ದಾರೆ. ವಿದ್ಯುತ್ ನ ಪ್ರತಿ ಯುನಿಟ್ ಗೆ 36 ಪೈಸೆ ಹೆಚ್ಚಳ ಮಾಡಿದ್ದಾರೆ. ಇಂಧನ ಸೇರಿದಂತೆ ಎಲ್ಲ ಅಗತ್ಯತೆಗಳ ಸೇವೆ,ಸರಕುಗಳ ಮೇಲೆ ದರ ಏರಿಕೆಯನ್ನು ಮಾಡಿ ಬಡ,ಮಧ್ಯಮ ವರ್ಗದವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡ ಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಬಿಜಿಪಿಯವರಿಗೆ ನೈತಿಕತೆ ಇಲ್ಲ
ಕೇಂದ್ರ ಬಿಜೆಪಿ ಸರಕಾರವು ಜನವಿರೋಧಿ,ಕಾರ್ಮಿಕ ವಿರೋಧಿ,ರೈತ ವಿರೋಧಿ, ಬಡ-ಮದ್ಯಮ ವರ್ಗದ ದುಡಿಯುವ ವರ್ಗಗಳ ವಿರೋಧಿ ನಿಲುವುಗಳನ್ನು ಅನುಸರಿಸುತ್ತಿದೆ. ರೈತರಿಂದ ಜಮೀನುಗಳನ್ನು ಕಿತ್ತುಕೊಂಡು ಕಾರ್ಪೋರೇಟ್ ಕಂಪನಿಗಳಿಗೆ ಧಾರೆ ಎರೆಯು ತ್ತಿದೆ. ಟೋಲ್ ಶುಲ್ಕದಲ್ಲಿ ಶೇ.5 ರಷ್ಟು ಏರಿಕೆ ಮಾಡಲಾಗಿದೆ,ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ. ರೂಪಾಯಿ ಮೌಲ್ಯದವು ಡಾಲರ್ ಎದುರಿಗೆ ಮಖಾಡೆ ಮಲಗಿದೆ. ಇವೆಲ್ಲ ವೂ ರಾಜ್ಯ ಬಿಜೆಪಿ ನಾಯಕರಿಗೆ ಕಾಣುವುದಿಲ್ಲವೇ?. ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತೇವೆಂದು ಯಡಿಯೂರಪ್ಪ, ಅವರ ಮಗ ವಿಜೇಂದ್ರರವರು ಹೊರಟಿದ್ದಾರೆ. ಹೋರಾಟ ಮಾಡುತ್ತೇವೆ ಎನ್ನುವ ನೈತಿಕತೆ ನಿಮಗಿಲ್ಲ.‌ ನಿಮ್ಮ ಕೇಂದ್ರ ಸರಕಾರವು ಮಾಡು ತ್ತಿರುವ  ಜನವಿರೋಧಿ ನೀತಿಗಳನ್ನು ನಿಯಂತ್ರಿಸಿ ಎಂದು ಬಿಜೆಪಿಗರ ವಿರುದ್ಧ ಹರಿಹಾಯ್ದರು.

ವೇಳೆ ಸಿಪಿಎಂ ತಾಲೂಕು ಕಾರ್ಯದರ್ಶಿ ಎಂ.ಎನ್ ರಘುರಾಮರೆಡ್ಡಿ,ಮುಖಂಡರಾದ ಚನ್ನರಾಯಪ್ಪ,ಬಿಳ್ಳೂರು ನಾಗರಾಜ್,ಕೊಲಿಂಪಲ್ಲಿ ಚಲಪತಿ, ವಾಲ್ಮೀಕಿ ಅಶ್ವತ್ಥಪ್ಪ, ಬಿ.ವಿ.ನರಸಿಂಹಮೂರ್ತಿ, ಮದಕರಿ ಸುರೇಶ್, ಎಸ್ ಎಫ್ ಐ ಸೋಮಶೇಖರ್, ಚೆಂಚು ರಾಯನಪಲ್ಲಿ ಕೃಷ್ಣಪ್ಪ,ರಾಮಾಂಜಿ, ವೆಂಕಟರಾಮಪ್ಪ,ಪಕೀರಪ್ಪ,ಆಗಟಿಮಡಕ ಕೃಷ್ಣಪ್ಪ ಮತ್ತಿತರರು ಇದ್ದರು‌.