IPL 2025 Points Table: ಡೆಲ್ಲಿಗೆ ಅಗ್ರಸ್ಥಾನ, ಏಳಕ್ಕೇರಿದ ರಾಜಸ್ಥಾನ್
ಪಂಜಾಬ್ ಸೋಲಿನಿಂದ ಆರ್‌ಸಿಬಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿದೆ. ಚೆನ್ನೈ ವಿರುದ್ಧ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ 7ನೇ ಸ್ಥಾನಕ್ಕೇರಿದೆ. ಈ ಹಿಂದೆ 9ನೇ ಸ್ಥಾನದಲ್ಲಿತ್ತು. ಸೋತ ಚೆನ್ನೈ 9ನೇ ಸ್ಥಾನಕ್ಕೆ ಕುಸಿದಿದೆ. 4 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಕಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಕೊನೆಯ ಸ್ಥಾನಿಯಾಗಿದೆ.


ಬೆಂಗಳೂರು: ಶನಿವಾರ ನಡೆದಿದ್ದ ಡಬಲ್ ಹೆಡರ್ ಐಪಿಎಲ್(IPL 2025) ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ದಿನದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧ 25 ರನ್ ಅಂತರದಿಂದ ಗೆದ್ದರೆ, ರಾತ್ರಿಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ 50 ರನ್ ಗೆಲುವು ಸಾಧಿಸಿತ್ತು. ಹ್ಯಾಟ್ರಿಕ್ ಗೆಲುವು ಸಾಧಿಸಿದ ಡೆಲ್ಲಿ ಅಗ್ರಸ್ಥಾನಕ್ಕೇರಿದರೆ, ಈ ಹಿಂದೆ ಅಗ್ರಸ್ಥಾನಿಯಾಗಿದ್ದ ಪಂಜಾಬ್ ಸೋಲಿ ನಿಂದ 4ನೇ ಸ್ಥಾನಕ್ಕೆ ಕುಸಿದಿದೆ.
ಪಂಜಾಬ್ ಸೋಲಿನಿಂದ ಆರ್‌ಸಿಬಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿದೆ. ಚೆನ್ನೈ ವಿರುದ್ಧ ಗೆದ್ದ ರಾಜಾಸ್ಥಾನ್ ರಾಯಲ್ಸ್ ತಂಡ 7ನೇ ಸ್ಥಾನಕ್ಕೇರಿದೆ. ಈ ಹಿಂದೆ 9ನೇ ಸ್ಥಾನ ದಲ್ಲಿತ್ತು. ಸೋತ ಚೆನ್ನೈ 9ನೇ ಸ್ಥಾನಕ್ಕೆ ಕುಸಿದಿದೆ. 4 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಕಂಡಿರುವ ಸನ್‌ರೈಸರ್ಸ್ ಹೈದರಾಬಾದ್ ಕೊನೆಯ ಸ್ಥಾನಿಯಾಗಿದೆ.
IPL 2025 POINTS TABLE. 📈
— Mufaddal Vohra (@mufaddal_vohra) April 5, 2025
- DC the only unbeaten team. 🔥 pic.twitter.com/R6OkG6yzQs
ಆರೆಂಜ್ ಕ್ಯಾಪ್ ವಿಭಾಗದಲ್ಲಿ ನಿಕೋಲಸ್ ಪೂರನ್( 201) ಮತ್ತು ಸಾಯಿ ಸುದರ್ಶನ್(186) ಮಧ್ಯೆ ಪೈಪೋಟಿ ಇದೆ. ಪರ್ಪಲ್ ಕ್ಯಾಪ್ ಸದ್ಯ ನೂರ್ ಅಹ್ಮದ್ ಬಳಿಯೇ ಮುಂದುವರಿದಿದೆ. ಅವರು 10 ವಿಕೆಟ್ ಕಿತ್ತಿದ್ದಾರೆ. ಮಿಚೆಲ್ ಸ್ಟಾರ್ಕ್ 9 ವಿಕೆಟ್ ಕಿತ್ತು ದ್ವಿತೀಯ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IPL 2025: ಚೆನ್ನೈ ಸೂಪರ್ ಕಿಂಗ್ಸ್‌ನ ಹ್ಯಾಟ್ರಿಕ್ ಸೋಲಿಗೆ ಕಾರಣ ತಿಳಿಸಿದ ಋತುರಾಜ್ ಗಾಯಕ್ವಾಡ್!
ರಾಜಸ್ಥಾನ್ ಆರಂಭಿಕ ಆಟಗರ ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಅರ್ಧಶತಕದಿಂದಾಗಿ 4 ವಿಕೆಟಿಗೆ 205 ರನ್ನುಗಳ ದೊಡ್ಡ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು.
ದಿನದ ಮೊದಲ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಭರ್ಜರಿ ಅರ್ಧ ಶತಕದ ಸಹಾಯದಿಂದ (51 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ) 77 ರನ್ ಗಳಿಸುವ ಮೂಲಕ ಡೆಲ್ಲಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 183 ರನ್ ಗಳಿಸಿತು. 184 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ 20 ಒವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲೊಪ್ಪಿಕೊಂಡಿತು.