Tumkur News: ಏ. 11ರಂದು ತುಮಕೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಸೇವಾದೀಕ್ಷಾ, ಸಾಧಕರಿಗೆ ಸನ್ಮಾನ
Tumkur News: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಏ. 11ರಂದು ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಸೇವಾದೀಕ್ಷಾ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತ ವಿವರ ಇಲ್ಲಿದೆ.


ತುಮಕೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಏ. 11ರಂದು ನಗರದ (Tumkur News) ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಸೇವಾದೀಕ್ಷಾ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಾತನಾಡಿದ ಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್. ಪರಮೇಶ್, ಹಾನಗಲ್‌ನ ಶ್ರೀ ಕುಮಾರ ಸ್ವಾಮೀಜಿ ಅವರು 1904ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ಸ್ಥಾಪಿಸಿದರು. ಐದು ವರ್ಷಕ್ಕೊಮ್ಮೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಆಯ್ಕೆಯಾದ ಪದಾಧಿಕಾರಿಗಳು ಮಹಾಸಭೆಯ ಸೇವಾದೀಕ್ಷೆ ಪಡೆದು ಕಾಯಕನಿರತವಾಗುವುದು ಮಹಾಸಭೆಯ ಪರಂಪರೆ. ಅದರಂತೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಹಾಸಭೆಯ ಜಿಲ್ಲಾ ಸಮಿತಿಗೆ ಆಯ್ಕೆಯಾದ ಪದಾಧಿಕಾರಿಗಳು ಸೇವಾದೀಕ್ಷೆ ಪಡೆಯುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸಚಿವ ವಿ. ಸೋಮಣ್ಣ ಉಪಸ್ಥಿತಿಯಲ್ಲಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಕೆರೆಗೋಡಿ ರಂಗಾಪುರದ ಗುರುಪರದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು, ಮಹಾಸಭಾದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಮತ್ತಿತರ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.
ಸೇವಾದೀಕ್ಷಾ ಕಾರ್ಯಕ್ರಮಕ್ಕೆ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಡಾ. ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ, ಷಡಕ್ಷರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿಗಳು ಆಗಮಿಸುವರು ಎಂದರು.
ಈ ವೇಳೆ 18 ಮಂದಿ ಸಾಧಕರಿಗೆ ಸನ್ಮಾನ, ವಿವಿಧ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸಮರ್ಪಣೆ ಮಾಡಲಾಗುವುದು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಶಾಸಕರಾದ ಷಡಕ್ಷರಿ, ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವರಾದ ಎಸ್. ಶಿವಣ್ಣ, ಜೆ.ಸಿ. ಮಾಧುಸ್ವಾಮಿ, ಮಾಜಿ ಶಾಸಕರಾದ ನಂಜಾಮರಿ, ಕಿರಣ್ ಕುಮಾರ್ ಮತ್ತಿತರ ಮುಖಂಡರು ಭಾಗವಹಿಸುವರು ಹೇಳಿದರು.
ಈ ಸುದ್ದಿಯನ್ನೂ ಓದಿ | New Aadhaar App: ಫೇಸ್ ಐಡಿ, ಕ್ಯೂಆರ್ ಕೋಡ್ ಇರುವ ಹೊಸ ಆಧಾರ್ ಆಪ್ ರಿಲೀಸ್- ಏನಿದರ ವಿಶೇಷತೆ?
ಸುದ್ದಿಗೋಷ್ಟಿಯಲ್ಲಿ ಸಭಾದ ಉಪಾಧ್ಯಕ್ಷ ಎಲ್.ಪಿ. ರವಿಶಂಕರ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಅಪ್ಪಾಜಪ್ಪ, ಖಜಾಂಚಿ ಆರ್.ಬಿ. ಜಯಣ್ಣ, ಕಾರ್ಯದರ್ಶಿ ತಳವಾರಹಳ್ಳಿ ಟಿ.ಎಂ. ವಿಜಯಕುಮಾರ್, ಟಿ.ಎಸ್. ರುದ್ರಪ್ರಸಾದ್, ಯುವ ಘಟಕ ಅಧ್ಯಕ್ಷ ಡಾ. ದರ್ಶನ್ ಕೆ.ಎಲ್, ಮಹಿಳಾ ಘಟಕ ಅಧ್ಯಕ್ಷೆ ಮಮತಾ ದಿವಾಕರ್, ತಾಲೂಕು ಅಧ್ಯಕ್ಷ ಎನ್. ಜಯಣ್ಣ, ಕಾರ್ಯದರ್ಶಿ ಸದಾಶಿವಯ್ಯ, ವಿಶ್ವನಾಥ್, ಸತ್ಯಮಂಗಲ ಜಗದೀಶ್, ಉಮಮಹೇಶ್, ಡಿ.ಎನ್. ಯೋಗೀಶ್ವರ್, ಶ್ರೀಧರ್, ರಾಜಶೇಖರ್ ಇದ್ದರು.