Road Accident: ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದವರ ಮೇಲೆ ಹರಿದ ಬಸ್, ಇಬ್ಬರು ಬಲಿ
ಮೂವರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ದಾರಿ ಮಧ್ಯೆ ಖಾಸಗಿ ಬಸ್ ಪಾದಯಾತ್ರಿಗಳ ಮೇಲೆ ಹರಿದಿದೆ. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಂಡ್ಯ (Mandya news) ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಆನಗೋಳು ಗ್ರಾಮದ ಸುರೇಶ್ (60), ಕುಮಾರ್ (55) ಮೃತ ದುರ್ದೈವಿಗಳು.

ಸಾಂದರ್ಭಿಕ ಚಿತ್ರ

ಹಾಸನ: ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ (Dharmasthala) ಹೋಗುತ್ತಿದ್ದವರ ಮೇಲೆ ಖಾಸಗಿ ಬಸ್ ಹರಿದ (Road Accident) ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ (Hassan news) ತಾಲೂಕಿನ ಕೆಂಚಟ್ಟಹಳ್ಳಿ ಬಳಿ ನಡೆದಿದೆ. ಮಂಡ್ಯ (Mandya news) ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಆನಗೋಳು ಗ್ರಾಮದ ಸುರೇಶ್ (60), ಕುಮಾರ್ (55) ಮೃತ ದುರ್ದೈವಿಗಳು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ದಿನೇಶ್ ಎಂಬುವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ದಾರಿ ಮಧ್ಯೆ ಖಾಸಗಿ ಬಸ್ ಪಾದಯಾತ್ರಿಗಳ ಮೇಲೆ ಹರಿದಿದೆ. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆತಂಕಗೊಂಡ ಬಸ್ ಚಾಲಕ ಬಸ್ಸನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇದೀಗ ಬೆಂಗಳೂರು, ಮೈಸೂರು, ಮಂಡ್ಯ ಮುಂತಾದ ಕಡೆಗಳಿಂದ ಧರ್ಮಸ್ಥಳದತ್ತ ಪಾದಯಾತ್ರಿಗಳು ತೆರಳುವ ಸಮಯವಾಗಿದೆ. ಈ ಮಾರ್ಗದಲ್ಲಿ ಎಚ್ಚರದಿಂದ ನಡೆಯುವಂತೆ ಹಾಗೂ ವಾಹನ ಚಲಾಯಿಸುವಂತೆ ಪೊಲೀಸರು ಎಚ್ಚರಿಸಿದ್ದಾರೆ.
ಜೆಡಿಎಸ್ ಮುಖಂಡನ ಕಾರು ಅಪಘಾತ, ಮಹಿಳೆ ಸಾವು, ಇಬ್ಬರಿಗೆ ಗಾಯ
ತುಮಕೂರು: ತುಮಕೂರು ಜಿಲ್ಲೆಯ ಜೆಡಿಎಸ್ ಮುಖಂಡರೊಬ್ಬರ ಕಾರು ಅಪಘಾತಕ್ಕೀಡಾಗಿದ್ದು, ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಜೆಡಿಎಸ್ ಮುಖಂಡ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಸಂಜೆ ಆರು ಗಂಟೆಗೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗೇಟ್ ಸಮೀಪ ಆಕ್ಸಿಡೆಂಟ್ ಸಂಭವಿಸಿದೆ.
ಹೊಸದಾಗಿ ಖರೀದಿಸಿದ್ದ ಕಾರಿನಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದ ಕುಟುಂಬ ಸದಸ್ಯರು ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಕಾರು ಅಪಘಾತಕ್ಕೀಡಾಗಿದೆ. ಒಬ್ಬ ಮಹಿಳೆ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಗಂಡ ಹೆಂಡತಿ ಗಂಭೀರ ಗಾಯಗೊಂಡಿದ್ದು, ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ. ಪಾವಗಡದ ಸ್ಥಳೀಯ ಜೆಡಿಎಸ್ ಮುಖಂಡ ಶಿವಪ್ಪ ನಾಯಕ ಹಾಗೂ ಅವರ ಧರ್ಮಪತ್ನಿ ಗಂಭೀರವಾಗಿ ಗಾಯಗೊಂಡವರು. ಮತ್ತೊಬ್ಬ ಮಹಿಳೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದು, ಅವರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ಮಾಡುತ್ತಿದ್ದಾರೆ.
ಪಾವಗಡ ಜೆಡಿಎಸ್ ಮುಖಂಡ ಶಿವಪ್ಪ ಕೆಲವು ದಿನಗಳ ಹಿಂದಷ್ಟೇ ಹೊಸ ಕಾರು ಖರೀದಿಸಿದ್ದರು. ಅದರಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದಾರೆ. ಹೊಸ ಕಾರನ್ನು ಡೆಲಿವರಿ ಕೊಡುವಾಗ ಕಟ್ಟುವ ರಿಬ್ಬನ್ ಕೂಡ ತೆಗೆದಿರಲಿಲ್ಲ. ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ನೀರಿನ ಸಂಪ್‌ಗೆ ಗುದ್ದಿದ್ದಾರೆ. ಸಿಮೆಂಟ್‌ನಿಂದ ನಿರ್ಮಿಸಲಾದ ನೀರಿನ ತೊಟ್ಟಿಗೆ ಡಿಕ್ಕಿ ಹೊಡೆದ ವೇಳೆ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆ ಕಾರಿನ ಗಾಜಿನಿಂದ ಸೀದಾ ನೀರಿನ ತೊಟ್ಟಿಯೊಳಗೆ ಬಿದ್ದಿದ್ದಾರೆ.
ಗಾಯಗೊಂಡು ನೀರಿನ ತೊಟ್ಟಿಗೆ ಬಿದ್ದ ಮಹಿಳೆ ಮೇಲೆ ಬರಲಾಗದೇ ಅಲ್ಲಿಯೇ ಸಾವಿಗೀಡಾಗಿದ್ದಾರೆ. ಶಿವಪ್ಪ ಅವರ ಕಾಲು ಮುರಿದುದರಿಂದ ತೊಟ್ಟಿಗೆ ಬಿದ್ದ ಮಹಿಳೆಯ ರಕ್ಷಣೆ ಮಾಡುವುದಕ್ಕೂ ಸಾಧ್ಯವಾಗಿಲ್ಲ. ಅವರ ಪತ್ನಿಯೂ ಗಾಯಗೊಂಡಿದ್ದಾರೆ. ಸ್ಥಳೀಯರು ಬಂದು ನೋಡುವ ವೇಳೆಗೆ ಮಹಿಳೆ ತೊಟ್ಟಿಯಲ್ಲಿ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಇಬ್ಬರು ಗಾಯದಿಂದ ನರಳುತ್ತಿದ್ದರು. ನಂತರ ಸ್ಥಳೀಯರ ಸಹಾಯದೊಂದಿಗೆ ಗಾಯಾಳುಗಳಾದ ಶಿವಪ್ಪ ನಾಯಕ ಮತ್ತು ಅವರ ಪತ್ನಿಯನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪ್ರಕರಣ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: BY Vijayendra: ಉದಯಗಿರಿ ಹಿಂಸಾಚಾರ ಖಂಡಿಸಿ ಬಿಜೆಪಿಯಿಂದ ನಾಳೆ ಮೈಸೂರು ಚಲೋ: ಬಿವೈ ವಿಜಯೇಂದ್ರ